ದಸರಾ ಧರ್ಮಸಮ್ಮೇಳನಕ್ಕೆ ಹರಿದು ಬರುತ್ತಿರುವ ಜನಸಾಗರ

7

ದಸರಾ ಧರ್ಮಸಮ್ಮೇಳನಕ್ಕೆ ಹರಿದು ಬರುತ್ತಿರುವ ಜನಸಾಗರ

Published:
Updated:
Deccan Herald

ಲಕ್ಷ್ಮೇಶ್ವರ: ಅ.10ರಿಂದ ಇಲ್ಲಿ ನಡೆಯುತ್ತಿರುವ ರಂಭಾಪುರಿ ಶ್ರೀಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನಕ್ಕೆ ನಿತ್ಯ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ.ಸಮ್ಮೇಳನವು ಅ.19ರಂದು ಸಮಾರೋಪಗೊಳ್ಳಲಿದೆ.

ಲಕ್ಷ್ಮೇಶ್ವರ ಸುತ್ತಮುತ್ತಲಿನ ಗೊಜನೂರು, ಅಡರಕಟ್ಟಿ, ರಾಮಗಿರಿ, ಬಸಾಪುರ, ಮಂಜಲಾಪುರ, ಮಾಗಡಿ, ಯಳವತ್ತಿ, ಯತ್ನಳ್ಳಿ, ಶಿಗ್ಲಿ, ದೊಡ್ಡೂರು, ಸೂರಣಗಿ, ಬಾಲೆಹೊಸೂರು ಗ್ರಾಮಗಳಿಂದ ಭಕ್ತರು ಈ ಸಮ್ಮೇಳನದಲ್ಲಿ ಭಾಗವಹಿಸಿ, ಭಕ್ತಿ ಸಮರ್ಪಿಸುತ್ತಿದ್ದಾರೆ.  ಧಾರವಾಡ ಜಿಲ್ಲೆಯ ಕುಂದಗೋಳ, ಹರ್ಲಾಪುರ, ಕಳಸ, ಸಂಕ್ಲಿಪೂರ, ಗುಡಗೇರಿ, ಪಶುಪತಿಹಾಳ, ಹಾವೇರಿ ಜಿಲ್ಲೆಯ ಹೆಸರೂರ, ಸವಣೂರು, ಯಲವಗಿ, ಹೂವಿನಶಿಗ್ಲಿ, ಕಡಕೋಳ, ಗೋವನಾಳ ಗ್ರಾಮಗಳಿಂದ ಸಾವಿರಾರು ಜನರು ಟ್ರ್ಯಾಕ್ಟರ್, ಟಂಟಂ, ದ್ವಿಚಕ್ರ ವಾಹನಗಳಲ್ಲಿ ಸಮಾರಂಭಕ್ಕೆ ಬರುತ್ತಿದ್ದಾರೆ. ದಾವಣಗೆರೆ, ಬಾಳೆಹೊನ್ನೂರು, ಹುಬ್ಬಳ್ಳಿ, ಕಲಘಟಗಿ, ರಾಣೆಬೆನ್ನೂರು, ಹಾವೇರಿ, ಗದಗದಿಂದಲೂ ನಿತ್ಯ ಜನರು ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಜನಸಾಗರದಿಂದಾಗಿ ಸಂಜೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿರುತ್ತದೆ. ಬಂದ ಭಕ್ತರಿಗೆ ವ್ಯವಸ್ಥಿತವಾಗಿ ಪ್ರಸಾದ ವಿತರಣೆಯನ್ನು ನೂರಾರು ಸ್ವಯಂ ಸೇವಕರು ಮಾಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !