ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ

7

ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ

Published:
Updated:
Deccan Herald

ಲಕ್ಷ್ಮೇಶ್ವರ: ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಅ.10ರಿಂದ 19ರ ವರೆಗೆ ಪಟ್ಟಣದಲ್ಲಿ ನಡೆಯಲಿದೆ.

ವೀರಶೈವ ಪಂಚ ಪೀಠಗಳಲ್ಲಿ ಪ್ರಥಮ ಪೀಠವಾಗಿರುವ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠವು ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನಲ್ಲಿದೆ.

ಸೃಷ್ಟಿ ಸೌಂದರ್ಯದ ಭದ್ರಾ ನದಿ ತಟದ ಮಲಯಾಚಲ ತಪೋಭೂಮಿಯಲ್ಲಿ ಜಗದ್ಗುರು ರೇಣುಕಾಚಾರ್ಯರು ಪೀಠವನ್ನು ಸಂಸ್ಥಾಪಿಸಿ, ಪವಿತ್ರ ಗುರು ಪರಂಪರೆ ಬೆಳೆಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಪೀಠ ಪರಂಪರೆಯಲ್ಲಿ 120 ಪರಮಾಚಾರ್ಯರು ಪೀಠಾರೋಹಣ ಮಾಡಿ ಅಧ್ಯಾತ್ಮದ ಕಂಪನ್ನು ವಿಶ್ವದಲ್ಲೆಡೆ ಪಸರಿಸಿದ್ದಾರೆ.

‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂದು ಸಾರಿದ ತ್ರಿಕಾಲ ವಂದನೀಯ ಪರಮಪೂಜ್ಯ ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ದಸರಾ ಸಮ್ಮೇಳನ 45 ವರ್ಷಗಳ ಹಿಂದೆ ಲಕ್ಷ್ಮೇಶ್ವರದಲ್ಲಿ ನಡೆದ ಬಗ್ಗೆ ಇತಿಹಾಸ ಇದೆ.

ಶರನ್ನವರಾತ್ರಿ ಹತ್ತು ದಿನಗಳ ಹಬ್ಬ. ಶಕ್ತಿ ಆರಾಧನೆಯ ನಾಡಹಬ್ಬ ಆಗಿದೆ. ಶಿವಶಕ್ತಿಯಿಂದ ಈ ಜಗತ್ತು ನಿರ್ಮಾಣಗೊಂಡಿದೆ. ಶಿವನನ್ನು ಬಿಟ್ಟು ಶಕ್ತಿ, ಶಕ್ತಿಯನ್ನು ಬಿಟ್ಟು ಶಿವನಿಲ್ಲ. ಶಕ್ತಿಯುಕ್ತನಾದ ಶಿವನನ್ನು ಇಷ್ಟಲಿಂಗ ರೂಪದಲ್ಲಿ ಪೂಜಿಸುತ್ತೇವೆ. ವೀರಶೈವ ಧರ್ಮ ಸಿದ್ಧಾಂತವು ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ ಎಂದು ಖ್ಯಾತಿ ಗಳಿಸಿದೆ.

ಜಗದ್ಗುರು ರಂಭಾಪುರಿ ವೀರಸಿಂಹಾಸನ ಧರ್ಮಪೀಠ ಅಂದಿನಿಂದ ಇಂದಿನವರೆಗೂ ದಸರೆಯನ್ನು ಆಚರಿಸಿಕೊಂಡು ಬರುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಪೀಠದ 121ನೇ ಸ್ಥಾನವನ್ನು ಅಲಂಕರಿಸಿರುವ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಜಗದ್ಗುರು ವೀರಸೋಮೇಶ್ವರ  ದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರ 27ನೇ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಅ.10ರಿಂದ 19ವರೆಗೆ ಲಕ್ಷ್ಮೇಶ್ವರದ ಶಿವಪ್ಪ ಶಿವಪ್ಪ ಮಹಾಂತಶೆಟ್ಟರ ಇವರ ಭವ್ಯ ನಿವೇಶನದ ಆವರಣದಲ್ಲಿ ನಿರ್ಮಿಸಿದ ಮಾನವ ಧರ್ಮ ಮಂಟಪದ ಸಭಾಂಗಣದಲ್ಲಿ ಜರುಗಲಿದೆ.

ಈವರೆಗೆ ದಸರಾ ನಡೆದ ಸ್ಥಳಗಳು: 1992 ನಿಡಗುಂದಿ, 1993 ತುಮಕೂರು, 1994 ಮುಂಡರಗಿ, 1995 ಬಾಗಲಕೋಟೆ, 1996 ಶಿಗ್ಗಾವಿ, 1997 ಸವದತ್ತಿ, 1998 ಸಿಂಧನೂರ, 1999 ಕುಂದಗೋಳ, 2000 ಬೀರೂರು, 2001 ಹಾವೇರಿ, 2002 ಸೊಲ್ಲಾಪುರ, 2003 ಕಲಬುರ್ಗಿ, 2004 ಹೊಸದುರ್ಗ, 2005 ರಾಣೇಬೆನ್ನೂರು, 2006 ಶಿವಮೊಗ್ಗ, 2007 ಹುಬ್ಬಳ್ಳಿ, 2008 ತಿಪಟೂರು, 2009 ಚಿಕ್ಕಮಗಳೂರು, 2010 ಗಜೇಂದ್ರಗಡ, 2011 ಬೆಂಗಳೂರು, 2012 ಗಂಗಾವತಿ, 2013 ಜೀವರ್ಗಿ, 2014 ಅರಸೀಕೆರೆ, 2015 ಭದ್ರಾವತಿ, 2016 ಗೊಡಚಿ ಶ್ರೀವೀರಭದ್ರೇಶ್ವರ ಕ್ಷೇತ್ರ, 2017 ಕಡೂರು, 2018 ಲಕ್ಷ್ಮೇಶ್ವರ.

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !