ನರಗುಂದ: ಹಳ್ಳಗಳು ರೈತರಿಗೆ ವರದಾನವೂ ಹೌದು, ಶಾಪವೂ ಹೌದು. ಇದನ್ನರಿತ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದ ನಡುವೆಯೂ ಬೆಣ್ಣೆಹಳ್ಳದ ಹೂಳೆತ್ತುವ ಕಾಮಗಾರಿಗೆ ₹200 ಕೋಟಿ ಅನುದಾನ ನೀಡಿದೆ. ಇದರ ಮೂಲಕ ಬೆಣ್ಣೆ ಹಳ್ಳದ ಹೂಳೆತ್ತಿ ಸರಾಗವಾಗಿ ನೀರು ಹರಿಯುವಂತೆ ಮಾಡಲಾಗುತ್ತಿದೆ ಎಂದು ಶಾಸಕ ಸಿ ಸಿ ಪಾಟೀಲ ಹೇಳಿದರು.

ತಾಲ್ಲೂಕಿನ ಬನಹಟ್ಟಿ ಗ್ರಾಮದ ಬಳಿ ಬೆಣ್ಣೆಹಳ್ಳದಿಂದ ಮೆಣಸಗಿ ಮಲಪ್ರಭಾ ನದಿಯವರೆಗೆ ₹38 ಕೋಟಿ ವೆಚ್ಚದಲ್ಲಿ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

2007-08 ರಲ್ಲಿ ಮತ್ತು 2018-19 ರಲ್ಲಿ ಮಲಪ್ರಭಾ ಮತ್ತು ಬೆಣ್ಣೆಹಳ್ಳದ ಪ್ರವಾಹಕ್ಕೆ ಬಿದ್ದಿರುವ ಅನೇಕ ಮನೆಗಳ ಸಂತ್ರಸ್ತರಿಗೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ₹50 ಸಾವಿರ ಪರಿಹಾರ ನೀಡಿತ್ತು .ಇದಲ್ಲದೆ ನರಗುಂದ ಮತಕ್ಷೇತ್ರದ 14 ಹಳ್ಳಿಗಳು ಸಂಪೂರ್ಣ ಸ್ಥಳಾಂತರವಾದವು. ಇದೇ ಮಾದರಿಯಲ್ಲಿ ರಾಜ್ಯದಲ್ಲಿ 300 ಗ್ರಾಮಗಳು ಸ್ಥಳಾಂತರ ಆಗಿದ್ದು ವಿಶೇಷ ಎಂದರು.

‘ಬೆಣ್ಣೆಹಳ್ಳ ಹೂಳೆತ್ತುವುದು ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳಿಗಾಗಿ ಕುಂದಗೋಳ ಶಾಸಕ ಎಂ. ಆರ್. ಪಾಟೀಲ, ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ ಮತ್ತು ನಾನು ಮೂವರು ಸೇರಿಕೊಂಡು ಕೇಂದ್ರದ ಬಳಿ ತೆರಳಿ ₹1686 ಕೋಟಿ ಅನುದಾನವನ್ನು ನೀಡುವಂತೆ ಮನವಿ ಮಾಡಿದ್ದೇವೆ. ಇದರಲ್ಲಿ ನರಗುಂದ ಮತಕ್ಷೇತ್ರದ ಅಭಿವೃದ್ಧಿಗೆ ₹450 ಕೋಟಿ ದೊರಕಲಿದೆ. ಆದ್ದರಿಂದ ಬೆಣ್ಣೆಹಳ್ಳದ ಶಾಶ್ವತ ಪರಿಹಾರಕ್ಕೆ ಕೇಂದ್ರ ಸರಕಾರವು ಶೀಘ್ರ ಅನುದಾನ ನೀಡಲಿ’ ಎಂದರು.

ಮಳೆಗಾಲ ಪ್ರಾರಂಭ ಮೊದಲೇ ಬೆಣ್ಣೆಹಳ್ಳ ಹೂಳೆತ್ತುವ ಕಾಮಗಾರಿ ಬೇಗ ಮುಗಿಯಬೇಕು. ಹೂಳೆತ್ತಿದ್ದ ಮಣ್ಣನ್ನು ದಡದಲ್ಲಿ ಹಾಕದೇ ದೂರದಲ್ಲಿ ಹಾಕಬೇಕು. ದಡದಲ್ಲಿ ಹಾಕಿದರೆ ಮಳೆಗೆ ಮತ್ತೇ ಹಳ್ಳ ಸೇರುತ್ತದೆ ಎಂದು ಶಾಸಕ ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನೀರಾವರಿ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಎಂ. ಜಾಲಿಹಾಳ ಮಾತನಾಡಿ, ‘ಬೆಣ್ಣೆಹಳ್ಳದ ಹೂಳೆತ್ತುವ ಕಾರ್ಯದಲ್ಲಿ15 ಗ್ರಾಮಗಳು ಬರಲಿವೆ. ಬೆಣ್ಣೆಹಳ್ಳವು ಶೇ 45 ಅತಿಕ್ರಮಣ ಆಗಿದೆ. ಹೀಗಾಗಿಯೇ ಹಳ್ಳಗಳು ಹೂಳು ತುಂಬಿಕೊಂಡು ಮೂಲಸ್ವರೂಪವನ್ನೇ ಕಳೆದುಕೊಂಡಿವೆ. ಹರಿಯುವ ನೀರಿನ ಮಾರ್ಗ ಸುಲಭವಾಗಿದ್ದರೆ, ಯಾವುದೇ ಪ್ರವಾಹ ಉಂಟಾಗುವುದಿಲ್ಲ. ಹಳ್ಳಕೊಳ್ಳಗಳ ಮೂಲಸ್ವರೂಪವನ್ನು ಯಾರು ಬದಲಾಯಿಸುವ ಪ್ರಯತ್ನ ಮಾಡಬೇಡಿ. ಹಾಗೇನಾದರೂ ಮಾಡಿದರೆ ಪ್ರಕೃತಿ ನಮ್ಮ ಜೀವನದ ದಿಕ್ಕನ್ನೇ ಬದಲಿಸಲಿವೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸೊಲಬಯ್ಯ ಸ್ವಾಮಿಗಳು, ಶಿವನಗೌಡ ಕರಿಗೌಡ್ರ, ಬಾಪುಗೌಡ ಪಾಟೀಲ, ಯಲ್ಲಪ್ಪಗೌಡ ಗೌಡಪ್ಪಗೌಡ, ವೈ.ಎಚ್.ಪೂಜಾರ, ಚಂದ್ರು ಜಾಧವ, ಭೀಮಪ್ಪ ಕಡ್ಲಿಕೊಪ್ಪ, ಗುತ್ತಿಗೆದಾರ ಶಿವಾನಂದ ನಾಯಕ, ವಿ ಬಿ ಮಾನಿಪಾಟೀಲ, ಮಹೇಶ ಓಲೇಕಾರ, ಚೇತನ ಕಪಲಿ, ಚಂದ್ರು ಜಾಧವ, ಗುರಪ್ಪ ಆದೆಪ್ಪನವರ, ಬಿ ಬಿ ಕುಂಬಾರ, ರಾಜುಗೌಡ ಪಾಟೀಲ, ಈಶ್ವರಗೌಡ ಪಾಟೀಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-23-694189917

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.