ಕಳಸ (ಗುಡಗೇರಿ): ‘ಸಾರಿಗೆ ಸಂಪರ್ಕ ಇರುವ ರಸ್ತೆಗಳನ್ನು ನನ್ನ ಅಧಿಕಾರ ಅವಧಿಯಲ್ಲಿ ಸಂಪೂರ್ಣವಾಗಿ ಸುಧಾರಣೆ ಮಾಡುತ್ತೇನೆ’ ಶಾಸಕ ಎಂ.ಆರ್.ಪಾಟೀಲ್ ಹೇಳಿದರು.

ತಾಲ್ಲೂಕಿನ ಕಳಸ - ಸಂಕ್ಲಿಪೂರ ಸಿ.ಸಿ.ರಸ್ತೆ ನಿರ್ಮಾಣಕ್ಕೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ 2024-25 ಸಾಲಿನಲ್ಲಿ ₹150 ಲಕ್ಷ ವೆಚ್ಚದ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ಈ ಭಾಗದ ಗುಡಗೇರಿ -ಸಂಶಿ, ಗುಡಗೇರಿ - ಹರಲಾಪೂರ, ಮಂಡಿಗನಾಳ - ಗುಡಗೇರಿ ಕಾಮಗಾರಿಗಳು ಆರಂಭಗೊಂಡಿದ್ದು. ಕುಂದಗೋಳ ತಾಲೂಕಿನಲ್ಲಿ ಈಗಾಗಲೇ ರೈತರು ಸಂಪರ್ಕಿಸುವ ರಸ್ತೆಗಳು, ಹಳ್ಳಕ್ಕೆ ಅಡಲಾಗಿ ಬ್ರಿಡ್ಜ್ ಗಳ ನಿರ್ಮಾಣ ಕಾಮಗಾರಿಗಳು ಆರಂಭಗೊಂಡಿವೆ. ಮಳೆಗಾಲ ಸಂದರ್ಭದಲ್ಲಿ ರೈತರಿಗೆ ಹೊಲಸಂಪರ್ಕಿಸಲು ದಾರಿ ಇಲ್ಲದಾಗಿದ್ದು, ಈ ಬ್ರಿಡ್ಜ್ ನಿರ್ಮಾಣಗಳಿಂದಾಗಿ ಸಾವಿರಾರು ರೈತರಿಗೆ ಅನುಕೂಲವಾಗಿದೆ ಎಂದರು.

‘ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕೇಂದ್ರ ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದು. ನನ್ನ ಅಧಿಕಾರ ಅವಧಿಯಲ್ಲಿ ಕ್ಷೇತ್ರದ ಸಂಪೂರ್ಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.

ಅಖಂಡಪ್ಪ ಕಳಸೂರ, ಯಲ್ಲರಡ್ಡಿ ಯರಗುಪ್ಪಿ, ಸತೀಶ ಪಾಟೀಲ್, ಸೋಮಶೇಖರ ಬಡಪ್ಪನವರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-24-1642616011

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.