ಗುರುವಾರ , ಮಾರ್ಚ್ 30, 2023
24 °C

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪಟ್ಟಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: 2021-22ನೇ ಸಾಲಿನ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಉತ್ತಮ ಶಿಕ್ಷಕರ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶರು ಬಿಡುಗಡೆ ಮಾಡಿದ್ದಾರೆ.
 
ಪ್ರೌಢ ಶಾಲಾ ವಿಭಾಗ: ಶಿರಹಟ್ಟಿ ವಿಭಾಗದಲ್ಲಿ ಬಸವರಾಜ ಗೋವಿಂದ ಹುಲ್ಲತ್ತಿ, ಅಂಬುಜಾ ಡಿ. ಕುಲಕರ್ಣಿ, ಗದಗ ಗ್ರಾಮೀಣ ವಿಭಾಗದಲ್ಲಿ ನೀಲಮ್ಮ ಅಂಗಡಿ ಮತ್ತು ಮಂಜುನಾಥ ಎಚ್. ನ್ಯಾರಲಗಂಟಿ, ನರಗುಂದ ವಿಭಾಗದಲ್ಲಿ ಜಿ.ವೈ.ಬಾರಕೇರ, ರೋಣ ವಿಭಾಗದಲ್ಲಿ ಎಫ್.ಎಚ್.ಢಾಲಾಯತ್, ಮುಂಡರಗಿ ವಿಭಾಗದಲ್ಲಿ ರವಿ ನಾಯ್ಕ ಆಯ್ಕೆಯಾಗಿದ್ದಾರೆ.

ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಗದಗ ಗ್ರಾಮೀಣ ವಿಭಾಗದಲ್ಲಿ ಎಂ.ಎಚ್.ಜಕ್ಕಲಿ, ಶಿರಹಟ್ಟಿ ವಿಭಾಗದಲ್ಲಿ ರುದ್ರಗೌಡ ಶಂಕರಗೌಡ ಪಾಟೀಲ, ಗದಗ ಶಹರ ವಿಭಾಗದಲ್ಲಿ ಫಾತಿಮಾ ಎ. ಹಾಗೂ ಪಾರ್ವತಿ ಎಸ್. ರೋಣದ, ರೋಣ ವಿಭಾಗದಲ್ಲಿ ಆರ್.ವೈ.ಮಣ್ಣೊಡ್ಡರ, ಮುಂಡರಗಿ ವಿಭಾಗದಲ್ಲಿ ಎಸ್.ಎಫ್. ಹಡಪದ ಆಯ್ಕೆಯಾಗಿದ್ದಾರೆ.
 
ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಗದಗ ಗ್ರಾಮೀಣ ವಿಭಾಗದಲ್ಲಿ ಸುಮನ್ ಅಂಗಡಿ, ರೂಪಾ ಬೆಟಗೇರಿ, ದೀಪಾ ಬೇವಿನಮರದ, ನರಗುಂದ ವಿಭಾಗದಲ್ಲಿ ಎಂ.ಕೆ.ಕುರಿಯವರ, ರೋಣ ವಿಭಾಗದಲ್ಲಿ ಎಂ.ಐ.ಮುಲ್ಲಾ, ಶಿರಹಟ್ಟಿ ವಿಭಾಗದಲ್ಲಿ ಯಾಸ್ಮೀನ್ ಇಮಾಮಹುಸೇನ್ ಖಲೀಫನವರ, ಮುಂಡರಗಿ ವಿಭಾಗದಲ್ಲಿ ಬಿ.ಕೆ.ಮಾದರ, ಗದಗ ಶಹರ ವಿಭಾಗದಲ್ಲಿ ಶಶಿಕಲಾ ರಾ.ಭೋವಿ, ಶಿರಹಟ್ಟಿ ವಿಭಾಗದಲ್ಲಿ ಪರಸಪ್ಪ ಪ. ಬಂತಿ, ನರಗುಂದ ವಿಭಾಗದಲ್ಲಿ ರೇಣುಕಾ ಬ. ಶಿರಸಂಗಿ ಆಯ್ಕೆಯಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.