ಕುಂದಗೋಳ: ‘ಬಡವರಿಗಾಗಿ ಪ್ರತಿವರ್ಷ ಆರೋಗ್ಯ ತಪಾಸಣೆ ಶಿಬಿರವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ನಾವು ಜೊತೆಯಾಗಿ ಹಮ್ಮಿಕೊಳ್ಳುತ್ತಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು’ ಎಂದು ಶಾಸಕ ಎಂ.ಆರ್.ಪಾಟೀಲ ಹೇಳಿದರು.

ಅವರು ಪಟ್ಟಣದ ಭೂತೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಆರೋಗ್ಯವೇ ಭಾಗ್ಯ, ಬಡವರು ಆರೋಗ್ಯದಿಂದ ಇರಬೇಕು, ಅಂದಾಗ ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ಶಿಬಿರದಲ್ಲಿ ನುರಿತ ನರರೋಗ ತಜ್ಞರು, ನೇತ್ರ ತಜ್ಞರು, ಹೃದಯ ತಜ್ಞರು, ಎಲುಬು ಮತ್ತು ಕೀಲು ತಜ್ಞರು, ಶಸ್ತ್ರ ಚಿಕಿತ್ಸರು, ಪಿಜಿಶಿಯನಗಳು, ಮೂತ್ರರೋಗ ತಜ್ಞರು, ಗ್ಯಾಸ್ಟ್ರೋ ಸರ್ಜನ್, ಶ್ವಾಸಕೋಶ ತಜ್ಞರು ಹೀಗೆ ವಿವಿಧ ರೋಗಗಳಿಗೆ ಸಂಬಂಧಿಸಿದ ತಜ್ಞ ವೈದ್ಯರು ಇದ್ದು, ಕ್ಷೇತ್ರದ ಜನತೆ ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದರು.

ಡಾ.ಶರತ್.ಎಸ್.ಜರತಾರಘರ, ಡಾ.ರೇಣುಕಾ ಜರತಾರಘರ, ಡಾ.ಪ್ರಶಾಂತಕುಮಾರ, ಡಾ.ಅಭಿಷೇಕ ಗುಮಾಸ್ತೆ, ಡಾ.ಸಂತೋಷ ದೊಡ್ಡಮನಿ, ಡಾ.ಚಿರಾಗ ಸಜ್ಜನವರ, ಡಾ.ಪವನ ಜೋಶಿ, ಡಾ.ಅರುಣ ಪಟ್ಟೇದ, ಡಾ.ಶ್ರೀಕಾಂತ ಹಿರೇಮಠ, ಡಾ.ಗಿರಿದರ ಗಿರಡ್ಡಿ ವೈದ್ಯರ ತಂಡ ಬಂದು ಉಚಿತ ತಪಾಸಣೆ ಮಾಡಿ, ಔಷಧ ನೀಡಿದರು.

ಆರೋಗ್ಯ ಶಿಬಿರದಲ್ಲಿ ವಿವಿಧ ಗ್ರಾಮಗಳ 400ಕ್ಕೂ ಹೆಚ್ಚು ಜನ ನೋಂದಣಿ ಮಾಡಿಸಿಕೊಂಡು ಭಾಗವಹಿಸಿ ತಮಗೆ ಸಂಬಂಧಿಸಿದ ಕಾಯಿಲೆ ಬಗ್ಗೆ ಪರೀಕ್ಡಿಸಿಕೊಂಡು ಮಾತ್ರೆ, ಔಷಧ ಪಡೆದುಕೊಂಡರು. ನೇತ್ರ ಚಿಕಿತ್ಸೆಗೆ ನೋಂದಣಿ ಮಾಡಲಾಯಿತು.

ಕಲ್ಯಾಣಪುರದ ಬಸವಣ್ಣಜ್ಜ ಸನ್ದಾನಿಸಿದರು. ಪ.ಪಂ.ಅಧ್ಯಕ್ಷ ಶ್ಯಾಮಸುಂದರ ದೇಸಾಯಿ, ಉಪಾಧ್ಯಕ್ಷ ಮಂಜುನಾಥ ಹಿರೇಮಠ, ಮುಂಖಡರಾದ ಮಾಲತೇಶ ಶ್ಯಾಗೋಟಿ, ಉಮೇಶ ಹೆಬಸೂರ, ನಾಗನಗೌಡ ಸಾತ್ಮಾರ, ಬಸವರಾಜ ಕೊಪ್ಪದ, ನಾಗರಾಜ ದೇಶಪಾಂಡೆ, ಶೇಕಣ್ಣ ಬಾಳಿಕಾಯಿ, ಬಿ.ಟಿ.ಗಂಗಾಯಿ, ರವಿಗೌಡ ಪಾಟೀಲ, ಪೃಥ್ವಿರಾಜ್ ಕಾಳೆ, ಅತೀಶ ಪಾಟೀಲ, ಅಪ್ಪಾಜಿಗೌಡ ಪಾಟೀಲ, ಪ್ರದೀಪ ಹಾದಿಮನಿ, ವಾಗೀಶ ಮಣಕಟ್ಟಿಮಠ, ಉಮೇಶ ಗದುಗಿನ, ಸತೀಶ ಪಾಟೀಲ, ಸಿದ್ದು ಧಾರವಾಡಶೆಟ್ಟರ, ರಮೇಶ ಗದುಗಿನ, ಪ್ರದೀಪ್ ಕಾಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.