ಡಿ.ಆರ್.ಪಾಟೀಲ ರೋಡ್ ಶೋ

ಶುಕ್ರವಾರ, ಏಪ್ರಿಲ್ 19, 2019
27 °C

ಡಿ.ಆರ್.ಪಾಟೀಲ ರೋಡ್ ಶೋ

Published:
Updated:
Prajavani

ಲಕ್ಷ್ಮೇಶ್ವರ: ಹಾವೇರಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬುಧವಾರ ಲಕ್ಷ್ಮೇಶ್ವರದಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.

ಇಲ್ಲಿನ ಮಹಾಕವಿ ಪಂಪ ವರ್ತುಲದಿಂದ ಆರಂಭವಾದ ರೋಡ್ ಶೋ ಬಸ್ತಿಬಣ, ವೀರಭದ್ರೇಶ್ವರ ದೇವಸ್ಥಾನ, ಪರ್ವತ ಮಲ್ಲಯ್ಯನ ದೇವಸ್ಥಾನ, ಜೋಡ ಮಾರುತಿ ದೇವಸ್ಥಾನ, ಮಾನ್ವಿ ಪೆಟ್ರೋಲ್ ಬಂಕ್, ಶಿಗ್ಲಿ ನಾಕಾ, ಹೊಸ ಬಸ್ ನಿಲ್ದಾಣ, ವಿದ್ಯಾರಣ್ಯ ವರ್ತುಲ ಮೂಲಕ ಸಂಚರಿಸಿತು.‌

ರೋಡ್ ಶೋದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಕಾಂಗ್ರೆಸ್ ಪರ ಘೋಷಣೆಗಳನ್ನು ಕೂಗಿ, ‘ಚೌಕಿದಾರ ಚೋರ್ ಹೈ’ ಎಂದು ಪ್ರಧಾನಿ ಮೋದಿಯನ್ನು ಲೇವಡಿ ಮಾಡಿದರು. ಕಾಂಗ್ರೆಸ್‍ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ, ಟಿ.ಈಶ್ವರ, ಮಾಜಿ ಶಾಸಕರಾದ ಎಸ್.ಎನ್.ಪಾಟೀಲ, ರಾಮಕೃಷ್ಣ ದೊಡ್ಡಮನಿ, ಜಿ.ಎಸ್.ಗಡ್ಡದೇವರಮಠ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !