ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಟಿ ಜಿಟಿ ಮಳೆಯಿಂದಾಗಿ ಈರುಳ್ಳಿ ಬೆಳೆದ ರೈತರಿಗೆ ಸಂಕಷ್ಟ

Last Updated 19 ನವೆಂಬರ್ 2021, 3:51 IST
ಅಕ್ಷರ ಗಾತ್ರ

ರೋಣ: ಈರುಳ್ಳಿ ಬೆಳೆದ ತಾಲ್ಲೂಕಿನ ರೈತರು ವಾಯುಭಾರ ಕುಸಿತ, ದಟ್ಟ ಮೋಡ, ಜಿಟಿಜಿಟಿ ಮಳೆಯಿಂದ ಕಂಗಾಲಾಗಿದ್ದಾರೆ.

ಮಾರುಕಟ್ಟೆಯಲ್ಲಿ ಈರುಳ್ಳಿಗೆ ತಕ್ಕಮಟ್ಟಿಗೆ ಬೆಲೆ ಸಿಗುತ್ತಿದ್ದುದರಿಂದ ರೈತರು ಹೆಚ್ಚಿನ ಕೂಲಿ ನೀಡಿ ಈರುಳ್ಳಿ ಕೀಳಿಸುತ್ತಿದ್ದಾರೆ. ಆದರೆ ಸದ್ಯದ ವಾತಾವರಣ ಅವರಿಗೆ ಪೂರಕವಾಗಿಲ್ಲ.

ಪ್ರಸಕ್ತ ವರ್ಷ ಅಧಿಕ ತೇವಾಂಶದಿಂದಾಗಿ ಈರುಳ್ಳಿಗೆ ಸುಳಿ ರೋಗ ಕಾಡುತ್ತಿದೆ. ಈಗ ಕೀಳುವ ಸಮಯದಲ್ಲಿ ಮಳೆಯಿಂದಾಗಿ ಈರುಳ್ಳಿ ರಾಶಿ ಮಾಡುವುದು ಸವಾಲಿನ ಕೆಲಸವಾಗಿದೆ ಎನ್ನುತ್ತಾರೆ ರೈತರು.

ಕಿತ್ತಿರುವ ಈರುಳ್ಳಿಗೆ ಮಳೆಯಿಂದಾಗಿ ತೇವಾಂಶ ಹೆಚ್ಚಾಗುತ್ತಿದೆ. ಕಿತ್ತು ಹಾಕಿದ ಈರುಳ್ಳಿ ಕೊಳೆಯುವ ಅಥವಾ ಮೊಳಕೆಯೊಡೆಯುವ ಸಾಧ್ಯತೆ ಇರುತ್ತದೆ. ಇದರಿಂದ ಮಾರುಕಟ್ಟೆಯಲ್ಲಿ ದರ ಕಳೆದುಕೊಂಡು ಹಾನಿಯಾಗಬಹುದು.

ಈ ಮಳೆಯಿಂದ ತಮ್ಮ ಫಸಲು ರಕ್ಷಿಸಿಕೊಳ್ಳಲು ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಪಾಸ್ಟಿಕ್ ಹಾಳೆಗಳನ್ನು ಹೊದಿಕೆಗೆ ಹಾಕಿ ಕಷ್ಟಪಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT