ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೀದಿಯಲ್ಲಿ ಲಿಂಗಪೂಜೆಗೆ ಅವಕಾಶ ಕೊಡುತ್ತಾರೆಯೇ?: ಭಾಂಡಗೆ

Last Updated 10 ಏಪ್ರಿಲ್ 2022, 5:28 IST
ಅಕ್ಷರ ಗಾತ್ರ

ಗದಗ: ‘ಕೆಲವು ಮಠಗಳಲ್ಲಿ ಸೌಹಾರ್ದದ ಹೆಸರಿನಲ್ಲಿ ನಮಾಜ್‍ಗೆ ಅವಕಾಶ ಮಾಡಿ ಕೊಡುತ್ತಿರುವುದು ದುರ್ದೈವದ ಸಂಗತಿ. ಇಂತಹವರು ಮಸೀದಿಗೆ ತೆರಳಿ ಲಿಂಗಪೂಜೆ ಮಾಡಲಿ. ಅದಕ್ಕೆ ಅವರು ಅವಕಾಶ ಕೊಡುತ್ತಾರೆಯೇ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಪ್ರಶ್ನಿಸಿದರು.

ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಮುಸ್ಲಿಮರು ಕೋರ್ಟ್‍ನ ಆದೇಶ, ಈ ನೆಲದ ಕಾನೂನಿಗೆ ಗೌರವ ಕೊಡುತ್ತಿಲ್ಲ. ಮುಸ್ಲಿಮರನ್ನು ಹದ್ದುಬಸ್ತಿನಲ್ಲಿ ಇಡಬೇಕು. ಮುಸ್ಲಿಮರಲ್ಲಿ 100ಕ್ಕೆ 99 ಜನರು ರಾಷ್ಟ್ರ ವಿರೋಧಿಗಳು, ಹಿಂದೂ ವಿರೋಧಿಗಳು ಎಂದು ಅವರು ಗಂಭೀರ ಆರೋಪ ಮಾಡಿದರು.

‘ಇಬ್ಬರು ಮಕ್ಕಳಿರುವ ಹಿಂದೂಗಳು ಸರ್ಕಾರಕ್ಕೆ ಕಟ್ಟಿದ ತೆರಿಗೆಯ ಹಣದಿಂದ ಮುಸ್ಲಿಮರು ಹೆತ್ತಿರುವ ಹತ್ತಾರು ಮಕ್ಕಳಿಗೆ ಸೌಲಭ್ಯ ಕಲ್ಪಿಸುವಂತಾಗಿದೆ. ಇದು ನಿಲ್ಲಬೇಕು. ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡುತ್ತಿಲ್ಲ. ಆದರೆ, ಸರ್ಕಾರದ ಅನುದಾನ ಪಡೆದು, ತಮ್ಮ ಧರ್ಮ ಪ್ರಸಾರ ಮಾಡುತ್ತಿದ್ದಾರೆ. ಕುರ್‌ಆನ್‍ನಲ್ಲಿ ಹಿಂದೂಗಳನ್ನು ದ್ವೇಷಿಸುವ ಬಗ್ಗೆ ಮೌಲ್ವಿಯೊಬ್ಬರು ಓದಿಸುವ ವಿಡಿಯೊ ತಮ್ಮ ಬಳಿಯಿದೆ. ಇಷ್ಟೆಲ್ಲ ಇದ್ದರೂ ಬಹುತೇಕ ಮಠಾಧೀಶರು ಮೌನಕ್ಕೆ ಜಾರಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳೂ ಮತ ಸ್ವಾರ್ಥಕ್ಕಾಗಿ ಯಾವ ಕ್ರಮಕ್ಕೂ ಮುಂದಾಗುತ್ತಿಲ್ಲ’ ಎಂದು ಕಿಡಿಕಾರಿದರು.

‘ದೇಶವನ್ನು ಮುಸ್ಲಿಂ ರಾಷ್ಟ್ರ ಮಾಡುವುದು ಅವರ ಗುಪ್ತ ಕಾರ್ಯಸೂಚಿ. ಹಿಂದೂ ಯುವತಿಯರನ್ನು ಬಲವಂತವಾಗಿ ಪ್ರೇಮಪಾಶಕ್ಕೆ ತಳ್ಳುವ ಮುಸ್ಲಿಂ ಯುವಕರ ಮನೆ ಹೊಕ್ಕು ಹೊಡೆಯಬೇಕು. ಮದರಸಾಗಳಲ್ಲಿ ಭಯೋತ್ಪಾದನೆ ಕಲಿಸುತ್ತಾರೆ. ಹಿಂದೂ ದ್ವೇಷ ಬಿತ್ತುವ ಪಾಠವನ್ನು ಅಲ್ಲಿನ ಮೌಲ್ವಿಗಳು ಮಾಡುತ್ತಿದ್ದಾರೆ’ ಎಂದು ಆರೋಪ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT