ಪಾಕಿಸ್ತಾನ ಪರ ಫೇಸ್‌ಬುಕ್‌ ಸ್ಟೇಟಸ್‌; ಇಬ್ಬರು ಯುವಕರ ಬಂಧನ

ಗುರುವಾರ , ಮಾರ್ಚ್ 21, 2019
27 °C

ಪಾಕಿಸ್ತಾನ ಪರ ಫೇಸ್‌ಬುಕ್‌ ಸ್ಟೇಟಸ್‌; ಇಬ್ಬರು ಯುವಕರ ಬಂಧನ

Published:
Updated:
Prajavani

ಮುಳಗುಂದ: ‘ಐ ಸ್ಟ್ಯಾಂಡ್ ವಿತ್ ಪಾಕಿಸ್ತಾನ್ ಆರ್ಮಿ’ ಎಂದು ಫೇಸ್‌ಬುಕ್‌ನಲ್ಲಿ ಸ್ಟೇಟಸ್‌ ಹಾಕಿದ ಪಟ್ಟಣದ ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ.ಪಟ್ಟಣದ ಖಾದರ್‌ ಭಾಷಾ ಅಬ್ದುಲ್‌ಸಾಬ ಕಲ್ಕುಟ್ರ(32) ಹಾಗೂ ಸಮೀರ್ ಸಯೀದ ಬಡೆ ಎಂಬ ಯುವಕರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಈ ಸ್ಟೇಟಸ್‌ ಹಾಕಿದ್ದರು.ಇದನ್ನು ತಿಳಿಯುತ್ತಿದ್ದಂತೆ, ಸ್ಥಳೀಯ ಕೆಲವು ಯುವಕರು ಪೊಲೀಸ್ ಠಾಣೆ ಮುಂದೆ ಜಮಾಯಿಸಿ, ಪ್ರತಿಭಟನೆ ನಡೆಸಿದರು. ಯುವಕರನ್ನು ವಶಕ್ಕೆ ಪಡೆದು, ಗಡಿಪಾರು ಮಾಡುವಂತೆ ಆಗ್ರಹಿಸಿದರು.

ಶನಿವಾರ ರಾತ್ರಿ ಖಾರ್‌ಬಾಷಾ ಕಲ್ಕುಟ್ರ ಮತ್ತು ಭಾನುವಾರ ಸಮೀರ್‌ನನ್ನು ಬಂಧಿಸಲಾಗಿದೆ. ಮುಳಗುಂದ ಪೊಲೀಸ್ ಠಾಣೆಯಲ್ಲಿ ಈ ಯುವಕರ ವಿರುದ್ಧ ಐಪಿಸಿ 124ಎ, 153ಎ, 153ಬಿ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ.

 

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 4

  Sad
 • 2

  Frustrated
 • 0

  Angry

Comments:

0 comments

Write the first review for this !