ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌ ಕ್ರೀಡಾಪಟುಗಳಿಗೆ ಅದ್ಧೂರಿ ಸ್ವಾಗತ

ವಿವಿಧ ವಿಭಾಗಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಗದುಗಿನ ವಿದ್ಯಾರ್ಥಿಗಳು
Last Updated 17 ಜನವರಿ 2019, 14:41 IST
ಅಕ್ಷರ ಗಾತ್ರ

ಗದಗ:ಇತ್ತೀಚೆಗೆ ಮಣಿಪುರದ ಇಂಪಾಲ್‍ನಲ್ಲಿ ನಡೆದ ವಿದ್ಯಾರ್ಥಿ ಒಲಿಂಪಿಕ್‌ ಕ್ರೀಡಾಕೂಟದ, ರಾಷ್ಟ್ರಮಟ್ಟದ ಫುಟ್‍ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ, ಪದಕ ಜಯಿಸಿ ಮರಳಿದ, ಗದುಗಿನ ಫುಟ್‌ಬಾಲ್‌ ಕ್ರೀಡಾಪಟುಗಳನ್ನು ನಗರದ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ಬಳಿಕ ಅವರನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.

ಗದುಗಿನ ಜೇಸಿ, ಸಿಡಿಒ ಜೈನ್, ಸನ್ಮಾರ್ಗ್ ಪಿಯು ಕಾಲೇಜು ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ 41 ವಿದ್ಯಾರ್ಥಿಗಳು, ವಿವಿಧ ವಿಭಾಗಗಳಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು.

ಇಂಪಾಲ್‌ನಲ್ಲಿ ಜ.10 ರಿಂದ 13 ರವರೆಗೆ ಈ ಚಾಂಪಿಯನ್‌ಷಿಪ್‌ ನಡೆದಿತ್ತು. 25 ವರ್ಷದೊಳಗಿನ ವಿಭಾಗದಲ್ಲಿ ಚಿನ್ನ, 14 ಮತ್ತು 12 ವರ್ಷದೊಳಗಿನವರ ವಿಭಾಗದಲ್ಲಿ ಬೆಳ್ಳಿ ಹಾಗೂ 22 ವರ್ಷದೊಳಗಿನವರ ವಿಭಾಗದಲ್ಲಿ ಕರ್ನಾಟಕ ತಂಡವು ಕಂಚು ಜಯಿಸಿದೆ. ಈ ತಂಡಗಳಲ್ಲಿ ಗದುಗಿನ ಕ್ರೀಡಾಪಟುಗಳು ಆಡಿದ್ದರು.

ಕ್ರೀಡಾಪಟುಗಳ ಜತೆಗೆ,ತರಬೇತುದಾರರಾದ ಸ್ಯಾಮ್ಸನ್ ಡಾನ್, ಸರ್ಫರಾಜ್ ಶೇಖ ಅವರನ್ನೂ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT