ಗದಗ: ‘ತೋಂಟದಾರ್ಯ ಮಠದ ಜಾತ್ರೆಯಲ್ಲಿ ಡಾನ್ಸಿಂಗ್ ಫ್ಲೈ ಮನರಂಜನಾ ಆಟ ಆಡುವ ವೇಳೆ ಜೋಕಾಲಿ ಮುರಿದ್ದು ಬಿದ್ದು ಗಾಯಗೊಂಡಿರುವ 22 ಜನರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಹಾಗಾಗಿ, ಘಟನೆಯ ಹೊಣೆಗಾರರು ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು’ ಎಂದು ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯ ಸಂಚಾಲಕ ರಾಜು ಖಾನಪ್ಪನವರ ಆಗ್ರಹಿಸಿದರು.

‘ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳಿಂದ ಸ್ಕ್ಯಾನಿಂಗ್ಗೆ ದುಡ್ಡು ಪಡೆಯಲಾಗಿದೆ. ಜತೆಗೆ ಅಲ್ಲಿರುವ ಅನೇಕರಿಗೆ ವೈದ್ಯರು ಈವರೆಗೆ ಕೂಡ ಅವರಿಗೆ ಸರಿಯಾದ ಚಿಕಿತ್ಸೆ ನೀಡಿಲ್ಲ’ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಘಟನೆಯಲ್ಲಿ ಒಬ್ಬ ಹುಡುಗನ ಸೊಂಟ ಮುರಿದಿದೆ. 6 ವರ್ಷದ ಬಾಲಕನ ತಲೆಗೆ ಪೆಟ್ಟು ಬಿದ್ದಿದೆ. ಇವರ ಮುಂದಿನ ಭವಿಷ್ಯ ಏನು’ ಎಂದು ಪ್ರಶ್ನಿಸಿದರು.

‘ಘಟನೆಯಲ್ಲಿ ಗಾಯಗೊಂಡಿರುವ ವ್ಯಕ್ತಿಗಳ ಕುಟುಂಬಕ್ಕೆ ಸಂಬಂಧಪಟ್ಟವರು ತಲಾ ₹25 ಲಕ್ಷ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

‘ಘಟನೆ ನಡೆದು ನಾಲ್ಕು ದಿನ ಕಳೆದರೂ ಅನಾಹುತಕ್ಕೆ ಕಾರಣವಾದ ವಸ್ತುಗಳನ್ನು ಇದುವರೆಗೆ ಜಪ್ತಿ ಮಾಡಿಲ್ಲ. ಪೊಲೀಸರು ತಕ್ಷಣವೇ ಡಾನ್ಸಿಂಗ್ ಫ್ಲೈ ಮನರಂಜನಾ ಆಟಿಕೆಯನ್ನು ಜಪ್ತಿ ಮಾಡಬೇಕು’ ಎಂದು ಆಗ್ರಹಿಸಿದರು.

‘ಸಾಂವಿಧಾನಿಕ ಹೋರಾಟಕ್ಕೆ ಬೆಲೆ ಇಲ್ಲದಂತಾಗಿದ್ದು, ಈ ಹಿನ್ನಲೆಯಲ್ಲಿ ತೋಂಟದಾರ್ಯ ಮಠದ ಜಾತ್ರೆಯ ವಿರುದ್ದ ಕಾನೂನು ಹೋರಾಟ ಮಾಡಲಾಗುವುದು. ಪೊಲೀಸ್ ಇಲಾಖೆ, ಗುತ್ತಿಗೆದಾರ, ಜಿಲ್ಲಾಡಳಿತ, ನಗರಸಭೆಯನ್ನು ಪಾರ್ಟಿ ಮಾಡಲಾಗುವುದು’ ಎಂದರು.

ಮಾದಿಗ ಸಂಘರ್ಷ ಸಮಿತಿಯ ರಾಘವೇಂದ್ರ ಪರಾಪೂರ, ಮಹೇಶ ರೋಖಡೆ, ಪಿ.ಎಸ್.ಕಾಳೆ, ವಿಶ್ವನಾಥ ಶಿರಿ, ಗೀತಾ ನವಲಗುಂದ, ಸುಮನ್ ನವಲಗುಂದ, ಕುಮಾರ ನಡಗೇರಿ, ಸತೀಶ್ ಕುಂಬಾರ, ರಮೇಶ್ ನವಲಗುಂದ, ಮಂಜು ನವಲಗುಂದ, ಶಂಕರ್ ಗಬ್ಬೂರ, ವಿಜಯ ದಲಬಂಜನ್, ಕಿರಣ್ ಕಬಾಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-23-1600482996

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.