ಬಂದ್‌: ಚಿಕಿತ್ಸೆಗೆ ಪರದಾಡಿದ ರೋಗಿ

7
ಗದುಗಿನಲ್ಲಿ ಟೈರ್‌ಗೆ ಬೆಂಕಿ, ರಸ್ತೆ ತಡೆ, ಎತ್ತಿನ ಗಾಡಿ ಮೆರವಣಿಗೆ

ಬಂದ್‌: ಚಿಕಿತ್ಸೆಗೆ ಪರದಾಡಿದ ರೋಗಿ

Published:
Updated:
Deccan Herald

ಗದಗ: ಭಾರತ್‌ ಬಂದ್‌ಗೆ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಪಾರ್ಶ್ವವಾಯುವಿಗೆ ಚಿಕಿತ್ಸೆ ಪಡೆಯುವ ಸಲುವಾಗಿ, ಆಂಧ್ರಪ್ರದೇಶದಿಂದ ಬಂದ ರೋಗಿಯೊಬ್ಬರು ಸಕಾಲದಲ್ಲಿ ಚಿಕಿತ್ಸೆ ಲಭಿಸದೆ ಪರದಾಡಿದರು.

ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಸೊರಟೂರ ಗ್ರಾಮಕ್ಕೆ ನಾಟಿ ಚಿಕಿತ್ಸೆ ಪಡೆಯುವ ಸಲುವಾಗಿ ಬಂದಿದ್ದ ಪೆನ್ನಪ್ಪ ಎಂಬ ವ್ಯಕ್ತಿ, ಗದಗ ಬಸ್‌ನಿಲ್ದಾಣದಿಂದ ಶಿರಹಟ್ಟಿಗೆ ತೆರಳಲು ಬಸ್‌ ಇಲ್ಲದೆ ತೊಂದರೆ ಅನುಭವಿಸಿದರು.ಖಾಸಗಿ ಬಸ್‌ ಸಂಚಾರವೂ ವಿರಳವಾದ್ದರಿಂದ ಬೆಳಿಗ್ಗೆಯಿಂದ ಬಸ್‌ ನಿಲ್ದಾಣದಲ್ಲೇ ಕುಳಿತಿದ್ದರು.ವ್ಯಕ್ತಿಗೆ ಕನ್ನಡ ಮಾತನಾಡಲು ಬಾರದಿರುವುರಿಂದ ಸಮಸ್ಯೆಗೆ ಸಿಲುಕಿದರು. ಇವರನ್ನು ಗಮನಿಸಿದ ಜಿಲ್ಲೆಯ ಕೆಲವು ಮಾಧ್ಯಮ ಪ್ರತಿನಿಧಿಗಳು ಅವರನ್ನು ಕಾರಿನಲ್ಲಿ, ಸಮೀಪದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ನೆರವಾದರು.

‘ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಕಾಂಗ್ರೆಸ್‌ ಜಿಲ್ಲಾ ಘಟಕದಿಂದ ಬಂದ್ ಆಚರಿಸಲಾಗುವುದು’ ಎಂದು ಕೆಪಿಸಿಸಿ ಉಪಾಧ್ಯಕ್ಷ ಡಿ.ಆರ್.ಪಾಟೀಲ ತಿಳಿಸಿದ್ದಾರೆ. ಜೆಡಿಎಸ್‌ನ ಸ್ಥಳೀಯ ಮುಖಂಡರು ಬಂದ್‌ನಲ್ಲಿ ಭಾಗವಹಿಸಿದ್ದಾರೆ. ಲಾರಿ ಮಾಲೀಕರ, ಚಾಲಕರ ಸಂಘ, ಯಂಗ್ ಇಂಡಿಯಾ ಪರಿವಾರದ ಆಟೋ ಚಾಲಕ, ಮಾಲೀಕರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಸೇರಿ ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.

ನಗರದಲ್ಲಿ ಆಟೊ ಸಂಚಾರ ಸ್ಥಗಿತಗೊಂಡಿದೆ. ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಂಗಡಿಗಳು ಬಾಗಿಲು ಮುಚ್ಚಿವೆ. ಸಂಘಟನೆಗಳ ಕಾರ್ಯಕರ್ತರು ಇಲ್ಲಿನ ಗಾಂಧಿವೃತ್ತ ಮತ್ತು ಮುಳಗುಂದ ನಾಕಾದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ, ರಸ್ತೆ ತಡೆ ನಡೆಸಿದರು. ಎತ್ತಿನಗಾಡಿ ಮೆರವಣಿಗೆ ನಡೆಸುವ ಮೂಲಕ ಕೇಂದ್ರದ ವಿರುದ್ಧ ಘೋಷಣೆ ಕೂಗಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !