ಗದಗ: ‘ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ. ಇಲ್ಲಿ ಬೇರೆ ಬೇರೆ ಧರ್ಮ, ಜಾತಿಗಳು, ಭಿನ್ನ ಆಚರಣೆಗಳನ್ನು ಹೊಂದಿದ್ದರೂ ಸಹಿತ ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಒಂದೇ ಎಂಬ ಭಾವನೆ ಹೊಂದಿರುವುದು ಭಾರತೀಯತ್ವದ ಸಂಕೇತ’ ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ನಗರದ ತೋಂಟದಾರ್ಯ ಮಠದ ಆವರಣದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದಿಂದ ನಡೆದ 2,798ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಎಂ.ಆರ್.ಚವ್ಹಾಣ ಮಾತನಾಡಿ, ‘ಬಂಜಾರ ಸಮುದಾಯ ಇಡೀ ಏಷ್ಯಾ ಖಂಡವನ್ನು ವ್ಯಾಪಿಸಿಕೊಂಡಿದೆ. ಬಂಜಾರ ಸಮಾಜವು ಮೂಲತಃ ಅಲೆಮಾರಿ ಜನಾಂಗವಾಗಿತ್ತು. ಅನೇಕ ಶತಮಾನಗಳ ಕಾಲ ಆಧುನಿಕ ಜಗತ್ತಿನಿಂದ ದೂರವಿದ್ದು ಬದುಕು ಸಾಗಿಸಿದವರು. ಗದಗ ಪರಿಸರದಲ್ಲಿ ಲಿಂ. ತೋಂಟದ ಸಿದ್ಧಲಿಂಗ ಸ್ವಾಮೀಜಿಯವರು ಅಕ್ಷರದ ಅರಿವನ್ನು ಮೂಡಿಸಿ ಹೊರ ಜಗತ್ತಿಗೆ ಬಂಜಾರ ಸಮಾಜವನ್ನು ಪರಿಚಯಿಸಿದ ಮಹನೀಯರು’ ಎಂದು ಹೇಳಿದರು.

ಡಾ. ಬಿ.ಎಲ್. ಚೌಹಾಣ್ ಅವರು ‘ಕೋಲಾ’ ಗ್ರಂಥವನ್ನು ಪರಿಚಯಿಸುತ್ತ, ಈ ಗ್ರಂಥವು ಬಂಜಾರರ ಅನನ್ಯ ಪರಂಪರೆಯನ್ನು ಅಚ್ಚುಕಟ್ಟಾಗಿ ನಿರೂಪಿಸುತ್ತದೆ ಎಂದರು.

ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಶ್ರೀಕಾಂತ್ ಜಾಧವ ಅವರು, ಬಂಜಾರರ ಮೂಲ ಹಾಗೂ ಅವರು ದೇಶವ್ಯಾಪಿ ವಲಸೆ ಹೋದ ಕ್ರಮವನ್ನು, ಸಂತಶ್ರೀ ಸೇವಾಲಾಲ ಮಹಾರಾಜರ ಕುರಿತು ಮಾತನಾಡಿದರು.

ಡಾ. ನರೇಂದ್ರ ಪವಾರ, ಡಾ. ಕಿಶೋರ ಪವಾರ, ಬಂಜಾರ ಸಮುದಾಯದ ಅನೇಕರು ಉಪಸ್ಥಿತರಿದ್ದರು.

ಸಂಜನಾ ಎಂ. ಹದ್ಲಿ ಧರ್ಮಗ್ರಂಥ ಪಠಿಸಿದರು. ಸನ್ನಿಧಿ ಎಂ. ಹದ್ಲಿ ವಚನ ಚಿಂತನ ನಡೆಸಿಕೊಟ್ಟರು. ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಬಂಜಾರ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಡಾ. ರಮೇಶ ಎಂ. ಕಲ್ಲನಗೌಡರ ನಿರೂಪಣೆ ಮಾಡಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತಿಸಿದರು. ಉಪಾಧ್ಯಕ್ಷ ಡಾ. ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ದರಾಮ ಪಟ್ಟೇದ, ಸಹ ಕಾರ್ಯದರ್ಶಿ ಪ್ರತಿಭಾ ಮು. ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-23-132202728

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.