ಗದಗ: ‘ಜಿಲ್ಲೆಯಲ್ಲಿ ಹಲವಾರು ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತದೆ. ಆದರೆ, ಇಲ್ಲಿಯ ಒಣಬೇಸಾಯಕ್ಕೆ ಗೋಡಂಬಿ ಬೆಳೆ ಸೂಕ್ತವಾಗಿದ್ದು, ಅದರಲ್ಲಿ ವೆಂಗುರ್ಲಾ-4 ಮತ್ತು ವೆಂಗುರ್ಲಾ-7 ತಳಿ ಆಯ್ಕೆ ಮಾಡಿಕೊಳ್ಳುವುದು ಉತ್ತಮ’ ಎಂದು ತೋಟಗಾರಿಕೆ ಇಲಾಖೆಯ ನಿವೃತ್ತ ಅಧಿಕಾರಿ ಸುರೇಶ ಕುಂಬಾರ ಹೇಳಿದರು.

ತಾಲ್ಲೂಕಿನ ಹುಲಕೋಟಿ ಗ್ರಾಮದ ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಕೊಚ್ಚಿನ್ನ ಗೋಡಂಬಿ ಮತ್ತು ಕೋಕೊ ಅಭಿವೃದ್ಧಿ ನಿರ್ದೇಶನಾಲಯದ ಸಂಯುಕ್ತಾಶ್ರಯದಲ್ಲಿ ನಡೆದ ಗೋಡಂಬಿ ಬೆಳೆ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಡಂಬಿಗೆ ಉತ್ತಮ ಬೇಡಿಕೆ ಇದ್ದು, ರೈತರು ಗೋಡಂಬಿ ಸಂಸ್ಕರಣೆ ಮಾಡಿ ಅದನ್ನು ರಫ್ತು ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯಬೇಕು’ ಎಂದು ತಿಳಿಸಿದರು.

ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ನಿವೃತ್ತ ವಿಜ್ಞಾನಿ ಎಸ್.ಕೆ.ಮುದ್ಲಾಪುರ ಮಾತನಾಡಿ, ರೈತರು ಗೋಡಂಬಿಯನ್ನು ಲಾಭದಾಯಕವಾಗಿ ಬೆಳೆಯುವ ಕ್ರಮಗಳ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ಇದಕ್ಕೆ ಕೃಷಿ ವಿಜ್ಞಾನಿಗಳ ಸಲಹೆ ಮತ್ತು ಮಾರ್ಗದರ್ಶನ ಪಡೆಯಬೇಕು ಎಂದರು.

ಆರ್.ಕೆ.ಗಜ್ಜಿನಮಠ ಮಾತನಾಡಿ, ‘ವೃತ್ತಿಯಿಂದ ಆಯುರ್ವೇದಿಕ್ ಪ್ರಾಧ್ಯಾಪಕನಾದರೂ ಕೃಷಿ ನನ್ನನ್ನು ಆಕರ್ಷಿಸಿದೆ. ಗೋಡಂಬಿ ಬೆಳೆ ಒಣಬೇಸಾಯದಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿದೆ’ ಎಂದರು.

ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ವಿಭಾಗದ ನಿವೃತ್ತ ವಿಜ್ಞಾನಿ ವಿ.ಡಿ.ವೈಕುಂಠೆ ಅವರು, ಗೋಡಂಬಿ ಬೆಳೆ ಬೆಳೆಯುವ ಕುರಿತಾದ ತಮ್ಮ ಅನುಭವ ಹಂಚಿಕೊಂಡರು.

ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕ ಶೈಲೇಂದ್ರ ಬಿರಾದಾರ, ಹುಲಕೋಟಿ ಗ್ರಾಮದ ಪ್ರಗತಿಪರ ರೈತರಾದ ಸಿದ್ದಪ್ಪ ಕರಿಕಟ್ಟಿ, ಎನ್.ಆರ್.ಹೊಸಳ್ಳಿ, ಕೆ.ವಿ.ಆದಪ್ಪಗೌಡರ ವೇದಿಕೆಯಲ್ಲಿದ್ದರು.

ವಿಜ್ಞಾನಿ ಡಾ.ವಿನಾಯಕ ನಿರಂಜನ್ ಸ್ವಾಗತಿಸಿದರು. ಡಾ. ಮಂಜುಪ್ರಕಾಶ ಪಾಟೀಲ ನಿರೂಪಿಸಿದರು. ಡಾ.ಚೇತನ್ ಬಾಬು ಆರ್.ಟಿ. ವಂದಿಸಿದರು.

ಗದಗ ಜಿಲ್ಲೆಯ ಸುಮಾರು 165ಕ್ಕೂ ಹೆಚ್ಚು ಗೋಡಂಬಿ ಬೆಳೆಗಾರರು ಹಾಗೂ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ಬಳಿಕ ಗೋಡಂಬಿ ಬೇಸಾಯದ ಕುರಿತು ಹಾಗೂ ಕೀಟಗಳು ಮತ್ತು ರೋಗಗಳ ನಿರ್ವಹಣೆ ಕುರಿತು ತಾಂತ್ರಿಕ ತರಬೇತಿ ನೀಡಲಾಯಿತು. ರೈತರ ಜತೆ ಗುಂಪು ಚರ್ಚೆ ನಡೆಯಿತು. ತದನಂತರ ಗೋಡಂಬಿ ಬೆಳೆಯ ಪ್ರಾತ್ಯಕ್ಷಿಕೆ ತೋಟಗಳಿಗೆ ಕ್ಷೇತ್ರ ಭೇಟಿ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-23-655906575

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.