ಗದಗ: ‘ಮುಂಡರಗಿ ತಾಲ್ಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಮಾದಿಗ ಸಮುದಾಯದ ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ 50ಕ್ಕೂ ಹೆಚ್ಚು ಜನರು ವಾಲ್ಮೀಕಿ ಸಮಾಜಕ್ಕೆ ಸೇರಿದವರಾಗಿದ್ದು, ಮೇಲ್ಜಾತಿಯವರ ಕುಮ್ಮಕ್ಕಿನಿಂದಲೇ ಈ ಕೃತ್ಯ ಎಸಗಿದ್ದಾರೆ’ ಎಂದು ಗದಗ ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಆನಂದ ಶಿಂಗಾಡಿ ಆರೋಪ ಮಾಡಿದ್ದಾರೆ.

ಹಲ್ಲೆಯಿಂದ ಗಾಯಗೊಂಡು ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಶನಿವಾರ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.

‘ವಾಲ್ಮೀಕಿ ಸಮುದಾಯಕ್ಕೆ ಸೇರಿದವರ ಹೊಲದಲ್ಲಿ ಅನುಮತಿ ಕೇಳದೆ ನೀರು ಕುಡಿದ ಎನ್ನುವ ಒಂದೇ ಕಾರಣಕ್ಕೆ ಮಾದಿಗ ಸಮುದಾಯದ ಜನರ ಮೇಲೆ ವಾಲ್ಮೀಕಿ ಸಮುದಾಯದ ಯುವಕರು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಮೂರು ಜನರ ನಡುವೆ ನಡೆದ ಜಗಳ ಊರಿಗೂ ವಿಸ್ತರಿಸಿದ್ದರಿಂದಾಗಿ ಮೂವತ್ತಕ್ಕೂ ಹೆಚ್ಚು ಮಾದಿಗ ಸಮುದಾಯದ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜತೆಗೆ ಇದೇ ಸಮುದಾಯದ 122 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ’ ಎಂದು ಕಿಡಿಕಾರಿದರು.

‘ದಲಿತ ಸಮುದಾಯಗಳ ಮೇಲೆ ಜಿಲ್ಲೆಯಲ್ಲಿ ಎಸ್ಟಿ ಸಮುದಾಯದವರು ಮೇಲ್ಜಾತಿಯ ಕೆಲವು ಜಾತಿವಾದಿಗಳ ಕುಮ್ಮಕ್ಕಿನಿಂದ ನಿರಂತರವಾಗಿ ಹಲ್ಲೆ ನಡೆಸುತ್ತ ಬಂದಿದ್ದಾರೆ. ಇದರಿಂದಾಗಿ ಎಸ್ಸಿ, ಎಸ್ಟಿ ಪಟ್ಟಿಯಲ್ಲಿ ಬರುವ ಈ ಎರಡು ಸಮುದಾಯಗಳು ಜಿಲ್ಲೆಯಲ್ಲಿ ನಿರಂತರವಾಗಿ ಪರಸ್ಪರ ಹಲ್ಲೆಗೊಳಗಾಗುತ್ತಿವೆ’ ಎಂದು ದೂರಿದರು.

‘ವಾಲ್ಮೀಕಿ ಸಮುದಾಯದಿಂದ ಮಾರಾಣಾಂತಿಕವಾಗಿ ಹಲ್ಲೆಗೊಳಗಾದ ಮಾದಿಗ ಸಮುದಾಯದ 28 ಜನರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂಡರಗಿ ತಾಲ್ಲೂಕು ಆಸ್ಪತ್ರೆಯಲ್ಲಿ ವಾಲ್ಮೀಕಿ ಸಮುದಾಯದ 8 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಜತೆಗೆ ಒಟ್ಟು 122 ಜನರ ಮೇಲೆ ಕೇಸ್ ದಾಖಲಿಸಿದ್ದಾರೆ. ಆದರೆ, ಈ 122 ಜನರಲ್ಲಿ ನಾಲ್ಕು ಜನರು ಸುಮಾರು ವರ್ಷಗಳ ಹಿಂದೆಯೇ ತೀರಿಹೋಗಿದ್ದಾರೆ. ನೈಜವಾಗಿ ಪ್ರಕರಣ ದಾಖಲಿಸಬೇಕಿದ್ದರೆ ಹಲ್ಲೆಗೆ ಒಳಗಾದವರ ಮೇಲೆ ದಾಖಲಿಸಬಹುದಿತ್ತು. ಆದರೆ, ಸತ್ತವರು, ಊರಲ್ಲಿ ಇಲ್ಲದವರು, ಕಾಲೇಜಿಗೆ ಹೋಗಿದ್ದವರು, ಕೆಲಸಕ್ಕೆ ಹೋಗಿದ್ದವರ ಮೇಲೆ ಪ್ರಕರಣ ದಾಖಲಿಸಿರುವುದನ್ನು ನೋಡಿದರೆ ಇದರಲ್ಲಿ ಮಾದಿಗ ಸಮುದಾಯದ ವಿರುದ್ದ ಕೆಲವು ಮೇಲ್ಜಾತಿ ಸಮುದಾಯಗಳು ಷಡ್ಯಂತ್ರ ಮಾಡುತ್ತಿರುವುದು ಎದ್ದು ಕಾಣುತ್ತದೆ’ ಎಂದು ಆರೋಪ ಮಾಡಿದ್ದಾರೆ.

ಸಂಘದ ಗೌರವಾಧ್ಯಕ್ಷ ಬಸವರಾಜ ಕಡೇಮನಿ, ಪದಾಧಿಕಾರಿಗಳಾದ ಅನಿಲ ಕಾಳೆ, ಬಸವರಾಜ ಬಿಳೆಯಲಿ, ಮುತ್ತು ಚೌಡಣ್ಣವರ, ಪರಶು ಕಾಳೆ, ಶರೀಫ್ ಬಿಳೆಯಲಿ ಸೇರಿದಂತೆ ಅನೇಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-23-1847149518

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.