ಗದಗ: ‘ಗದಗ ಜಿಲ್ಲೆ ಜನಪದ ರಂಗಭೂಮಿಯ ಶ್ರೀಮಂತಿಕೆಯ ನೆಲ. ಜಿಲ್ಲೆಯಾದ್ಯಂತ ಇಂದಿಗೂ ಉಳಿದುಕೊಂಡು ಬಂದಿರುವ ದೊಡ್ಡಾಟ ಕಲೆಯೇ ಅದರ ಶ್ರೀಮಂತಿಕೆಗೆ ಸಾಕ್ಷಿ’ ಎಂದು ಕರ್ನಾಟಕ ಬಯಲಾಟ ಅಕಾಡೆಮಿಯ ಸಂಶೋಧನಾ ಸಹಾಯಕ ಅಂದಯ್ಯ ಅರವಟಗಿಮಠ ಹೇಳಿದರು.

ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ವತಿಯಿಂದ ನಡೆದ ಕಲಾವಿದರ ಮಾಹಿತಿ ಮತ್ತು ಹಸ್ತಪ್ರತಿಗಳ ಸಂಗ್ರಹಣ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು.

‘ಆಧುನಿಕತೆ ಭರದಲ್ಲಿ ಸಿಲುಕಿ ನಶಿಸಿ ಹೋಗುತ್ತಿರುವ ಕಲೆ, ಕಲಾವಿದ, ಕಲಾ ಪ್ರಕಾರಗಳನ್ನು ಉಳಿಸುವ ಅಗತ್ಯತೆ ಈ ಹೊತ್ತಿನ ತುರ್ತು. ಇಂತಹ ಪಾರಂಪರಿಕ ಕಲೆಯನ್ನು ಆಧುನಿಕ ಬದುಕಿನ ಅಗತ್ಯಗಳಿಗೂ ದುಡಿಸಿಕೊಳ್ಳುವ ಅಗತ್ಯವಿದೆ’ ಎಂದು ಹೇಳಿದರು.

‘ಬಯಲಾಟ ಕರ್ನಾಟಕದ ಪ್ರಾಚೀನ ಜನಪದ ರಂಗ ಪ್ರಕಾರವಾಗಿದೆ. ಬಯಲಿನಲ್ಲಿ ಆಡುವ ಆಟವೇ ಬಯಲಾಟ. ವರ್ಷವಿಡೀ ಹೊಲಗದ್ದೆಗಳಲ್ಲಿ ದುಡಿಯುವ ಜನ ಬದುಕಿನ ಬೇಗುದಿ ಮತ್ತು ಒತ್ತಡಗಳಿಂದ ಪಾರಾಗಿ ಸಂತೋಷ ಹಂಚಿಕೊಳ್ಳಲು ಹಬ್ಬದ ಜತೆಗೆ ಬಯಲಾಟ ಪ್ರದರ್ಶನಗಳನ್ನು ಹಮ್ಮಿಕೊಳ್ಳುವ ರೂಢಿ ನಮ್ಮಲ್ಲಿದೆ. ಕಲೆ, ಹಾಡು, ಕುಣಿತ, ಅಭಿನಯ ಮತ್ತು ವೇಷಭೂಷಣಗಳಿಂದ ಕೂಡಿದ ಈ ಕಲೆ ಅನಕ್ಷರಸ್ಥರು, ಅಕ್ಷರಸ್ಥರು ಮತ್ತು ಬಾಲಕ ಬಾಲಕಿಯರಿಂದ ವಯಸ್ಸಾದ ಹಿರಿಯರನ್ನು ರಂಜಿಸುವ ಸಮರ್ಥವಾದ ಮಾಧ್ಯಮ’ ಎಂದರು.

‘ಬಯಲಾಟವನ್ನು ಹಿಂದಿನಿಂದಲೂ ಉಳಿಸಿ ಬೆಳೆಸಿಕೊಂಡು ಬಂದವರು ಕಲಾವಿದರು. ಜೀವನ ಪೂರ್ತಿ ಕಲೆಗಾಗಿ ದುಡಿದ ಈ ಕಲಾವಿದರನ್ನು ಕುರಿತಂತೆ ಅಕ್ಷರ ಮಾಧ್ಯಮದಲ್ಲಿ ಮಾಹಿತಿ ದೊರಕುವುದಿಲ್ಲ. ಈ ಕಲೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಲು ಮೂಡಲಪಾಯ, ಬಯಲಾಟ, ದೊಡ್ಡಾಟ, ಸಣ್ಣಾಟ ಮತ್ತು ಶ್ರೀಕೃಷ್ಣಪಾರಿಜಾತ, ತೊಗಲು ಗೊಂಬೆಯಾಟ, ಸೂತ್ರದ ಗೊಂಬೆಯಾಟಗಳ ಕಲಾವಿದರ ಸಾಧನೆಗಳ ಕುರಿತು ಮಾಹಿತಿ ಸಂಗ್ರಹ ಆರಂಭವಾಗಿದೆ. ಕಲಾವಿದರ ಚರಿತ್ರೆಯು ಗ್ರಂಥಸ್ಥಗೊಳ್ಳುತ್ತಿರುವುದು ಮಹತ್ವಪೂರ್ಣವಾದದು’ ಎಂದು ತಿಳಿಸಿದರು.

ಮಾಹಿತಿ ಸಂಗ್ರಹಣ ಕಾರ್ಯದಲ್ಲಿ ಗ್ರಾಮದ ಕಲ್ಮೇಶ್ವರ ದೊಡ್ಡಾಟ ಮೇಳ, ವೀರಭದ್ರೇಶ್ವರ ಬಯಲಾಟ ಸಂಘ, ಬಸವೇಶ್ವರ ದೊಡ್ಡಾಟ ಮೇಳ, ಕಾಲಭೈರವ ದೊಡ್ಡಾಟ ಮೇಳಗಳ 50 ಮಂದಿ ಕಲಾವಿದರ ಮಾಹಿತಿ ಸಂಗ್ರಹಿಸಲಾಯಿತು.

ಬಹು ಹಿಂದಿನ ಕೃಷ್ಣಾರ್ಜುನ ಕಾಳಗ, ರತಿ ಕಲ್ಯಾಣ, ಮೂರೂವರೆ ವಜ್ರ, ದಕ್ಷಬ್ರಹ್ಮ ವಧೆ, ಅಂಧಕಾಸುರ ವಧೆ ದೊಡ್ಡಾಟಗಳ ಹಸ್ತಪ್ರತಿಗಳನ್ನು ಸಂಗ್ರಹಿಸಲಾಯಿತು.

ಕಾರ್ಯಕ್ರಮದಲ್ಲಿ ದೊಡ್ಡಾಟ ತಂಡಗಳ ಮುಖ್ಯಸ್ಥರಾದ ಪರಶುರಾಮ ಹೂಗಾರ, ಚೆನ್ನಪ್ಪ ಗಿಡಕೆಂಚನ್ನವರ, ತಿರಕಪ್ಪ ಹಳ್ಳಿ, ರುದ್ರಪ್ಪ ಕಮ್ಮಾರ, ಬಸಲಿಂಗಪ್ಪ ಕೊಸಲಾಪುರ, ಯಲ್ಲಪ್ಪ ಹೂಗಾರ, ದೇವೇಂದ್ರಪ್ಪ ಮೇಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.