ಗುರುವಾರ , ನವೆಂಬರ್ 14, 2019
19 °C

ಗದಗ: ಕರುವಿನಕೊಪ್ಪ ಗ್ರಾಮ ಸಂಪೂರ್ಣ ಜಲಾವೃತ

Published:
Updated:

ಗದಗ: ಜಿಲ್ಲೆಯಾದ್ಯಂತ ಸೋಮವಾರ ರಾತ್ರಿಯಿಡೀ ಧಾರಾಕಾರ ಮಳೆಯಾಗಿದೆ.

ಮಲಪ್ರಭಾ ಪ್ರವಾಹದಿಂದ ರೋಣ ತಾಲ್ಲೂಕಿನ ಕುರುವಿನಕೊಪ್ಪ, ಅಮರಗೋಳ, ಹೊಳೆಹಡಗಲಿ ಮೆಣಸಗಿ ಹಾಗೂ ಹೊಳೆಆಲೂರು ಗ್ರಾಮಗಳಿಗೆ ನೀರು ನುಗ್ಗಿದೆ. ಕುರುವಿನಕೊಪ್ಪ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ.

ಕುರುವಿನಕೊಪ್ಪ ಗ್ರಾಮಸ್ಥರನ್ನು ಸಂಪೂರ್ಣವಾಗಿ ಸೋಮವಾರವೇ ನವಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ. ಇನ್ನೂ ನೀರು ಹೆಚ್ಚುವ ಸಾಧ್ಯತೆ ಇದ್ದು, ನೆರೆ ಸಾಧ್ಯತೆ ಇರುವ ಇತರೆ ಗ್ರಾಮಗಳಿಂದ  ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಪೊಲೀಸರು ಹಾಗೂ ತಾಲ್ಲೂಕು ಆಡಳಿತದ ಸಿಬ್ಬಂದಿ  ಗ್ರಾಮಸ್ಥರಿಗೆ  ಸೂಚನೆ ನೀಡುತ್ತಿದ್ದಾರೆ.

ಪ್ರತಿಕ್ರಿಯಿಸಿ (+)