ಮುಳಗುಂದ: ‘ಕೃಷಿ ಇಲಾಖೆಯ ಯೋಜನೆಗಳನ್ನು ರೈತರು ಸದುಪಯೋಗ ಪಡಿಸಿಕೊಂಡು ಉನ್ನತಿ ಹೊಂದಬೇಕು, ಅಂದಾಗ ಮಾತ್ರ ಯೋಜನೆಗಳು ಯಶಸ್ವಿಯಾಗಲು ಸಾಧ್ಯ’ ಎಂದು ಸೊರಟೂರಿನ ಓಂಕಾರೇಶ್ವರ ಮಠದ ಫಕೀರೇಶ್ವರ ಸ್ವಾಮಿಜಿ ತಿಳಿಸಿದರು.

ಇಲ್ಲಿಗೆ ಸಮೀಪದ ಕಣವಿ ಗ್ರಾಮದ ಪ್ರಗತಿಪರ ರೈತ ಶರಣಪ್ಪಗೌಡ ಪಾಟೀಲ ಅವರ ತೋಟದಲ್ಲಿ ಗುರುವಾರ ನಡೆದ ರಿವಾರ್ಡ್ ಯೋಜನೆಯಲ್ಲಿ ನಿರ್ಮಿಸಿದ ಕೃಷಿ ಹೊಂಡಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಜಗತ್ತಿನ ಎಲ್ಲಾ ಕಾಯಕಕ್ಕಿಂತ ಒಕ್ಕಲುತನ ಬಹಳ ಶ್ರೇಷ್ಠ ಹಾಗಾಗಿ ರೈತನ ಹಿತ ಕಾಯುವ ಜವಾಬ್ದಾರಿ ನಮ್ಮೆಲ್ಲರದ್ದು’ ಎಂದರು.

ಕಾಂಗ್ರೆಸ್ ಯುವ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್.ಪಾಟೀಲ ಮಾತನಾಡಿ, ‘ರಿವಾರ್ಡ ಯೋಜನೆ ರೈತರ ಬದುಕಿನಲ್ಲಿ ಇಷ್ಟು ಬದಲಾವಣೆ ತರುವುದು ಸಾಧ್ಯವಾದರೆ ಇದು ಎಲ್ಲಾ ರೈತರಿಗೆ ತಲುಪುವಂತಾಗಬೇಕು’ ಎಂದು ತಿಳಿಸಿದರು.

ಗದಗ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರವನವರ ಮಾತನಾಡಿ, ‘ರಿವಾರ್ಡ್ ಜಲಾನಯನ ಯೋಜನೆ ವೈಜ್ಞಾನಿಕವಾಗಿ ಯೋಜಿತವಾಗಿದೆ. ಅದು ರೈತರ ಉನ್ನತಿಗಾಗಿ ಇದೆ. ಕೃಷಿ ಹೊಂಡದ ಜತೆಗೆ ತೋಟಗಾರಿಕೆ ಘಟಕದ ಅಡಿಯಲ್ಲಿ ಪೇರಲ ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವುದೇ ಇಲಾಖೆಯ ಉದ್ದೇಶ’ ಎಂದರು.

ಕೃಷಿ ಅಧಿಕಾರಿ ಎಫ್.ಸಿ.ಗುರಿಕಾರ, ತೋಟಗಾರಿಕೆ ಅಧಿಕಾರಿ ಶೈಲೇಂದ್ರ ಬಿರಾದಾರ, ಶಿದ್ದಪ್ಪ ಕೋರಿ, ಅಜ್ಜಣ್ಣ ಹುಗ್ಗೆನ್ನವರ, ಬಸವರಾಜ ಬಂದಕ್ಕನವರ, ಗಂಗಪ್ಪ ಗಡಾದ, ಪರಪ್ಪ ಕೊಳಿವಾಡ, ದೇವರೆಡ್ಡಿ ಅಗಸನಕೊಪ್ಪ ಸೇರಿದಂತೆ ರೈತರು ಇದ್ದರು. ನಂತರ ರಿವಾರ್ಡ್ ಯೋಜನೆಯ ಕೃಷಿ ಹೊಂಡಕ್ಕೆ ಬಾಗಿನ ಅರ್ಪಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-23-1241705277

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.