ಗದಗ: ಅವಳಿ ನಗರ ಸೇರಿದಂತೆ ಗದಗ ತಾಲ್ಲೂಕಿನ ಸುತ್ತಮುತ್ತ ಸೋಮವಾರ ಸಂಜೆ ಅರ್ಧ ಗಂಟೆ ಬಿರುಗಾಳಿ ಸಹಿತ ಜೋರು ಮಳೆ ಸುರಿಯಿತು.

ಬಿರುಗಾಳಿಯ ರಭಸಕ್ಕೆ ನಗರದ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಕಂಬ ಹಾಗೂ ಮರಗಳು ಮುರಿದುಬಿದ್ದವು. ನಗರದ ಜೆ.ಟಿ.ಕಾಲೇಜು ಸಮೀಪ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾಯಿತು.

ನಗರದ ಹೊರವಲಯದಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಹೋಂಗಾರ್ಡ್ ಒಬ್ಬರು ಮಳೆಯಲ್ಲೇ ಬಸ್ ಹತ್ತಲು ಓಡಿಕೊಂಡು ಬರುವಾಗ ತಗಡಿನ ಚಾವಣಿ ಕೂಡ ಜೋರಾಗಿ ಹಾರಿ ಬಿದ್ದಿತು. ಸ್ವಲ್ಪದರಲ್ಲೇ ಅವರು ಪ್ರಾಣಾಪಾಯದಿಂದ ಪಾರಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು.

ಗದಗ ನಗರದ ತರಕಾರಿ ಮಾರುಕಟ್ಟೆ ಸಮೀಪ ಇರಿಸಿದ್ದ ಪೊಲೀಸ್ ಬ್ಯಾರಿಕೇಡ್ಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಮಳೆಯ ರಭಸ ಜೋರಾಗಿದ್ದರಿಂದ ಚರಂಡಿಗಳು ಉಕ್ಕಿ ಹರಿದು, ಕೊಳಚೆಯೆಲ್ಲವೂ ರಸ್ತೆ ಮೇಲೆ ಬಿದ್ದಿತ್ತು. ಚರಂಡಿಗಳ ಮೇಲೆ ಎಗ್ ರೈಸ್ ಅಂಗಡಿ ನಡೆಸುವ ಬೀದಿಬದಿ ವ್ಯಾಪಾರಿಗಳು ಕೊಳಚೆಯನ್ನು ಬದಿಗೆ ಸರಿಸಲು ಹೆಣಗಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-23-605951789

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.