ಗದಗ: ‘ದಲಿತ, ಹಿಂದುಳಿದ, ಅಲ್ಲಸಂಖ್ಯಾತ ಸೇರಿದಂತೆ 70ಕ್ಕೂ ಅಧಿಕ ಸರ್ವ ಸಮಾಜಗಳು ಸೇರಿಕೊಂಡು ಕನೇರಿ ಶ್ರೀಗಳ ನೇತೃತ್ವದಲ್ಲಿ ಮೇ 31ರಂದು ನಗರದಲ್ಲಿ ಬೃಹತ್ ಹಿಂದೂ ಸಮಾವೇಶ ಆಯೋಜಿಸಿದ್ದು, ಇದನ್ನು ಹತ್ತಿಕ್ಕಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಂಚು ನಡೆಸಿವೆ. ಈ ಸಮಾವೇಶದ ಉದ್ದೇಶ ಅರಿಯದೇ ತಪ್ಪು ಸಂದೇಶ ನೀಡುತ್ತಿರುವವರು ನಾಲಗೆ ಹರಿಬಿಡುವುದನ್ನು ಬಂದ್ ಮಾಡಬೇಕು’ ಎಂದು ದಲಿತ ಮುಖಂಡ ಉಡಚಪ್ಪ ಹಳ್ಳಿಕೇರಿ ಆಗ್ರಹಿಸಿದರು.

‘ಸನಾತನ ಧರ್ಮವನ್ನು ಪ್ರತಿಪಾದಿಸುತ್ತ ಸಮಾಜದಲ್ಲಿ ಜನಜಾಗೃತಿ ಮೂಡಿಸುತ್ತಿರುವ ಕನೇರಿ ಶ್ರೀಗಳ ವಿರುದ್ಧ ಜಾತ್ಯತೀತವಾದಿಗಳು ಅನಿಸಿಕೊಂಡವರು ಅನಗತ್ಯವಾಗಿ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಶುಕ್ರವಾರ ನಡೆದ ಪ್ರತಿಕಾಗೋಷ್ಠಿಯಲ್ಲಿ ದೂರಿದರು.

‘ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿರುವ ಲಿಂಗಾಯತರು, ವೀರಶೈವರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಹಿಂದುಳಿದವರು, ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವ ಒಳಪಂಗಡಗಳಲ್ಲಿ ಭೇದ ಮೂಡಿಸುವ ಮೂಲಕ ಒಡಕು ಉಂಟು ಮಾಡುತ್ತಿದ್ದಾರೆ. ಈ ಪ್ರಗತಿಪರರಿಗೆ ಸಮಾಜದಲ್ಲಿನ ಎಲ್ಲರೂ ಒಂದಿಲ್ಲೊಂದು ಕಾರಣದಿಂದ ಕಚ್ಚಾಡಿದಾಗ ಮಾತ್ರವೇ ಅವರ ಉದ್ದೇಶ ಸಫಲವಾಗಲಿದೆ ಎಂಬ ಭ್ರಮೆಯಲ್ಲಿದ್ದಾರೆ’ ಎಂದು ಆರೋಪಿಸಿದರು.

‘ಮೌಢ್ಯತೆ ಬಗ್ಗೆ ಮಾತನಾಡುವ ವ್ಯಕ್ತಿಗಳು ಸಂಜೆ ಮನೆಗೆ ಹೋಗಿ ಪೂಜೆ ಮಾಡುತ್ತಾರೆ. ಇವರನ್ನು ನಂಬಬೇಕೇ? ಸಮಾಜದಲ್ಲಿ ಒಡಕು ಮೂಡಿಸುವ ಕೆಲಸ ಮಾಡುವುದನ್ನು ನಿಲ್ಲಿಸಬೇಕು. ಇವರು ಯಾವ ಪಕ್ಷದವರು ಎಂಬುದು ಇಂದಿಗೂ ಸ್ಪಷ್ಟವಾಗಿಲ್ಲ. ‘ನಾವು ಒಡೆದ ಮನಸ್ಸುಗಳನ್ನು ಕಟ್ಟುತ್ತೇವೆ’ ಎಂದು ಹೇಳುತ್ತಾರೆ. ಆದರೆ, ಇವರ ಮಾತಿಗೂ ಕೃತಿಗೂ ವ್ಯತ್ಯಾಸ ಇದೆ’ ಎಂದು ಆರೋಪಿಸಿದರು.

‘ಗದಗ ಜಿಲ್ಲೆ ಸೌಹಾರ್ದದ ನೆಲ. ಪಕ್ಷಾತೀತವಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. 70 ಸಮಾಜಗಳು ಒಂದು ಕಡೆಯಾದರೆ; ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರನ್ನೂ ಒಳಗೊಂಡು ಕಾರ್ಯಕ್ರಮ ಮಾಡುತ್ತಿದ್ದೇವೆ. ಇಲ್ಲಿ ನಡೆಸುವ ಹಿಂದೂ ಸಮಾವೇಶದಲ್ಲಿ ಶಿರಹಟ್ಟಿ ಫಕೀರೇಶ್ವರ ಶ್ರೀಗಳು, ತೋಂಟದ ಸಿದ್ಧರಾಮ ಸ್ವಾಮೀಜಿ ಸೇರಿದಂತೆ ನಾಡಿನ 300 ಸ್ವಾಮೀಜಿಗಳನ್ನು ಆಹ್ವಾನಿಸಲಾಗಿದೆ. ಮತೀಯ ಭಾವನೆ ಇಟ್ಟುಕೊಂಡು ಸಮಾವೇಶ ಆಯೋಜಿಸಿಲ್ಲ. ಹಿಂದೂ ಧರ್ಮ ಉಳಿಯಬೇಕು ಎಂಬ ಆಶಯದಿಂದ ಒಂಡೆದೆ ಸೇರುತ್ತಿದ್ದೇವೆ. ಮೇ 31ರಂದು ಹಿಂದೂ ಸಮಾವೇಶ ನಡೆಯುವುದು ಶತಸಿದ್ಧ. ಶಿವಶರಣರು ಗದುಗಿಗೆ ಬಂದಾಗ ಎಲ್ಲರೂ ಗೌರವಿಸಬೇಕು’ ಎಂದು ಹೇಳಿದರು.

ದಲಿತ ಮುಖಂಡರಾದ ಮೌನೇಶ ದಾಸರ, ಹುಲಗಪ್ಪ ವಾಲ್ಮೀಕಿ, ಅಶೋಕ ಭಜಂತ್ರಿ, ಈರಪ್ಪ ವಾಲ್ಮೀಕಿ, ಮಂಜುನಾಥ ಗುಡಿ, ಮಂಜುನಾಥ ಪೂಜಾರ, ಕುಮಾರ ನಾಡಗೇರ, ಮಂಜುನಾಥ ಗುಡಿಮನಿ, ಸ್ವರೂಪ ಹುಳ್ಳಿಕಾಶಿ, ವೆಂಕಟೇಶ ದೊಡ್ಡಮನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-23-1231674253

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.