ಗದಗ: ‘ಮೇ 31ರಂದು ನಗರದಲ್ಲಿ ಬಸವಾದಿ ಶರಣರ ಹಿಂದೂ ಬೃಹತ್ ಸಮಾವೇಶ ಆಯೋಜಿಸಿದ್ದು, ಈ ಸಮಾವೇಶದ ಸಮಿತಿಯಲ್ಲಿ ಇರುವವರನ್ನು ನೋಡಿದರೆ ಎಲ್ಲರೂ ಬಿಜೆಪಿ ಪಕ್ಷದ ಸದಸ್ಯರು ಹಾಗೂ ಇದರ ಮುಂಚೂಣಿಯಲ್ಲಿರುವ ಸಂಘ ಪರಿವಾರದ ಮುಖಂಡರು. ಇದು ಒಂದು ಕೋಮುವಾದಿ ಪಕ್ಷದ ಕಾರ್ಯಕ್ರಮ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಮತ್ತೂ ಹೇಳುವುದಾದರೆ ಇದೊಂದು ಲಿಂಗಾಯತ ಮತ್ತು ಶರಣ ಪರಂಪರೆ ಅಳಿಸಿಹಾಕುವ ಆರ್ಎಸ್ಎಸ್ನ ಅಜೆಂಡಾ ಆಗಿದೆ’ ಎಂದು ದಲಿತ ಮುಖಂಡ ಮುತ್ತು ಬಿಳೆಯಲಿ ಆರೋಪ ಮಾಡಿದ್ದಾರೆ.

‘ಈ ಬಸವಾದಿ ಶರಣರ ಹಿಂದೂ ಬೃಹತ್ ಸಮಾವೇಶ ಗದಗ ನಗರಕ್ಕೆ ಮಾತ್ರ ಸೀಮಿತವಾಗದೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿದೆ. ಈ ನಾಟಕದ ಪ್ರಮುಖ ಸೂತ್ರಧಾರರು ಆರ್ಎಸ್ಎಸ್ ಹಾಗೂ ಸಂಘ ಪರಿವಾರ. ಆರ್ಎಸ್ಎಸ್ನ ಪ್ರಮುಖ ಪ್ರಚಾರಕರಲ್ಲಿ ಒಬ್ಬರಾದ ಕನೇರಿ ಸ್ವಾಮಿಯನ್ನು ಕೈಕೋಲಾಗಿ ಬಳಸಿಕೊಂಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಅವರು ಕೇವಲ ಸಮಾವೇಶ ಮಾಡಿದ್ದರೆ ತಮ್ಮ ತಕರಾರು ಇರುತ್ತಿರಲಿಲ್ಲ. ಆದರೆ, ಅವರು ಹಿಂದೂ ಸಮಾವೇಶದ ಹೆಸರಿನಲ್ಲಿ ಯಾವ ಬಸವಾದಿ ಶರಣರು ಇವರ ಅಸಮಾನತೆಯ ವೈದಿಕ (ಈಗಿನ ಹಿಂದುತ್ವ) ಪರಂಪರೆಯನ್ನು, ಜಾತಿ ವ್ಯವಸ್ಥೆಯನ್ನು, ಮೇಲು, ಕೀಳು, ಸ್ತ್ರೀ ಅಸಮಾನತೆಯನ್ನು ಕಠೋರವಾಗಿ ವಿರೋಧಿಸಿದ್ದರೋ ಅವರ ಹೆಸರಿನಲ್ಲಿ ಈ ಸಂಘ ಪರಿವಾರದ ನಾಟಕ ಕಂಪನಿ ಬಸವಾದಿ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶವನ್ನು ಮಾಡುತ್ತಿದ್ದಾರೆ. ಇದರ ಹಿಂದೆ ದೊಡ್ಡ ರಾಜಕಾರಣ ಅಡಗಿದೆ’ ಎಂದು ಹರಿಹಾಯ್ದರು.

‘ಈ ಹಿಂದೆ ಕೂಡ ಇದೇ ಸಂಘ ಪರಿವಾರ ಹಿಂದೂ, ಹಿಂದುತ್ವದ ಹೆಸರಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಆದರೆ, ಲಿಂಗಾಯತ ಜನ ಅಷ್ಟಾಗಿ ಇವರಿಗೆ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಜನ ಇವರನ್ನು ತಿರಸ್ಕರಿಸುತ್ತ ಬಂದಿದ್ದಾರೆ. ಆದರೆ, ಹಿಂದುತ್ವದ ಸಿದ್ಧಾಂತವನ್ನು ವಿರೋಧಿಸುತ್ತ ಬಂದಿರುವ ಬಸವಾದಿ ಶರಣರ ಹೆಸರನ್ನು ಬಳಸಿಕೊಂಡು ಇಡೀ ರಾಜ್ಯದ ಲಿಂಗಾಯತ ಧರ್ಮವನ್ನು ಸರ್ವ ನಾಶ ಮಾಡಿ ಸಂಘ ಪರಿವಾರ ತನ್ನ ಹಿಂದುತ್ವದ ತೆಕ್ಕೆಗೆ ಬಳಸಿಕೊಳ್ಳಲು ಈ ಸಮಾವೇಶ ಮಾಡಲು ಹೊರಟಿದೆ. ರಾಜ್ಯದ ಬುದ್ಧಿವಂತ ಲಿಂಗಾಯತರು ಇವರ ದಾಳಕ್ಕೆ ಬಲಿ ಆಗದೆ ಅವರಿಗೆ ತಕ್ಕ ಉತ್ತರ ನೀಡಬೇಕು’ ಎಂದರು.

‘ಈ ಹಿಂದೂ ಬೃಹತ್ ಸಮಾವೇಶದ ನಾಟಕದ ಪ್ರಮುಖ ಪಾತ್ರಧಾರಿಯನ್ನಾಗಿ ಆರ್ಎಸ್ಎಸ್ ಕನೇರಿ ಸ್ವಾಮಿಯನ್ನು ಮುಂದು ಮಾಡಿದೆ. ಕನೇರಿ ಸ್ವಾಮಿ ಈಗ ಇಡೀ ವಚನ ಚಳವಳಿಯನ್ನು ಹತ್ತಿಕ್ಕುವ ಕೆಲಸದಲ್ಲಿ ನಿರತರಾಗಿದ್ದಾನೆ. ಬಸವಾದಿ ಶರಣರ ಹೆಸರಿನಲ್ಲಿ ಸುಳ್ಳು ಇತಿಹಾಸವನ್ನು ಜನರ ತಲೆಗೆ ತುಂಬಲು ಹೊರಟಿದ್ದಾನೆ. ಅಶ್ಲೀಲ ಶಬ್ದಗಳಿಂದ ಲಿಂಗಾಯತ ಸ್ವತಂತ್ರ ಧರ್ಮದ ಪರವಾಗಿ ಇರುವ ಅದಕ್ಕಾಗಿ ಹೋರಾಡುತ್ತಿರುವ, ಕೆಲಸ ಮಾಡುವ ಲಿಂಗಾಯತ ಮಠಾಧೀಶರಿಗೆ ಹೀಯಾಳಿಸುವ ಕೆಲಸದಲ್ಲಿ ನಿರತರಾಗಿದ್ದಾನೆ’ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

‘ಗದಗ ನಗರದ ನಿಜಾಚರಣೆಯ ಲಿಂಗಾಯತರು, ಪ್ರಜ್ಞಾವಂತ ನಾಗರಿಕರು ದಲಿತ, ಪ್ರಗತಿಪರ ಸಂಘಟನೆಗಳು ಕೂಡಿ ಈ ಹಿಂದುತ್ವದ ಸಮಾವೇಶಕ್ಕೆ ತೀವ್ರ ಪ್ರತಿರೋಧ ಒಡ್ಡಬೇಕು. ವಚನ ಚಳವಳಿ ಹಾಗೂ ನಮ್ಮ ಸಂವಿಧಾನವನ್ನು ಅಪ್ರಸ್ತುತಗೊಳಿಸಲು ಹೊರಟಿರುವ ಈ ಸಂಘ ಪರಿವಾರದ ಮುಖವಾಡಗಳನ್ನು ಕಳಚಿ ಇವರ ಬಣ್ಣ ಬಯಲು ಮಾಡಲು ಎಲ್ಲರೂ ಒಂದಾಗಬೇಕು’ ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-23-1048338140

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.