ಗದಗ: ಇದೇ ತಗಡಿನ ಶೆಡ್ನಲ್ಲಿ ನಮ್ಮ ಕುಟುಂಬ 20 ರಂಜಾನ್ ಆಚರಣೆ ಮಾಡಿ ಮುಗಿಸಿದೆ. ಆದರೆ, ನಮ್ಮ ಕಷ್ಟಗಳು ನೀಗಿಲ್ಲ. ಸ್ವಂತಕ್ಕೊಂದು ಸೂರು ಸಿಕ್ಕಿಲ್ಲ. ಮಳೆಯಿಂದ ಅನಾಹುತವಾದಾಗ ಅಧಿಕಾರಿಗಳು, ನಾಯಕರು ಬರುತ್ತಾರೆ. ಸಾಂತ್ವನ ಹೇಳಿ, ಭರವಸೆ ಕೊಟ್ಟು ಹೋಗುತ್ತಾರೆ. ಆದರೆ, ಪರಿಸ್ಥಿತಿ ಮಾತ್ರ ಬದಲಾಗಿಲ್ಲ....

ಮುಂಗಾರು ಪೂರ್ವ ಮಳೆಯ ಅಬ್ಬರಕ್ಕೆ ಸಿಕ್ಕು, ಇರುವ ಸೂರನ್ನೂ ಕಳೆದುಕೊಂಡು ನಿರಾಶ್ರಿತ ಕೇಂದ್ರ ಸೇರಿರುವ ಗಂಗಿಮಡಿ ನಿವಾಸಿಯೊಬ್ಬರು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ನೇತೃತ್ವದ ನಿಯೋಗದ ಮುಂದೆ ಹೀಗೆ ಅಳಲು ತೋಡಿಕೊಂಡರು.

ಸಂತ್ರಸ್ತರ ಕಷ್ಟ ಆಲಿಸಿದ ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಆರ್.ಗೋವಿಂದಗೌಡ್ರ ಮಾತನಾಡಿ, ‘ಗಂಗಿಮಡಿ ಶಾಲೆ ಸುತ್ತಮುತ್ತ 15 ವರ್ಷಗಳಿಗೂ ಹೆಚ್ಚು ಸಮಯದಿಂದ ನೂರಕ್ಕೂ ಅಧಿಕ ಕುಟುಂಬಗಳು ಶೆಡ್ ಹಾಕಿಕೊಂಡು ವಾಸಿಸುತ್ತಿವೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಇವರ ಕಷ್ಟಕ್ಕೆ ಸ್ಪಂದಿಸಿ, ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿಲ್ಲ’ ಎಂದು ಕಿಡಿಕಾರಿದರು.

‘ದಿನದ ದುಡಿಮೆಯನ್ನೇ ನಂಬಿ ಬದುಕುವ ಕೂಲಿ ಕಾರ್ಮಿಕರ ಬದುಕು ಈಗ ಬೀದಿಗೆ ಬಿದ್ದಿದೆ. ಆದರೆ, ಕಾಂಗ್ರೆಸ್ ಸರ್ಕಾರದ ಸಚಿವರು ಸಾಧನಾ ಸಮಾವೇಶ ಮಾಡಿ, ಬಡವರನ್ನು ಉದ್ಧರಿಸಿದ್ದೇವೆ ಎನ್ನುತ್ತಿದ್ದಾರೆ. ಇಲ್ಲಿನ ನಿವಾಸಿಗಳಿಗೆ ಮೂಲಸೌಕರ್ಯಗಳೇ ಇಲ್ಲ. ಮಳೆಗಾಲದಲ್ಲಿ ಬದುಕು ಅಸಹನೀಯವಾಗುತ್ತದೆ. ಆದರೂ, ಸಚಿವರು ಇವರ ಕಷ್ಟ ಬಗೆಹರಿಸಲು ಮುಂದಾಗಿಲ್ಲ’ ಎಂದು ಆರೋಪ ಮಾಡಿದರು.

‘ಗಂಗಿಮಡಿ ಭಾಗದಲ್ಲಿ ನಿರಾಶ್ರಿತರಿಗೆಂದೇ ಹಲವು ಮನೆಗಳನ್ನು ಕಟ್ಟಲಾಗಿದೆ. ಆದರೆ, ಫಲಾನುಭವಿಗಳಿಗೆ ಇನ್ನೂ ಹಂಚಿಕೆಯಾಗಿಲ್ಲ. ಈಗ ಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಅಲ್ಲಿ ವಸತಿ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದರು.

ನಿಯೋಗದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೀರನಗೌಡ ನಾಡಗೌಡ್ರ, ಬಸವರಾಜ ಅಪ್ಪನವರ, ಪ್ರಭುರಾಜಗೌಡ ಪಾಟೀಲ, ಪ್ರಫುಲ್ ಪುಣೇಕರ, ವಿರುಪಾಕ್ಷಯ್ಯ ಹಿರೇಮಠ, ಶ್ರೀಕಾಂತಗೌಡ ಪಾಟೀಲ, ಆಕಾಶ್, ಹುಸೇನಸಾಬ ಸೇರಿದಂತೆ ಹಲವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-23-847996263

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.