ಗದಗ: ನಗರದ ಜವಳಗಲ್ಲಿಯ ಸಮೀಪದ ರಾಜಕಾಲುವೆಯೊಳಗಿದ್ದ ಕುಡಿಯುವ ನೀರಿನ ಪೈಪ್ಲೈನ್ ಸ್ಥಳಾಂತರಕ್ಕೆ ನಗರಸಭೆ ಚಾಲನೆ ನೀಡಿದೆ.

ಜವಳಗಲ್ಲಿಯ ರಾಜಕಾಲುವೆಯಲ್ಲಿ ಕುಡಿಯುವ ನೀರಿನ ಪೈಪ್ಹಾದು ಹೋಗಿದ್ದರಿಂದ, ಚರಂಡಿ ನೀರು, ಕಲುಷಿತ ನೀರು ಪೂರೈಕೆಯಾಗುವ ಭೀತಿ ಎದುರಾಗಿತ್ತು. ಈ ಬಗ್ಗೆ ನಗರಸಭೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿತ್ತು. ಈಗ ಗದಗ- ಬೆಟಗೇರಿ ನಗರಸಭೆ ಪೌರಾಯುಕ್ತರು ಪೈಪ್ ಲೈನ್ ಸ್ಥಳಾಂತರ ಕಾರ್ಯಕ್ಕೆ ಕ್ರಮವಹಿಸಿದ್ದಾರೆ.

ರಾಜಕಾಲುವೆ ಪಕ್ಕದಲ್ಲೇ ಇರುವ ಕೋಳಿ ಮಾರುಕಟ್ಟೆಯ ತ್ಯಾಜ್ಯವನ್ನು ನೇರವಾಗಿ ಕಾಲುವೆಗೆ ಎಸೆಯಲಾಗುತ್ತಿದೆ. ಇದು ಇಡೀ ಪ್ರದೇಶವನ್ನು ರೋಗಗಳ ತಾಣವನ್ನಾಗಿ ಮಾಡುತ್ತಿದೆ. ಕೂಡಲೇ ಈ ತ್ಯಾಜ್ಯವನ್ನು ಜನವಸತಿ ಇಲ್ಲದ ದೂರದ ಜಾಗದಲ್ಲಿ ವಿಲೇವಾರಿ ಮಾಡಲು ಅಧಿಕಾರಿಗಳು ಆದೇಶಿಸಬೇಕು ಎಂದು ಸ್ಥಳೀಯರಾದ ಕೃಷ್ಣಾ ಹಡಪದ ಆಗ್ರಹಿಸಿದ್ದಾರೆ.

ರಾಜಕಾಲುವೆ ಪಕ್ಕದ ರಸ್ತೆಯ ಮಣ್ಣು ಕುಸಿಯುತ್ತಿದ್ದು, ಪ್ರತಿದಿನ ಸಂಚರಿಸುವ ಶಾಲಾ ಮಕ್ಕಳು ಹಾಗೂ ಜನಸಾಮಾನ್ಯರಿಗೆ ಇದು ಮೃತ್ಯುಕೂಪವಾಗಿ ಪರಿಣಮಿಸಿದೆ. ಪೈಪ್ ಸ್ಥಳಾಂತರದ ನಂತರ ಈ ರಸ್ತೆಯನ್ನು ವೈಜ್ಞಾನಿಕವಾಗಿ ದುರಸ್ತಿಗೊಳಿಸಿ, ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ರಾಜಕಾಲುವೆಯಲ್ಲಿ ಕಸ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಮತ್ತು ನಗರಸಭೆ ಈ ಭಾಗದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

‘ಜವಳಗಲ್ಲಿಯ ರಾಜಕಾಲುವೆ ಪ್ರದೇಶದಲ್ಲಿ ಕುಡಿಯುವ ನೀರಿನ ಪೈಪ್ಲೈನ್ನಿಂದಾಗುತ್ತಿದ್ದ ಗಂಭೀರ ಸಮಸ್ಯೆಯನ್ನು ಗಮನಕ್ಕೆ ತಂದಕೂಡಲೇ, ಪೌರಾಯುಕ್ತರು ಸ್ಥಳ ಪರಿಶೀಲಿಸಿ ಕಾಮಗಾರಿ ಆರಂಭಿಸುವಂತೆ ಆದೇಶಿಸಿರುವುದು ಶ್ಲಾಘನೀಯ’ ಎಂದು ಕೃಷ್ಣಾ ಹಡಪದ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.