ಗದಗ: ‘ಶಕ್ತಿದೇವಿ ಕರಿಯಮ್ಮ ದೇವಿಯು ಈ ಭಾಗದಲ್ಲಿ ಜಾಗೃತವಾಗಿದ್ದಾಳೆ. ತನ್ನನ್ನು ನಂಬಿರುವ ಭಕ್ತರ ನೋವು– ನಲಿವುಗಳಿಗೆ ಸ್ಪಂದಿಸುವ ಮೂಲಕ ಅವರ ಬೇಕು ಬೇಡಿಕೆಗಳನ್ನು ಈಡೇರಿಸುವುದರ ಜತೆಗೆ ಸದಾ ಇಲ್ಲಿಯೇ ನೆಲೆಸಿದ್ದಾಳೆ’ ಎಂದು ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಡಿ.ಆರ್.ಪಾಟೀಲ ಹೇಳಿದರು.

ನಗರದ ಕರಿಯಮ್ಮಕಲ್ಲು ಬಡಾವಣೆ ಸುಧಾರಣಾ ಸಮಿತಿ ವತಿಯಿಂದ ಬುಧವಾರ ಆರಂಭಗೊಂಡ ಕರಿಯಮ್ಮದೇವಿಯ 97ನೇ ಜಾತ್ರಾಮಹೋತ್ಸವ ಸಮಾರಂಭದ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಗದಗ ಬೆಟಗೇರಿ ನಗರಸಭೆ ಸದಸ್ಯ ಎಲ್.ಡಿ. ಚಂದಾವರಿ ಗೌರವ ಅಧ್ಯಕ್ಷತೆಯಲ್ಲಿ ಕರಿಯಮ್ಮದೇವಿಯ ಜಾತ್ರಾ ಮಹೋತ್ಸವ ಅಚ್ಚುಕಟ್ಟಾಗಿ ನಡೆದು ಬಂದಿದೆ. ಕರಿಯಮ್ಮಕಲ್ಲ ಸುಕ್ಷೇತ್ರ ಶಕ್ತಿ ದೇವಿಯ ಪವಾಡ ಕ್ಷೇತ್ರವಾಗಿದೆ. ತಾಯಿ ಆಶೀರ್ವಾದಕ್ಕೆ ಪಾತ್ರರಾಗಿರುವ ನಾವೆಲ್ಲರೂ ಧನ್ಯರು’ ಎಂದರು.

ಅಪ್ಪಣ್ಣ ಸೊರಟೂರ, ಮಂಜುನಾಥ, ಗಣೇಶ ಭಟ್ ಪುರಾಣಿಕ್, ಕೃಷ್ಣ ಸೊರಟೂರ, ಶ್ರೀಧರ ನೇತ್ರತ್ವದ ಪುರೋಹಿತರ ತಂಡ ಹಲವು ಧಾರ್ಮಿಕ ವಿಧಿ ವಿಧಾನದಂತೆ ಚಂಡಿಕಾ ಹೋಮ ಧಾರ್ಮಿಕ ಕೈಂಕರ್ಯವನ್ನು ನೆರವೇರಿಸಿದರು. ಕರಿಯಮ್ಮದೇವಿ ಜಾತ್ರಾ ಸಮಿತಿ ಅಧ್ಯಕ್ಷ ಶಂಕರ ಹಾನಗಲ್, ಪ್ರತಿಭಾ ಹಾನಗಲ್ ಚಂಡಿಕಾ ಹೋಮದಲ್ಲಿ ಭಾಗವಹಿಸಿದ್ದರು.

ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರಂಗೋಲಿ, ಚಿತ್ರಕಲೆ ಹಾಗೂ ವಚನ ಗಾಯನ ಸ್ಫರ್ಧೆಯ ನಿರ್ಣಾಯಕರಾಗಿ ಎಸ್.ಬಿ. ಹಡಗಲಿ, ಗೀತಾ ಅಣ್ಣಿಗೇರಿ, ಭುವನೇಶ್ವರಿ ಹಿರೇಮಠ ಕಾರ್ಯನಿರ್ವಹಿಸಿದರು.

ಗೌರವ ಅಧ್ಯಕ್ಷ ಎಲ್.ಡಿ.ಚಂದಾವರಿ, ಉಪಾಧ್ಯಕ್ಷರಾದ ಎಚ್.ಬಿ.ಶಿರಗುಂಪಿ, ಪ್ರಧಾನ ಕಾರ್ಯದರ್ಶಿ ಜೆ.ಬಿ.ಗಾರವಾಡ, ಕೋಶಾಧ್ಯಕ್ಷ ಬಿ.ಎಸ್.ಕಂಟಿ, ಯುವ ಸಂಘಟನಾ ಕಾರ್ಯದರ್ಶಿ ಜಗದೀಶ ಪೂಜಾರ, ಕಾರ್ಯಾಧ್ಯಕ್ಷ ಸಿ.ಕೆ.ಮಾಳಶೆಟ್ಟಿ, ಉಪಾಧ್ಯಕ್ಷ ಜಿ.ಕೆ.ತಮ್ಮಣ್ಣವರ, ಸಹ ಕಾರ್ಯದರ್ಶಿ ಎಂ.ಡಿ.ದೇಸಾಯಿಗೌಡ್ರ, ಎಚ್.ಡಿ.ಪಾಟೀಲ್, ಮಹಿಳಾ ಸಂಘಟನಾ ಕಾರ್ಯದರ್ಶಿ ವಿಜಯಲಕ್ಷ್ಮೀ ದಿಂಡೂರ ಸೇರಿದಂತೆ ಪದಾಧಿಕಾರಿಗಳು, ಭಕ್ತರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260319-23-1104382731

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.