ಗದಗ: ‘12ನೇ ಶತಮಾನದ ಶರಣರು ಕಾಯಕ-ದಾಸೋಹದ ಪರಿಕಲ್ಪನೆಯನ್ನು ಜಗತ್ತಿಗೆ ಸಾರಿದ್ದಾರೆ. ಕಾಯಕದಿಂದ ಸಮೃದ್ಧಿ, ದಾಸೋಹದಿಂದ ಸಂತೃಪ್ತಿ ಸಿಗುತ್ತದೆ. ಸತ್ಯ ಶುದ್ಧ ಕಾಯಕ ನಮ್ಮ ಸಂಸ್ಕೃತಿ ಆಗಬೇಕು’ ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ನಗರದ ತೋಂಟದಾರ್ಯ ಮಠದ ಆವರಣದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಡೆದ 2,796ನೇ ಶಿವಾನುಭವದಲ್ಲಿ ಮಾತನಾಡಿದರು.

ಶರಣರು ಹಾಕಿಕೊಟ್ಟ ಕಾಯಕ ದಾಸೋಹದಿಂದ ಬಡತನ ಮತ್ತು ಹಸಿವು ಮುಕ್ತ ಕಲ್ಯಾಣ ರಾಜ್ಯವನ್ನು ಕಟ್ಟಲು ಸಾಧ್ಯವಿದೆ. ಶರಣರು ನಡೆದ ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆದರೆ ನಾವು ಕಲ್ಯಾಣ ರಾಜ್ಯದ ಪ್ರತಿನಿಧಿಗಳು ಆಗಲು ಸಾಧ್ಯವಿದೆ ಎಂದರು.

‘12ನೇ ಶತಮಾನದಲ್ಲಿದ್ದ ಶರಣರಾದ ಹಡಪದ ರೇಚಣ್ಣ, ಕ್ಷೌರಿಕ ರೇಮಯ್ಯ, ಕನ್ನಡಿ ಕಾಯಕದ ಆಮುಗಿ ದೇವಯ್ಯ, ಓಲೆಯ ಶಾಂತಯ್ಯ, ತುರುಗಾಯಿ ರಾಮಣ್ಣ, ಗ್ರಾಮ ರಕ್ಷಣೆಗೆ ಇದ್ದ ತಳವಾರ ಕಾಮಿದೇವಯ್ಯ ಮೊದಲಾದವರು ತಮ್ಮ ಕಾಯಕವನ್ನು ಮಾಡುವುದರ ಜೊತೆ ಜೊತೆಗೆ ವಚನ ರಚನೆಗಳನ್ನು ಮಾಡಿ ಕನ್ನಡ ವಚನ ಸಾಹಿತ್ಯವನ್ನು, ಲಿಂಗಾಯತ ಧರ್ಮವನ್ನು ಬಾನೆತ್ತರಕ್ಕೆ ಕೊಂಡೊಯ್ದಿದ್ದಾರೆ’ ಎಂದು ಹೇಳಿದರು.

ಕಾಯಕ ಸಂಸ್ಕೃತಿ ಬಗ್ಗೆ ಡಾ. ಆರ್.ಎಂ.ಕಲ್ಲನಗೌಡರ ಮಾತನಾಡಿ, 12ನೇ ಶತಮಾನದಲ್ಲಿ ಶರಣರು ಕೇವಲ ತತ್ವಸಿದ್ಧಾಂತಗಳನ್ನು ಬೋಧಿಸಲಿಲ್ಲ. ವಚನಗಳನ್ನು ರಚನೆ ಮಾಡುವುದರೊಂದಿಗೆ ತಮ್ಮ ವಚನಗಳ ಆಶಯದಂತೆ ನಡೆದು ತೋರಿಸಿದರು. ಕೆಲಸವನ್ನು ಕಾಯಕದ ಎತ್ತರಕ್ಕೆ ಏರಿಸಿದ ಹಿರಿಮೆ ಬಸವಾದಿ ಶರಣರಿಗೆ ಸಲ್ಲುತ್ತದೆ ಎಂದು ಹೇಳಿದರು.

ಶರಣರ ವಚನಗಳನ್ನು ಕೃಷ್ಣಪ್ರಿಯ ಬದಿ ಮತ್ತು ತನುಶ್ರೀ ಬದಿ ಸಹೋದರಿಯರು ಗಾಯನದ ಮೂಲಕ ಪ್ರಸ್ತುತಪಡಿಸಿದರು.

ಚಾರ್ವಿ ರವಿಕುಮಾರ ಧರ್ಮ ಗ್ರಂಥ ಪಠಿಸಿದರು. ದೀಕ್ಷಾ ಎಸ್. ಲಮಾಣಿ ವಚನ ಚಿಂತನ ಕಾರ್ಯಕ್ರಮ ನಡೆಸಿಕೊಟ್ಟರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ ಕಾರ್ಯದರ್ಶಿ ಸಿದ್ದರಾಮೇಶ ಪಟ್ಟೇದ ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕಮಠ, ಆದೇಶ ಎಸ್. ಅಂಗಡಿ ಹಾಗೂ ಸಂಗೀತ ಕಲಾವಿದರಾದ ಪ್ರೊ. ಪಾಠಕ ದಂಪತಿ ಹಾಗೂ ಭಕ್ತರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-23-1296420226

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.