ಗದಗ: ತಾಲ್ಲೂಕಿನ ಲಕ್ಕುಂಡಿಯ ಮಾರುತಿ ದೇವಸ್ಥಾನದ ಆವರಣದಲ್ಲಿ ಗದಗ ಗ್ರಾಮೀಣ ಪೊಲೀಸ್ ಠಾಣೆಯ ವತಿಯಿಂದ ಸೈಬರ್ ಅಪರಾಧಗಳನ್ನು ತಡೆಗಟ್ಟುವ ಕುರಿತು ಕಾನೂನು ಅರಿವು ಕಾರ್ಯಕ್ರಮ ನಡೆಯಿತು.

ಲಕ್ಕುಂಡಿ ಪೊಲೀಸ್ ಪೇದೆ ಪ್ರವೀಣ ಶಾಂತಪ್ಪನವರ ಮಾತನಾಡಿ, ‘ರೈತರು ಪರಿಚಯವಿಲ್ಲದ ವ್ಯಕ್ತಿಗೆ ಕೃಷಿ ದಾಸ್ತಾನು ಮಾರಬಾರದು, ಕೇವಲ ನೂರಾರು ರೂಪಾಯಿ ಉಳಿತಾಯ ಮಾಡಲು ಹೋಗಿ ದೂರದಿಂದ ಬಂದ ಖರೀದಿದಾರರಿಗೆ ದಾಸ್ತಾನು ಕೊಡಬೇಡಿ, ಸರ್ಕಾರದ ಪರವಾಗಿ ಹೊಂದಿರುವ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹೋಗಿ ಮರಾಟ ಮಾಡಿ, ಕೃಷಿ ಪರಿಕರಗಳನ್ನು ಅಧಿಕೃತ ಮಾರಾಟಗಾರರಿಂದ ಖರೀದಿಸಿ, ಸರ್ಕಾರಕ್ಕೆ ತೆರಿಗೆಯನ್ನು ಭರಿಸಿ, ರಿಯಾಯಿತಿ ಪಡೆಯಿರಿ. ಆನ್ಲೈನ್ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು ತಮ್ಮ ಬ್ಯಾಂಕ್ ಖಾತೆಯನ್ನು ಯಾರಿಗೂ ನೀಡಬಾರದು, ಮೊಬೈಲ್ಗೆ ಬರುವ ಒಟಿಪಿ ಸಂದೇಶ ಹಂಚಿಕೊಳ್ಳಬಾರದು, ಮೋಸ ಹೋಗಿದ್ದರೆ ತಕ್ಷಣವೇ ಸಹಾಯವಾಣಿ 1930 ಮತ್ತು 112 ಕ್ಕೆ ಕರೆ ಮಾಡಬೇಕು’ ಎಂದು ತಿಳಿಸಿದರು. ಎ.ಎಸ್.ಐ. ವಿ.ಎಸ್.ಭಿಕ್ಷಾವತಿಮಠ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-23-719643590

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.