ಗದಗ: ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದಿರುವ ಪ್ರಾಚ್ಯ ಅವಶೇಷ ಅನ್ವೇಷಣೆ ಸಪ್ತಾಹದಲ್ಲಿ ಗುರುವಾರ ಇಲ್ಲಿನ ದುರ್ಗಾದೇವಿ ಕೆರೆಯಲ್ಲಿ ಹೊಯ್ಸಳ ಶೈಲಿಯ ಎರಡು ಪ್ರಾಚ್ಯ ಅವಶೇಷಗಳು ಸಿಕ್ಕಿವೆ.

ಕಲಾತ್ಮಕತೆಯಿಂದ ಕೂಡಿದ ಈ ಪ್ರಾಚ್ಯ ಅವಶೇಷದಲ್ಲಿ ವಾದ್ಯ ನುಡಿಸುತ್ತಿರುವ ಪುರುಷ ಮತ್ತು ನೃತ್ಯನಿರತ ಭಂಗಿಯಲ್ಲಿರುವ ಸ್ತ್ರೀ ಶಿಲ್ಪಗಳಿವೆ. ಒಂದು ಶಿಲ್ಪದಲ್ಲಿ ಪುರುಷ ಮದ್ದಳೆಯನ್ನು ಬಾರಿಸುತ್ತಿದ್ದು, ಅದಕ್ಕೆ ಸ್ತ್ರೀ ನೃತ್ಯ ಮಾಡುತ್ತಿದ್ದಾಳೆ. ಮತ್ತೊಂದರಲ್ಲಿ ಪುರುಷ ವೇಣುವಾದನದಲ್ಲಿ ತಲ್ಲೀನನಾಗಿದ್ದರೆ, ಮಹಿಳೆಯು ನೃತ್ಯ ಮಾಡುತ್ತಿದ್ದಾಳೆ.

‘ಈ ಪ್ರಾಚ್ಯ ಅವಶೇಷಗಳ ಕೆತ್ತನೆ ಗಮನಿಸಿದರೆ, ಹೊಯ್ಸಳರ ಶೈಲಿಯ ಪ್ರಭಾವ ಇರುವುದನ್ನು ಕಾಣಬಹುದು’ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಮಿತಿ ಸದಸ್ಯ ಸಿದ್ದು ಪಾಟೀಲ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-51-1426824676

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.