ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಗದಗ ನಗರದಲ್ಲಿ ಬಿಜೆಪಿ; ಗ್ರಾಮೀಣದಲ್ಲಿ ಕೈ ಮೇಲುಗೈ

ಗದಗ ವಿಧಾನಸಭಾ ಕ್ಷೇತ್ರ; ಡಿ.ಆರ್‌ಗಿಂತ ಉದಾಸಿಗೇ ಹೆಚ್ಚು ಮತ
Last Updated 25 ಮೇ 2019, 19:45 IST
ಅಕ್ಷರ ಗಾತ್ರ

ಗದಗ: ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಜಿಲ್ಲೆಯ ರೋಣ, ಶಿರಹಟ್ಟಿ ಮತ್ತು ಗದಗ ವಿಧಾನಸಭಾ ಕ್ಷೇತ್ರಗಳಲ್ಲಿ, ಕಾಂಗ್ರೆಸ್‌ ಅಭ್ಯರ್ಥಿ ಡಿ.ಆರ್‌ ಪಾಟೀಲ ಅವರಿಗಿಂತಲೂ, ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರು ಹೆಚ್ಚು ಮತಗಳನ್ನು ಪಡೆದು ಗಮನ ಸೆಳೆದಿದ್ದಾರೆ.

ಗದಗ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1.58 ಲಕ್ಷ ಮತಗಳು ಚಲಾವಣೆ ಆಗಿದ್ದು, ಇದರಲ್ಲಿ, 81,008 ಮತಗಳು ಉದಾಸಿಗೆ ಮತ್ತು 74,015 ಮತಗಳು ಡಿ.ಆರ್‌ ಅವರಿಗೆ ಲಭಿಸಿವೆ. ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ನಡುವಿನ ಮತಗಳ ಅಂತರ 6993.

ಡಿ.ಆರ್‌ ಪಾಟೀಲ ಅವರು ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮತ್ತು ಅವರ ಸಹೋದರ ಎಚ್‌.ಕೆ ಪಾಟೀಲ ಅವರು ಸತತ ಎರಡನೆಯ ಬಾರಿ ಶಾಸಕರಾಗಿರುವ ಗದಗ ಕ್ಷೇತ್ರದಲ್ಲೇ ಕಾಂಗ್ರೆಸ್‌ಗೆ ಈ ಬಾರಿ ಹಿನ್ನಡೆಯಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ. ಪಾಟೀಲ ಅವರು, ಬಿಜೆಪಿ ಅಭ್ಯರ್ಥಿಗಿಂತ 1868 ಮತಗಳನ್ನು ಹೆಚ್ಚು ಪಡೆದಿದ್ದರು. ಆದರೆ, ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ ಅಭ್ಯರ್ಥಿಗಿಂತಲೂ 6993 ಮತಗಳನ್ನು ಹೆಚ್ಚು ಪಡೆದಿದ್ದಾರೆ.

ಬಿಜೆಪಿಯ ರಾಮಣ್ಣ ಲಮಾಣಿ ಅವರು ಶಾಸಕರಾಗಿರುವ ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಉದಾಸಿ ಅವರು, ಡಿ.ಆರ್‌ ಅವರಿಗಿಂತಲೂ 16,148 ಮತಗಳನ್ನು ಹೆಚ್ಚು ಪಡೆದಿದ್ದಾರೆ. ಇಲ್ಲಿ ಚಲಾವಣೆಯಾದ 1.50 ಲಕ್ಷ ಮತಗಳಲ್ಲಿ, ಉದಾಸಿ ಪರವಾಗಿ 81,064 ಮತ್ತು ಡಿ.ಆರ್‌ ಪರವಾಗಿ 64916 ಮತಗಳು ಚಲಾವಣೆಯಾಗಿವೆ. ಆದರೆ, ವಿಧಾನಸಭೆ ಚುನಾವಣೆಯ ಗೆಲುವಿನ ಅಂತರಕ್ಕೆ ಹೋಲಿಸಿದರೆ ಈ ಕ್ಷೇತ್ರದಲ್ಲಿ ಬಿಜೆಪಿ ಬಲ 29,993 ರಿಂದ 1,6148ಕ್ಕೆ ಇಳಿಕೆಯಾಗಿದೆ.

ಜಿಲ್ಲೆಯಲ್ಲೇ ದೊಡ್ಡ ವಿಧಾನಸಭಾ ಕ್ಷೇತ್ರವಾದ ರೋಣ ಕ್ಷೇತ್ರದಲ್ಲಿ 1.57 ಲಕ್ಷ ಮತಗಳು ಚಲಾವಣೆಯಾಗಿದ್ದು, ಡಿ.ಆರ್‌ ಅವರಿಗೆ 68542 ಮತಗಳು ಮತ್ತು ಉದಾಸಿ ಅವರಿಗೆ 83725 ಮತಗಳು ಲಭಿಸಿವೆ. ಇಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವಿನ ಮತಗಳ ಅಂತರ 15,183. ಈ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ 7,334 ಮತಗಳ ಅಂತರದಿಂದ ಗೆದ್ದಿದ್ದರು. ಲೋಕಸಭೆ ಚುನಾವಣೆಯಲ್ಲಿ ಈ ಅಂತರ 15,183ಕ್ಕೆ ಏರಿಕೆಯಾಗಿದೆ. ಒಟ್ಟಿನಲ್ಲಿ ಗದಗ ಜಿಲ್ಲೆಯ ಮೂರೂ ಕ್ಷೇತ್ರಗಳು ಸೇರಿ ಡಿ.ಆರ್‌ ಅವರು 2.07 ಲಕ್ಷ ಹಾಗೂ ಉದಾಸಿ ಅವರು 2.45 ಲಕ್ಷ ಮತಗಳನ್ನು ಪಡೆದಿದ್ದಾರೆ.

ಗ್ರಾಮೀಣದಲ್ಲಿ ಕೈ ಶಕ್ತಿ: ಗದಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಮತಗಳಿಕೆಯಲ್ಲಿ ಡಿ.ಆರ್‌ ಪಾಟೀಲ ಅವರು ಮೇಲುಗೈ ಸಾಧಿಸಿದ್ದಾರೆ. ಈ ಕ್ಷೇತ್ರದ 31 ಹಳ್ಳಿಗಳಲ್ಲಿ ಈ ಬಾರಿ ಒಟ್ಟು 64,288 ಮತಗಳು ಚಲಾವಣೆಯಾಗಿದ್ದು, ಇದರಲ್ಲಿ ಡಿ.ಆರ್ ಅವರಿಗೆ 34,776 ಮತ್ತು ಶಿವಕುಮಾರ ಉದಾಸಿ ಅವರಿಗೆ 27016 ಮತಗಳು ಲಭಿಸಿವೆ. ಇಲ್ಲಿ ಉದಾಸಿ ಅವರಿಗಿಂತಲೂ ಡಿ.ಆರ್‌ ಅವರು 7760 ಮತಗಳನ್ನು ಹೆಚ್ಚು ಪಡೆದಿದ್ದಾರೆ.

ಗದಗ ತಾಲ್ಲೂಕಿನ ಅಸುಂಡಿ, ಬಿಂಕದಕಟ್ಟಿ, ಕುರ್ತಕೋಟಿ, ಬೆಂತೂರ, ನಾಗಾವಿ, ಹುಲಕೋಟಿ, ಮಲ್ಲಸಮುದ್ರ ಗ್ರಾಮಗಳಲ್ಲಿ ಡಿ.ಆರ್‌ ಅವರಿಗೆ ಹೆಚ್ಚು ಮತಗಳು ಬಿದ್ದಿವೆ. ಕಳಸಾಪುರ,ಕಳಸಾಪುರ ತಾಂಡಾ, ನಾಗಾವಿ ತಾಂಡ, ಅಂತೂರಿನಲ್ಲಿ ಉದಾಸಿಗೆ ಹೆಚ್ಚಿನ ಮತಗಳು ಬಂದಿವೆ. ಮುಳಗುಂದದಲ್ಲಿ ಈ ಬಾರಿ ಕಾಂಗ್ರೆಸ್‌–ಬಿಜೆಪಿ ನಡುವೆ ತೀವ್ರ ಪೈಪೋಟಿ ಕಂಡುಬಂದಿದ್ದು, ಉದಾಸಿ ಅವರಿಗೆ 5023 ಮತ್ತು ಡಿ.ಆರ್ ಅವರಿಗೆ 4628 ಮತಗಳು ಲಭಿಸಿವೆ.

ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಅಭ್ಯರ್ಥಿಗಳು ಪಡೆದ ಮತ
ಕ್ಷೇತ್ರ; ಡಿ.ಆರ್‌; ಉದಾಸಿ; ಅಂತರ

ಗದಗ;74015; 81008;6993
ರೋಣ; 68542; 83725;15183
ಶಿರಹಟ್ಟಿ; 64916; 81064;16148

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT