ಬ್ರಾಹ್ಮಣ ಸಮುದಾಯದ ವಿರುದ್ಧ ತೋಂಟದ ಶ್ರೀ ನೀಡಿದ ಹೇಳಿಕೆಗೆ ಖಂಡನೆ

7

ಬ್ರಾಹ್ಮಣ ಸಮುದಾಯದ ವಿರುದ್ಧ ತೋಂಟದ ಶ್ರೀ ನೀಡಿದ ಹೇಳಿಕೆಗೆ ಖಂಡನೆ

Published:
Updated:
Deccan Herald

ಗದಗ: ಬ್ರಾಹ್ಮಣ ಸಮುದಾಯದ ವಿರುದ್ಧ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಅವರು ನೀಡಿರುವ ಹೇಳಿಕೆ ಖಂಡಿಸಿ ತಾಲ್ಲೂಕು ಬ್ರಾಹ್ಮಣ ಸಮಾಜದ ಸದಸ್ಯರು ಜಿಲ್ಲಾಡಳಿತ ಭವನದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಬಳಿಕ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ‘ಸಮುದಾಯದ ವಿರುದ್ಧ ಮಾತನಾಡಿದ ಸಿದ್ಧಲಿಂಗ ಸ್ವಾಮೀಜಿಗೆ ವಾಗ್ದಂಡನೆ ವಿಧಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘ಬ್ರಾಹ್ಮಣ ಸಮಾಜಕ್ಕೆ ತೋಂಟದ ಶ್ರೀಗಳ ಬಗ್ಗೆ ಬಹಳಷ್ಟು ಗೌರವವಿದೆ. ಆದರೆ, ಇತ್ತೀಚಿನ ಅವರ ಹೇಳಿಕೆಗಳು ಸಮಾಜಕ್ಕೆ ಘಾಸಿ ಮಾಡಿವೆ. ಇಂತಹ ಹೇಳಿಕೆಗಳು ಸಮಾಜದಲ್ಲಿ ಬ್ರಾಹ್ಮಣರು, ಲಿಂಗಾಯತ ಸಮುದಾಯವರ ಮಧ್ಯೆ ವೈರತ್ವಕ್ಕೆ ಕಾರಣವಾಗುತ್ತಿವೆ’ ಎಂದು ಬ್ರಾಹ್ಮಣ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಹುಯಿಲಗೋಳ ಅಸಮಾಧಾನ ವ್ಯಕ್ತಪಡಿಸಿದರು.

ಆನಂದ ಕುಲಕರ್ಣಿ, ದತ್ತಮೂರ್ತಿ ಕುಲಕರ್ಣಿ, ಜಿ.ವಿ.ಕೌಜಲಗಿ, ಆರ್.ಕೆ.ಮೋನೆ, ವಿ.ವಿ.ಕುಲಕರ್ಣಿ, ವಿ.ಆರ್.ಗುಡಿ, ಮುತಾಲಿಕ್ ಪ್ರತಿಭಟನೆಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !