ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಪಾತ ಕಾಯ್ದೆ: ಜನಮತ ಗಣನೆ ಇಂದು

ಸವಿತಾ ಹಾಲಪ್ಪನವರ ಸಾವು: ಕಾನೂನು ಬದಲಿಸಲು ಐರ್ಲೆಂಡ್‌ನಲ್ಲಿ ಕೂಗು
Last Updated 25 ಮೇ 2018, 3:13 IST
ಅಕ್ಷರ ಗಾತ್ರ

ಡಬ್ಲಿನ್‌ (ಎಪಿ): ಐರ್ಲೆಂಡ್‌ನಲ್ಲಿ ಗರ್ಭಪಾತ ನಿಷೇಧ ಕಾನೂನು ಮುಂದುವರಿಸಬೇಕೆ ಅಥವಾ ಬೇಡವೇ ಎನ್ನುವುದರ ಬಗ್ಗೆ ಐತಿಹಾಸಿಕ ತೀರ್ಮಾನ ತೆಗೆದುಕೊಳ್ಳಲು ಶುಕ್ರವಾರ ಜನಮತ ಗಣನೆ ನಡೆಯಲಿದೆ.

ಗರ್ಭಪಾತ ಮಾಡಿಸಿಕೊಳ್ಳುವುದು ಅಥವಾ ಬಿಡುವುದು ಮಹಿಳೆಯ ಮೂಲಭೂತ ಹಕ್ಕು ಎಂದು ಕೆಲವರು  ವಾದಿಸುತ್ತಿದ್ದಾರೆ. ಆದರೆ, ಇನ್ನೂ ಕೆಲವರು ಐರ್ಲೆಂಡ್‌ ನೆಲದ ಕಾನೂನು ಮತ್ತು ಸಂವಿಧಾನ ಬದ್ಧವಾಗಿರುವ ಗರ್ಭಪಾತ ನಿಷೇಧ ಮುಂದುವರಿಯಬೇಕೆಂದು ವಾದಿಸುತ್ತಿದ್ದಾರೆ. ಈಗ ಇಡೀ ಐರ್ಲೆಂಡ್‌ನಲ್ಲಿ ಚರ್ಚೆಯಾಗುತ್ತಿರುವುದು ಗರ್ಭಪಾತ ನಿಷೇಧ ಕಾನೂನು ಬೇಕೆ? ಬೇಡವೇ? ಎನ್ನುವ ಒಂದೇ ಪ್ರಶ್ನೆ.

ಈಗ ನಡೆದಿರುವ ಸಮೀಕ್ಷೆಗಳಲ್ಲಿ ಐರ್ಲೆಂಡಿನ ಮನಸ್ಥಿತಿ ಬದಲಾಗಬೇಕಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಸಂಪ್ರದಾಯವಾದಿ ಕ್ಯಾಥೊಲಿಕ್‌ ದೇಶವೆನಿಸಿದ ಐರ್ಲೆಂಡ್‌ನಲ್ಲಿ 2015ರಲ್ಲಿ ಸಲಿಂಗಿಗಳ ವಿವಾಹ ಸಂಬಂಧ ನಡೆದ ಜನಮತ ಗಣನೆಯಲ್ಲಿ ಆಶ್ಚರ್ಯಕರ ರೀತಿಯಲ್ಲಿ ಜನತೆ ಸಲಿಂಗಿಗಳ ವಿವಾಹದ ಪರವಾಗಿಯೇ ಮತ ಚಲಾಯಿಸಿದ್ದರು. ಇದೇ ರೀತಿಯ ಆಶ್ಚರ್ಯಕರ ತೀರ್ಪು ಶುಕ್ರವಾರ ಹೊರ ಬೀಳಬಹುದು ಎನ್ನುವುದು ಹಲವರ ನಿರೀಕ್ಷೆ.

ಜನಮತ ಗಣನೆಗೆ ದೇಶದಾದ್ಯಂತ ಈಗಾಗಲೇ ಪರ–ವಿರೋಧಿಗಳು ಅಬ್ಬರದ ಅಭಿಯಾನ ನಡೆಸಿದ್ದಾರೆ. ‘ಜನಮತ ಗಣನೆ ವೇಳೆ ಸಾರ್ವಜನಿಕ ಅಭಿಪ್ರಾಯ ನಾಟಕೀಯ ರೀತಿಯಲ್ಲಿ ಬದಲಾಗದು’ ಎನ್ನುವ ವಿಶ್ವಾಸ ಗರ್ಭಪಾತ ವಿರೋಧಿ ಆಂದೋಲನಕಾರದ್ದು.

ಐರ‌್ಲೆಂಡ್ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಲು ನಿರಾಕರಿಸಿದ ನಂತರ ಬೆಳಗಾವಿ ಮೂಲದ ದಂತವೈದ್ಯೆ 31 ಹರೆಯದ ಸವಿತಾ ಹಾಲಪ್ಪನವರ್ 2012ರಲ್ಲಿ ಸಾವಿಗೀಡಾದ ನಂತರ ಮಾನವೀಯ ನೆಲೆಯಲ್ಲಿ ಗರ್ಭಪಾತಕ್ಕೆ ಸಂಬಂಧಿಸಿದ ಕಟ್ಟುನಿಟ್ಟಿನ ಕಾನೂನಿಗೆ ತಿದ್ದುಪಡಿ ತರಬೇಕೆಂಬ ಚರ್ಚೆ ಕಾವು ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT