ಗದಗ: ರಾಜ್ಯ ಸರ್ಕಾರ ನೀಡುವ ‘ಅನ್ನ ಭಾಗ್ಯ’ ಪಡಿತರ ಅಕ್ಕಿಗೆ ಪಾಲಿಶ್ ಮಾಡಿ, ವಿವಿಧ ಬ್ರ್ಯಾಂಡ್ಗಳ ಹೆಸರು ಬಳಸಿ, ಪ್ರೀಮಿಯಂ ಅಕ್ಕಿಯೆಂದು ಹೊರ ರಾಜ್ಯಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದ ₹14 ಲಕ್ಷ ಮೌಲ್ಯದ 34,720 ಕೆ.ಜಿ. ಅಕ್ಕಿಯನ್ನು ಗದಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಅಕ್ಕಿ ಜತೆಗೆ ಮಧ್ಯಪ್ರದೇಶದ ನೋಂದಣಿ ಇರುವ ₹29 ಲಕ್ಷ ಮೌಲ್ಯದ 10 ಚಕ್ರಗಳ ದೊಡ್ಡ ಟ್ರಕ್ ಮತ್ತು ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ಟ್ರಕ್ ಚಾಲಕನನ್ನು ವಿಚಾರಣೆಗೆ ಒಳಪಡಿಸಿದಾಗ ಮೋಸದ ಅಕ್ಕಿ ಜಾಲದ ವಿಚಾರ ಬೆಳಕಿಗೆ ಬಂದಿದೆ.

‘ಹೊರ ಜಿಲ್ಲೆಗಳಲ್ಲಿ ಸಂಗ್ರಹಿಸಿದ್ದ ಅನ್ನಭಾಗ್ಯ ಅಕ್ಕಿ ತುಂಬಿರುವ ಲಾರಿ ಗದಗ ಜಿಲ್ಲೆಯ ಮೂಲಕ ಹೊರ ರಾಜ್ಯಕ್ಕೆ ತೆರಳಲಿದೆ ಎಂಬ ಖಚಿತ ಮಾಹಿತಿ ಸಿಕ್ಕಿತ್ತು. ಅದರಂತೆ ನಗರದ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜು ಬಳಿ ದಾಳಿ ನಡೆಸಿ, ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ತಿಳಿಸಿದ್ದಾರೆ.

ಅಕ್ಕಿಯ ಅಸಲಿಯತ್ತು ಪರೀಕ್ಷಿಸುವ ಸಲುವಾಗಿ ಪೊಲೀಸರು ಆಹಾರ ನಿರೀಕ್ಷಕರು ಮತ್ತು ತಜ್ಞರನ್ನು ಕರೆಯಿಸಿ ಪರೀಕ್ಷೆ ಮಾಡಿಸಿದ್ದಾರೆ. ಇದು ಅನ್ನ ಭಾಗ್ಯ ಅಕ್ಕಿಗೆ ಪಾಲಿಶ್ ಮಾಡಿ, ಪ್ರೀಮಿಯಂ ಅಕ್ಕಿ ಎಂದು ದುಬಾರಿ ಬೆಲೆಗೆ ಮಾರಾಟ ಮಾಡುವ ಜಾಲ ಎಂದು ತಜ್ಞರು ದೃಢೀಕರಿಸಿದ್ದಾರೆ. ಪಡಿತರ ಅಕ್ಕಿಗೆ ಪಾಲಿಶ್ ಮಾಡಿ ಮಾರಾಟ ಮಾಡುವ ವಿಚಾರ ಗೊತ್ತಾಗಬಾರದೆಂದು ಖದೀಮರು ನಕಲಿ ಬಿಲ್, ದಾಖಲೆಗಳನ್ನು ಕೂಡ ಸೃಷ್ಟಿಸಿದ್ದಾರೆ.

‘ಟ್ರಕ್ ಮಧ್ಯಪ್ರದೇಶಕ್ಕೆ ಸೇರಿದ್ದು, ಚಾಲಕ ತಾನು ಬಾಡಿಗೆಗಾಗಿ ಗಾಡಿ ಚಲಾಯಿಸಿಕೊಂಡು ಬಂದಿರುವುದಾಗಿ ಹೇಳಿದ್ದಾನೆ. ಹರಪನಹಳ್ಳಿ ಸಮೀಪದ ಫ್ಯಾಕ್ಟರಿಯಿಂದ ಅಕ್ಕಿ ಚೀಲಗಳನ್ನು ತುಂಬಿಕೊಂಡು ಗುಜರಾತ್ಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಪಡಿತರ ಅಕ್ಕಿಗೆ ಪಾಲಿಶ್ ಮಾಡಿ ಮಾರಾಟ ಮಾಡುವ ಜಾಲದಲ್ಲಿ ಯಾರೆಲ್ಲಾ ಸಕ್ರಿಯರಾಗಿದ್ದಾರೆ? ಅಕ್ಕಿ ಚೀಲಗಳನ್ನು ಲಾರಿಗೆ ತುಂಬಿಸಿದ್ದು ಯಾರು? ಖರೀದಿಸಿದ್ದು ಯಾರು? ಅವುಗಳನ್ನು ಎಲ್ಲಿ ಮಾರಾಟ ಮಾಡುತ್ತಾರೆ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಎಸ್ಪಿ ತಿಳಿಸಿದ್ದಾರೆ.

‘ಅಕ್ಕಿ ಸಾಗಣೆಗೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ನಕಲಿ ಮಾಡಿದ್ದಾರೆ. ಬಿಲ್, ಸ್ಟ್ಯಾಂಪ್ ಎಲ್ಲವೂ ನಕಲಿ. ಸರ್ಕಾರಕ್ಕೆ ವಂಚಿಸುತ್ತಿರುವ ಖದೀಮರನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸಲಾಗುವುದು’ ಎಂದು ಎಸ್ಪಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-23-991938914

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.