ಮುಳಗುಂದ: ಅಂಚೆ ಇಲಾಖೆಯಿಂದ ಹಲವಾರು ಜನಪರ ಯೋಜನೆಗಳಿದ್ದು, ಅವುಗಳ ಲಾಭವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಗದಗ ಅಂಚೆ ಅಧೀಕ್ಷಕ ಷಣ್ಮುಖ ಶಿರಹಟ್ಟಿ ಹೇಳಿದರು.

ಇಲ್ಲಿನ ಪ್ರಗತಿ ಪತ್ತಿನ ಸೌಹಾರ್ದ ನಿ. ಹಾಗೂ ಭಾರತೀಯ ಅಂಚೆ ಇಲಾಖೆ ಗದಗ ವಿಭಾಗದ ಸಹಯೋಗದಲ್ಲಿ ನಡೆದ ಅಂಚೆ ಜನ ಸಂಪರ್ಕ ಅಭಿಯಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ನಮ್ಮ ಪ್ರೀತಿ ಪಾತ್ರರು ಭವಿಷ್ಯದಲ್ಲಿ ಸುಖದಿಂದ ಜೀವನ ನಡೆಸಲು, ಆಪತ್ತ ಕಾಲದಲ್ಲಿ ಅನುಕೂಲವಾಗಲಿ ಎಂದು ಇಂದೇ ವರ್ಷಕ್ಕೆ 550 ಅಂಚೆ ಜೀವ ವಿಮೆ ತುಂಬಿದರೆ ಅಂತಹ ಸಂದರ್ಭದಲ್ಲಿ ₹ 10 ಲಕ್ಷದವರೆಗೆ ಪರಿಹಾರ ನಿಮಗೆ ದೊರೆಯುತ್ತದೆ. ಕೇಂದ್ರ ಸರ್ಕಾರ ಅಂಚೆ ಇಲಾಖೆ ಮೂಲಕ ಇಂತಹ ಹಲವಾರು ಆಕರ್ಷಕ ಯೋಜನೆಗೆಳನ್ನು ತಂದಿದೆ. ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು. ಎಂದರು.

ಎಸ್.ಆರ್.ಜಾಧವ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಗತಿ ಪತ್ತಿನ ಸೌಹಾರ್ದ ಸಹಕಾರಿ ಅಧ್ಯಕ್ಷ ಕೆ.ಎಲ್.ಕರಿಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಡಾ.ಎಸ್.ಸಿ.ಚವಡಿ, ಎಸ್.ಎಂ.ನೀಲಗುಂದ, ಸೇವಾ ಸಮಿತಿ ಅಧ್ಯಕ್ಷ ಎಂ.ಡಿ.ಬಟ್ಟೂರ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ.ಸುಂಕಾಪುರ, ಆರ್.ಸಿ. ಕಮಾಜಿ, ಆರ್.ಎನ್.ದೇಶಪಾಂಡೆ, ಐ.ಜೆ.ಉಮಚಗಿ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-23-1025728084

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.