ಗದಗ: ‘ಶಿಸ್ತು, ಸೇವೆ, ಸಮರ್ಪಣಾ ಮನೋಭಾವ, ಸಕಾರಾತ್ಮಕತೆ, ಪರಿಶ್ರಮ, ತ್ಯಾಗ ಇದ್ದಾಗ ಮಾತ್ರ ಸಂಘಟನೆ ಸದೃಢವಾಗಿ ಬೆಳೆಯಲು ಸಾಧ್ಯ’ ಎಂದು ವಿಭಾಗೀಯ ಅಂಚೆ ಅಧೀಕ್ಷಕ ಎಸ್.ಎಸ್. ಶಿರಹಟ್ಟಿ ಹೇಳಿದರು.

ಇಲ್ಲಿನ ಪ್ರಧಾನ ಅಂಚೆ ಕಚೇರಿ ಬಳಿಯ ವಿಂಗಡಣಾ ಕಚೇರಿಯಲ್ಲಿ ಭಾರತೀಯ ಅಂಚೆ ನೌಕರರ ಸಂಘಗಳ ಸಹಯೋಗದಲ್ಲಿ ಈಚೆಗೆ ನಡೆದ ದ್ವೈವಾರ್ಷಿಕ ಜಂಟಿ ವಿಭಾಗೀಯ ಸಮ್ಮೇಳನದಲ್ಲಿ ಮಾತನಾಡಿದರು.

‘ಅಂಚೆ ಇಲಾಖೆ ಪ್ರಗತಿ ಸಾಧಿಸಲು ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ, ಸಹಕಾರ ಅಗತ್ಯ. ಸಿಬ್ಬಂದಿಯ ಯೋಗಕ್ಷೇಮ ಕಾಪಾಡಲು, ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ವೃತ್ತ ಕಾರ್ಯದರ್ಶಿ ವೀರೇಶ್ ಮಾತನಾಡಿ, ‘ನೌಕರರ ಮನಸ್ಥಿತಿ ಅರ್ಥ ಮಾಡಿಕೊಂಡರೆ ಸದೃಢ ಸಂಘಟನೆ ಕಟ್ಟಬಹುದು. ಅನ್ಯ ಸಂಘಟನೆಯೊಂದಿಗೆ ದ್ವೇಷ ಬೇಡ. ಸಹೋದ್ಯೋಗಿಗಳ ನಡುವೆ ಅನ್ಯೋನ್ಯತೆ ಇರಬೇಕು’ ಎಂದರು.

ರೋಣ ಅಂಚೆ ನಿರೀಕ್ಷಕ ವೆಂಕಟೇಶರಡ್ಡಿ ಕೊಳ್ಳಿ ಮಾತನಾಡಿ, ‘ಶಿಕ್ಷಣ, ಸಂಘಟನೆ, ಹೋರಾಟ ಅತ್ಯಗತ್ಯ. ಸಮಸ್ಯೆ ಪರಿಹರಿಸಲು ಸಂಘಟನೆಯು ಗಟ್ಟಿ ಧ್ವನಿಯಾಗುತ್ತದೆ. ಸಂಘಟನೆಯ ಹಿತವೇ ಮುಖ್ಯ ಎಂಬುದು ಎಲ್ಲರ ಧ್ಯೇಯ ಆಗಬೇಕು’ ಎಂದು ಸಲಹೆ ನೀಡಿದರು.

ಎಂ.ಐ. ಶೇಖ, ಡಿ.ಜಿ. ಮ್ಯಾಗೇರಿ, ನಾಗರಾಜ ಮಾತನಾಡಿದರು. ಬಸವರಾಜ ಬಳ್ಳೊಳ್ಳಿ, ಆನಂದರಾವ ಹೊದ್ಲೂರ, ನಿಜಲಿಂಗಪ್ಪ ತೋಟದ, ವಿಠೋಬ ಮಾಳೋದಕರ, ಸರೋಜಾ ಪಟ್ಟಣಶೆಟ್ಟಿ, ಶರಣಪ್ಪ ಬೇನಾಳ ಅವರನ್ನು ಸನ್ಮಾನಿಸಲಾಯಿತು.

ಪರಮೇಶ್ವರ ವಾಲಿ, ವಿಠ್ಠಲ್ ಮುತ್ತಲಗೇರಿ, ಎಸ್.ಎಫ್. ಹರಿಜನ, ವೆಂಕಟೇಶ ಆಕಳವಾಡಿ, ವೀರಣ್ಣ ಅಂಗಡಿ, ಎಂ.ಟಿ. ಕರಿಗಾರ, ಮನೋಹರ ಕಡಿಯವರ, ರವಿ ಜಾಧವ, ಮುತ್ತಣ್ಣ ಆನೆಗುಂದಿ ಇದ್ದರು. ಗದಗ, ಬಾಗಲಕೋಟೆ, ಧಾರವಾಡ, ಹಾವೇರಿ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-23-504783580

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.