ಗದಗ: ‘ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಅವರು ಮಾದಿಗ ಸಮಾಜದ ನಂಬರ್ 1 ವೈರಿ’ ಎಂದು ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಎಸ್.ಅರುಣ್ ಕುಮಾರ ಗಂಭೀರ ಆರೋಪ ಮಾಡಿದರು.

‘ಸಚಿವರಾದ ಎಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ ಹಾಗೂ ಡಾ. ಜಿ.ಪರಮೇಶ್ವರ ಅವರು ಶೋಷಿತ ಸಮಾಜದ ಒಂದು ಭಾಗವಾದರೂ ಇನ್ನೊಂದು ಶೋಷಿತ ಸಮಾಜದವಾದ ಮಾದಿಗರಿಗೆ ಒಳಮೀಸಲಾತಿ ಕೊಡುವ ವಿಚಾರದಲ್ಲಿ ಮೊದಲನೇ ದಿನದಿಂದಲೂ ವಿರೋಧಿಸಿಕೊಂಡು ಬಂದಿದ್ದಾರೆ’ ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪ ಮಾಡಿದರು.

‘ರಾಜ್ಯಗಳು ಒಳಮೀಸಲಾತಿ ಜಾರಿ ಮಾಡುವ ಸಂದರ್ಭದಲ್ಲಿ ಈಗಾಗಲೇ ಲಭ್ಯವಿರುವ ದತ್ತಾಂಶಗಳ ಆಧಾರದ ಮೇಲೆ ಹಿಂದುಳಿದವರು, ಅತಿ ಹಿಂದುಳಿದವರು ಹಾಗೂ ಅತ್ಯಂತ ಹಿಂದುಳಿದವರಿಗೆ ಹಂಚಿಕೆ ಮಾಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಆದರೆ, ಮೇ 8ರ ಆದೇಶದಂತೆ ಶೇ 5.25 ಮಾದಿಗ (ಎಡಗೈ), ಶೇ 5.25 ಹೊಲೆಯ (ಬಲಗೈ), ಶೇ 4.50 ಭೋವಿ, ಲಂಬಾಣಿ, ಕೊರಮ, ಕೊರಚರಿಗೆ ಅಂತ ವಿಭಾಗಿಸಿದೆ. ಹೀಗೆ ವಿಂಗಡಣೆ ಮಾಡಿರುವುದು ಮಾದಿಗ ಸಮಾಜಕ್ಕೆ ಒಂದು ಮರಣಶಾಸನವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪರಿಶಿಷ್ಟರಿಗೆ ಬಡ್ತಿಯಲ್ಲಿ ಮೀಸಲಾತಿ ಇದೆ. ಒಳಮೀಸಲಾತಿ ಇದೆ ಎಂದು ಇನ್ನೂ ಆದೇಶ ಮಾಡಿಲ್ಲ. ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಹಣದಲ್ಲಿ ಯಾರಿಗೆ ಎಷ್ಟು ಮೀಸಲು ಎಂಬುದು ಸ್ಪಷ್ಟವಾಗಿಲ್ಲ. ಬಹಳ ಮುಖ್ಯವಾಗಿ ರಾಜ್ಯದಲ್ಲಿ 4.70 ಲಕ್ಷ ಜನರು ಎಡಗೈ ಅಥವಾ ಬಲಗೈ ಎಂದು ಹೇಳಿಕೊಳ್ಳದೇ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಗುಂಪಿನಲ್ಲಿದ್ದಾರೆ. ಎಕೆ, ಎಡಿಯಲ್ಲಿರುವ ಬಲಗೈನವರು ಮಾದಿಗರ ಗುಂಪಿನಲ್ಲಿ ಮೀಸಲಾತಿ ಪಡೆದರೆ ಶಿಕ್ಷೆ ಬಗ್ಗೆ ಮಾತನಾಡಿಲ್ಲ. ರಾಜಕೀಯದಲ್ಲಿ ಒಳಮೀಸಲಾತಿ ಘೋಷಣೆ ಬಗ್ಗೆ ಹೇಳಿಲ್ಲ. ಇಷ್ಟೆಲ್ಲಾ ಇದ್ದರೂ ನಾವು ಒಳಮೀಸಲಾತಿ ಜಾರಿ ಮಾಡಿದ್ದೇವೆ ಎಂದು ಕಾಂಗ್ರೆಸ್ ಸರ್ಕಾರ ಎದೆ ತಟ್ಟಿಕೊಂಡು ಹೇಳಿಕೊಳ್ಳುತ್ತಿದೆ. ಇದು ಯಾವ ರೀತಿಯ ಒಳಮೀಸಲಾತಿ’ ಎಂದು ಹರಿಹಾಯ್ದರು.

‘ಒಳಮೀಸಲಾತಿ ಜಾರಿ ಮಾಡುವ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಶೇ 1ರಷ್ಟು ಕೂಡ ಕೆಲಸ ಮಾಡಿಲ್ಲ. 56,432 ಹುದ್ದೆ ಭರ್ತಿ ಮಾಡುವುದಾಗಿ ಸರ್ಕಾರ ಈಚೆಗೆ ಹೇಳಿತ್ತು. ಫೆಬ್ರುವರಿ 27ರಂದು ಕ್ಯಾಬಿನೆಟ್ನಲ್ಲಿ ನಡೆದ ಚರ್ಚೆ ಆಧರಿಸಿ, ಈ ಹುದ್ದೆಗಳಿಗೆ ಒಳಮೀಸಲಾತಿ ಇಲ್ಲ ಎಂದು ಆದೇಶ ಮಾಡಿತು. ಇದನ್ನು ವಿರೋಧಿಸಿ ಮಾದಿಗರು ಬೀದರ್ನಿಂದ ಚಾಮರಾಜನಗರದವರೆಗೆ ಬೃಹತ್ ಪ್ರತಿಭಟನೆ ನಡೆಸಿದರು. ಆಗ ಸರ್ಕಾರ ಮರುಪರಿಶೀಲಿಸುವ ಹೇಳಿಕೆ ನೀಡಿತು. ಬಳಿಕ, ಒಳಮೀಸಲಾತಿ ಘೋಷಿಸಿತು. ಆಗ ಒಳಮೀಸಲಾತಿ ಸಾಧ್ಯ ಇಲ್ಲ ಎಂದ ಕಾಂಗ್ರೆಸ್ ಸರ್ಕಾರ ಪ್ರತಿಭಟನೆಗೆ ಹೆದರಿ ಮೀಸಲಾತಿ ಪ್ರಕಟಿಸಿತು. ಇದಕ್ಕೆ ಇಡೀ ಮಾದಿಗ ಸಮಾಜ, ಮಾದಿಗ ಸಮಾಜದ ವಕೀಲರು, ಯುವಪಡೆ ಬೀದಿಗಿಳಿದು ಹೋರಾಟ ಮಾಡಿದ್ದು ಕಾರಣವೇ ಹೊರತು, ರಾಜ್ಯ ಸರ್ಕಾರಕ್ಕೆ ಒಳಮೀಸಲಾತಿ ಜಾರಿ ಮಾಡುವ ವಿಷಯದಲ್ಲಿ ಆಸಕ್ತಿ ಇರಲಿಲ್ಲ’ ಎಂದು ದೂರಿದರು.

‘ಒಳಮೀಸಲಾತಿಯಿಂದಾಗಿ ಈಗ ಮೂರು ಗುಂಪು ಆಗಿದೆ. ರೋಸ್ಟರ್ ಬಿಂದು ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ದೊಡ್ಡ ಷಡ್ಯಂತ್ರ ನಡೆಸಿದೆ. 15ಕ್ಕಿಂತ ಕಡಿಮೆ ಹುದ್ದೆಗಳು ಇದ್ದ ಸಂದರ್ಭದಲ್ಲಿ ಮೂರು ಗುಂಪುಗಳನ್ನು ತಲುಪಲಾಗದಿದ್ದರೆ ಅಲ್ಲಿ ಒಳಮೀಸಲಾತಿ ಇಲ್ಲ ಎಂದು ಹೇಳಿದೆ. ಇದು ಎಚ್.ಸಿ.ಮಹದೇವಪ್ಪ ಅವರ ಕುತಂತ್ರ. ಹೀಗಿದ್ದಾಗ ಕುಲಪತಿ, ಕುಲಸಚಿವ ಸೇರಿದಂತೆ ವಿವಿಧ ಉನ್ನತ ಹುದ್ದೆಗಳು ಮಾದಿಗ ಸಮಾಜಕ್ಕೆ ಸಿಕ್ಕುವುದಿಲ್ಲ. ಇವರು ನಮ್ಮ ಸಮಾಜದ ನಂಬರ್ 1 ವೈರಿ’ ಎಂದು ಮತ್ತೇ ಕಿಡಿಕಾರಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-23-1939054895

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.