ಗದಗ: ‘ಸೀತೆಯ ಹೊಂದುವ ಉದ್ದೇಶದಿಂದ ಶ್ರೀರಾಮಚಂದ್ರ ಜನಕರಾಜನ ಮನೆಗೆ ಹೋದದ್ದಲ್ಲ. ಆದರೆ, ಅಲ್ಲಿ ಸೀತಾಕಲ್ಯಾಣವಾಗಬೇಕಾದ ಸಂದರ್ಭವಿದ್ದ ಕಾರಣ ರಾಮಚಂದ್ರನ ಆಗಮನ ಜನಕರಾಜನ ಆಸ್ಥಾನಕ್ಕಾಗಿತ್ತು’ ಎಂದು ಅದಮಾರು ಮಠದ ಹಿರಿಯ ಶ್ರೀಗಳಾದ ವಿಶ್ವಪ್ರಿಯತೀರ್ಥ ಶ್ರೀಪಾದಂಗಳವರು ಹೇಳಿದರು.

ನಗರದ ಐತಿಹಾಸಿಕ ವೀರನಾರಾಯಣ ದೇವಸ್ಥಾನದಲ್ಲಿ ಭಾನುವಾರ ವೀರನಾರಾಯಣ, ತ್ರಿಕೂಟೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ, ಪವಮಾನ ಸೇವಾ ಸಮಿತಿ, ಶ್ರೀಗುರು ರಾಘವೇಂದ್ರ ಉತ್ಸವ ಮಂಡಳಿ, ಮಹಾಲಕ್ಷ್ಮಿ ಯುವತಿ ಮಂಡಳ, ಲಕ್ಷ್ಮೀನಾರಾಯಣ ಮಹಿಳಾ ಮಂಡಳ, ವೀರನಾರಾಯಣ ಯುವಕ ಮಂಡಳ ಹಾಗೂ ಲಕ್ಷ್ಮೀನಾರಾಯಣ ಭಜನಾ ಮಂಡಳದ ಸಹಯೋಗದಲ್ಲಿ ನಡೆದ ಮೂರು ದಿನಗಳ ಕಾಲ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಸಮಾಜದ ಉದ್ಧಾರಕ್ಕಾಗಿ ಭಗವಂತ ತನ್ನವರನ್ನೇ ಬಲಿ ನೀಡುತ್ತಾನೆಯೇ ಹೊರತು ಜನರ ಬಲಿ ನೀಡುವುದಿಲ್ಲ ಎನ್ನುವುದಕ್ಕೆ ವಾಯುದೇವ ತಂದೆಯ ಮಾತಿನ ಅನುಸಾರ ವಿಷ ಸೇವಿಸಿದ್ದೇ ಸ್ಪಷ್ಟ ನಿದರ್ಶನವಾಗಿದೆ. 72 ಸಾವಿರ ಅಕ್ಷರ ಹೊಂದಿದ ಸಹಸ್ರನಾಮ ಪಠಣದಿಂದ ಮನಸ್ಸಿನ ಆರೋಗ್ಯ ಸ್ಥಿರವಾಗಲಿದೆ’ ಎಂದರು.

ಮೂರು ದಿನಗಳ ಕಾರ್ಯಕ್ರಮ ಸಮಾರೋಪದ ಹಿನ್ನಲೆಯಲ್ಲಿ ಫಲಮಂತ್ರಾಕ್ಷತೆ ನೀಡುವ ಮೂಲಕ ಭಕ್ತರನ್ನು ಆಶೀರ್ವದಿಸಿದರು.

ಪಂ. ವರದಾಚಾರ್ಯ ಜಾಲಿಹಾಳ, ರಾಘಣ್ಣ ಜೋಶಿ, ಶ್ರೀಧರಾಚಾರ್ಯ ಶಿರಹಟ್ಟಿ, ಶ್ರೀಕಾಂತಾಚಾರ್ಯ ನಿಲೂಗಲ್ಲ, ಪ್ರಲ್ಹಾದಾಚಾರ್ಯ ನಿಲೂಗಲ್ಲ, ವೆಂಕಟೇಶ ಕುಲಕರ್ಣಿ, ನಾರಾಯಣಾಚಾರ್ಯ ಗುಡಿ, ಪ್ರದ್ಯಮ್ನ ಗುಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-23-1197766707

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.