ಗದಗ: ‘ವೇಗದ ಜಗತ್ತಿನಲ್ಲಿ ಮನುಷ್ಯ ಒತ್ತಡದಲ್ಲಿ ಬದುಕುತ್ತಿದ್ದಾನೆ. ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು’ ಎಂದು ಹಿರಿಯ ಪತ್ರಕರ್ತ ಮಂಜುನಾಥ ಅಬ್ಬಿಗೇರಿ ಹೇಳಿದರು.

ಅಖಿಲ ಕರ್ನಾಟಕ ಕಬ್ಬಿಗರ ಕೂಟದ ವತಿಯಿಂದ ನಗರದ ವಿಜಯಕುಮಾರ ಶೆಟ್ಟರ ನಿವಾಸದಲ್ಲಿ ಏರ್ಪಡಿಸಿದ್ದ ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಚಿಂತಕ ಪ್ರೊ. ಕೆ.ಎಚ್.ಬೇಲೂರ ಮಾತನಾಡಿ, ‘ಸಾಹಿತ್ಯ, ಸಂಸ್ಕೃತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಜ್ಞಾನ ನೀಡುವ ಪುಸ್ತಕಗಳನ್ನು ಓದುವುದು ರೂಢಿ ಮಾಡಿಕೊಂಡರೆ ಮನೆಯೇ ಗ್ರಂಥಾಲಯವಾಗುವುದು’ ಎಂದರು.

ಕಬ್ಬಿಗರ ಕೂಟದ ಅಧ್ಯಕ್ಷ ಡಿ.ವಿ.ಬಡಿಗೇರ ಮಾತನಾಡಿ, ‘ಅಖಿಲ ಕರ್ನಾಟಕ ಕಬ್ಬಿಗರ ಕೂಟದಿಂದ ಗದಗ ನಗರದಲ್ಲಿ ಮನೆಗೊಂದು ಗ್ರಂಥಾಲಯ ಯೋಜನೆಯನ್ನು ಲೋಕಾರ್ಪಣೆ ಮಾಡುತ್ತಿರುವುದು ಸಂತಸ ವಿಷಯ’ ಎಂದು ಹೇಳಿದರು.

ವಿಜಯಕುಮಾರ ರಾಜೇಶ್ವರಿ ಶೆಟ್ಟರ್ ದಂಪತಿ, ವಿಶ್ವಕುಮಾರ ಶೆಟ್ಟರಿಗೆ ಕಬ್ಬಿಗರ ಕೂಟದಿಂದ ಪುಸ್ತಕಗಳನ್ನು ವಿತರಿಸಲಾಯಿತು.

ಹಿರಿಯರಾದ ವಿಜಯಕುಮಾರ ಶೆಟ್ಟರ, ನಗರಸಭೆ ಸದಸ್ಯ ಮುತ್ತು ಮುಶಿಗೇರಿ, ಬಸವರಾಜ ಗಣಪ್ಪನವರ, ಬಸವರಾಜ ವಾರಿ, ನಾರಾಯಣಪುರ, ನಜೀರ ಸಂಶಿ, ವಿರುಪಾಕ್ಷಪ್ಪ ಗೊಜನೂರ, ಅಂದಾನಪ್ಪ ವಿಭೂತಿ, ರಾಮಚಂದ್ರ ಮೋನೆ, ಬಸವರಾಜ ಕೊಟ್ಟೂರ ವೇದಿಕೆಯಲ್ಲಿದ್ದರು.

ವಿನೋದ ರೇಖಾ ನೀಲಕಾರಿ, ಕೆ.ವಿ.ಕುಷ್ಟಗಿ, ಸುವರ್ಣಾ ಕೊಣ್ಣೂರ, ರೇಣುಕಾ ಶೆಟ್ಟರ್, ಉಷಾ, ಸುಮಂಗಲಾ ಶೆಟ್ಟರ್, ಮಂಗಳಾ ಗಾಳಪ್ಪನವರ, ಡಾ. ಶಿಲ್ಪಾ ಕುಷ್ಟಗಿ, ಅನ್ನಪೂರ್ಣ ಯಲಬುರ್ಗಿ, ಶ್ವೇತಾ ಗುಜಮಾಗಡಿ, ಗೋಪಾಲ ಮಳಗಿ ಸೇರಿದಂತೆ ಸಾಹಿತಿಗಳು, ಸಾಹಿತ್ಯಾಭಿಮಾನಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-23-86787953

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.