ಗದಗ: ‘ತೋಂಟದಾರ್ಯ ಮಠದ ಜಾತ್ರೆ ಏ.1ರಿಂದ 4ರ ವರೆಗೆ ನಡೆಯಲಿದೆ. ಆದರೆ, ನಗರಸಭೆ ಜಾಗೆಯಲ್ಲಿ ಈ ಜಾತ್ರೆ 65 ದಿನಗಳ ಕಾಲ ನಡೆಯುತ್ತದೆ. ಇದು ಒಂದು ವಾರಕ್ಕೆ ಸೀಮಿತವಾಗಲಿ’ ಎಂದು ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯ ಸಂಚಾಲಕ ರಾಜು ಖಾನಪ್ಪನವರ ಹೇಳಿದರು.

‘ತೋಂಟದಾರ್ಯ ಜಾತ್ರೆಗೆ ಹೊರ ರಾಜ್ಯದ ವ್ಯಾಪಾರಿಗಳು ಬರುವುದರಿಂದ ಸ್ಥಳೀಯರಿಗೆ ತೊಂದರೆ ಆಗುತ್ತಿದೆ. ಬಟ್ಟೆ, ಶೂ, ಪಾತ್ರೆ ಸೇರಿದಂತೆ ಜಾತ್ರೆಯಲ್ಲಿ ಎಲ್ಲವನ್ನೂ ಮಾರಾಟ ಮಾಡುತ್ತಾರೆ. ಸ್ಥಳೀಯರಿಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ 2016ರಿಂದಲೂ ಅಧಿಕ ದಿನ ನಡೆಯುವ ಜಾತ್ರೆ ವಿರೋಧಿಸುತ್ತಾ ಬಂದಿದ್ದೇವೆ’ ಎಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಈ ವಿಷಯದಲ್ಲಿ ಜಿಲ್ಲಾಧಿಕಾರಿ ಪ್ರವೇಶಿಸಿ ನಗರಸಭೆ ಜಾಗದಲ್ಲಿ ನಡೆಯುವ ವ್ಯಾಪಾರ ತಡೆಯಬೇಕು. ಇಲ್ಲದಿದ್ದರೆ ಗದಗ ಜಿಲ್ಲೆಯ ಎಲ್ಲಾ ಹಿಂದೂಪರ ಸಂಘಟನೆಗಳ ಜೊತೆಗೂಡಿ ಪ್ರಸಕ್ತ ವರ್ಷ ನಿರ್ಣಾಯಕ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

‘ಜಾತ್ರಾ ಮಹೋತ್ಸವದ ಅಧ್ಯಕ್ಷರು ಲೆಕ್ಕಪತ್ರಗಳನ್ನು ಭಕ್ತರ ಮುಂದೆ ಇಡಬೇಕು. ಈಗಿರುವ ಅಧ್ಯಕ್ಷ ವಿನಾಯಕ ಮಾನ್ವಿ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ್ದು, ಅವರು ಪ್ರಸಕ್ತ ವರ್ಷದ ಲೆಕ್ಕವನ್ನು ಸಾರ್ವಜನಿಕರ ಮುಂದೆ ಇಡಲಿ’ ಎಂದು ಆಗ್ರಹಿಸಿದರು.

ಮಹೇಶ್ ರೋಖಡೆ, ಶಿವಯೋಗಿ ಹಿರೇಮಠ, ಪಿ.ಎಸ್.ಕಾಳೆ, ಭರತ್ ಲದ್ದಿ, ವೆಂಕಟೇಶ್ ದೊಡ್ಡಮನಿ, ಸತೀಶ್ ಕುಂಬಾರ, ಶಿವು ಲದ್ದಿ, ವಿಶ್ವನಾಥ ಸಿರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-23-130463693

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.