ಗದಗ: ‘ತೋಂಟದಾರ್ಯ ಮಠದ ಜಾತ್ರೆ ಆಚರಿಸಲು ದೀರ್ಘ ಅವಧಿಗೆ ಅನುಮತಿ ನೀಡಬಾರದು ಎಂದು ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಲಾಗಿತ್ತು. ಆದರೆ, ಅವರು ನಮ್ಮ ಮನವಿಗೆ ಸ್ಪಂದಿಸದ ಕಾರಣ ಭಾನುವಾರ ದೊಡ್ಡ ಅವಘಡ ನಡೆಯಿತು. ಈಗ ಇದರ ಹೊಣೆ ಯಾರು ಹೊರುತ್ತಾರೆ’ ಎಂದು ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯ ಸಂಚಾಲಕ ರಾಜು ಖಾನಪ್ಪನವರ ಪ್ರಶ್ನಿಸಿದರು.

ನಗರದ ತೋಂಟದಾರ್ಯ ಮಠದ ಆವರಣದಲ್ಲಿ ನಡೆದಿರುವ ಜಾತ್ರೆಯಲ್ಲಿ ಭಾನುವಾರ ಸಂಭವಿಸಿದ ಅವಘಡ ಖಂಡಿಸಿ, ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮಾತನಾಡಿದರು.

‘ತೋಂಟದಾರ್ಯ ಮಠದ ಜಾತ್ರೆಗೆ ಜಿಲ್ಲಾಡಳಿತ ಹಲವು ವರ್ಷಗಳಿಂದ ಎರಡು ತಿಂಗಳು ಅವಕಾಶ ನೀಡುತ್ತಿದೆ. ಈ ವರ್ಷ ಒಂದು ತಿಂಗಳು ಜಾತ್ರೆ ನಡೆಸಲು ಅನುಮತಿ ನೀಡಿದ್ದು, ಇದರಿಂದ ಸ್ಥಳೀಯ ವ್ಯಾಪಾರಿಗಳಿಗೆ ತೊಂದರೆ ಆಗುತ್ತಿದೆ. ಅನ್ಯರಾಜ್ಯದವರು ಬಂದು ಇಲ್ಲಿ ವ್ಯಾಪಾರ ಮಾಡಿದರೆ ಸ್ಥಳೀಯರು ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಳ್ಳುವಂತಾಗಿದೆ ಎಂಬ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿತ್ತು. ಆದರೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ನಗರಸಭೆಗೆ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇದರ ಪರಿಣಾಮವಾಗಿ ಭಾನುವಾರ ನಡೆದ ದುರ್ಘಟನೆಯಲ್ಲಿ 18 ಮಂದಿ ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ’ ಎಂದು ಹರಿಹಾಯ್ದರು.

‘ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಇದೇ ಕೊನೆಯ ಬಾರಿಗೆ ಜಿಲ್ಲಾಡಳಿತಕ್ಕೆ ಮನವಿ ಕೊಡುತ್ತಿದ್ದೇವೆ. ಈಗಲೂ ಕ್ರಮ ಕೈಗೊಳ್ಳದಿದ್ದರೆ ಮುಂದೆ ನಡೆಯುವ ಉಗ್ರ ಹೋರಾಟಕ್ಕೆ ಆಗ ಯಾರು ಜಿಲ್ಲಾಧಿಕಾರಿ ಇರುತ್ತಾರೆಯೋ ಅವರೇ ಹೊಣೆಗಾರರಾಗುತ್ತಾರೆ. ಜನರು ಆಕ್ರೋಶಗೊಳ್ಳುವುದರೊಳಗೆ ಕ್ರಮ ಕೈಗೊಳ್ಳದಿದ್ದರೆ ಬರುವ ವರ್ಷ ಹೋರಾಟ ಯಾವ ಸ್ವರೂಪ ಪಡೆಯುತ್ತದೆಯೋ ಗೊತ್ತಿಲ್ಲ. ಸಂವಿಧಾನ ಪಾಲನೆ ಮಾಡುವ ಉದ್ದೇಶದಿಂದ ಶಾಂತಿಯುತ ಹೋರಾಟ ಮಾಡುತ್ತಿದ್ದೇವೆ. ಅದಕ್ಕೆ ಬೆಲೆ ಕೊಡಬೇಕು’ ಎಂದು ಮನವಿ ಮಾಡಿದರು.

ಜಾತ್ರೆಯಲ್ಲಿನ ಅಂಗಡಿಗಳನ್ನು ಕೂಡಲೇ ತೆರವುಗೊಳಿಸಬೇಕು, ಮುಂದಿನ ವರ್ಷ ನಡೆಯುವ ಜಾತ್ರೆಗೆ ಒಂದು ವಾರವಷ್ಟೇ ಅವಕಾಶ ನೀಡಬೇಕು ಹಾಗೂ ಜನರ ಜೀವದ ಜತೆಗೆ ಚೆಲ್ಲಾಟವಾಡುತ್ತಿರುವ ನಗರಸಭೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಮಹೇಶ್ ರೋಖಡೆ, ಸತೀಶ್ ಕುಂಬಾರ, ವೆಂಕಟೇಶ್ ದೊಡ್ಡಮನಿ, ಕುಮಾರ ನಡಿಗೇರಿ, ಪಿ.ಎಸ್.ಕಾಳೆ, ಪರಶುರಾಮ ಆಡಿನ, ಸದಾನಂದ್ ಸಿಂಗ್, ಶಿವಯೋಗಿ ಹಿರೇಮಠ, ಮೌನೇಶ್ ದಾಸರ, ಈರಪ್ಪ ವಾಲ್ಮೀಕಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-23-345505058

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.