ಗದಗ: ಸರ್ಕಾರಿ ಅಲ್ಪಸಂಖ್ಯಾತರ ಮಹಿಳಾ ಕಾಲೇಜನ್ನು ನಗರದ ಹೊರವಲಯದಲ್ಲಿ ಆರಂಭಿಸಲು ಉದ್ದೇಶಿಸಿರುವ ಅಧಿಕಾರಿಗಳ ಕ್ರಮವನ್ನು ಖಂಡಿಸಿದ ಗದಗ-ಬೆಟಗೇರಿ ಮುಸ್ಲಿಂ ಸಮಾಜದ ವೇದಿಕೆಯ ಕಾರ್ಯಕರ್ತರು ಸೋಮವಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ವೇದಿಕೆ ಅಧ್ಯಕ್ಷ ಮಹಮ್ಮದ ಯೂಸುಫ್ ನಮಾಜಿ ಮಾತನಾಡಿ, ಸದ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೂಲಕ ನಗರದ ಹೊರವಲಯದ ಕಾರವಾರ-ಬಳ್ಳಾರಿ ರಸ್ತೆಯ ಖಬ್ರಸ್ತಾನ ಜಾಗೆಯ ಕಟ್ಟಡದಲ್ಲಿ ಮಹಿಳಾ ಕಾಲೇಜನ್ನು ಪ್ರಾರಂಭಿಸಲು ಅಧಿಕಾರಿಗಳು ಉದ್ದೇಶಿಸಿದ್ದು ಖಂಡನೀಯ. ಅಲ್ಲಿಗೆ ಹೋಗಲು ವಾಹನಗಳ ವ್ಯವಸ್ಥೆ ಇಲ್ಲ, ಸುರಕ್ಷತೆ ಇಲ್ಲ ಎಂದು ಅವರು ದೂರಿದರು.

‘ಈ ಕಟ್ಟಡದ ಬದಲು ನಗರದ ಮಧ್ಯಭಾಗದಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ಶಾಲೆಯೊಂದನ್ನು ಬೇರೆಡೆ ಸ್ಥಳಾಂತರಿಸಿ, ಅಲ್ಲಿ ಕಾಲೇಜು ಆರಂಭಿಸಬೇಕು’ ಎಂದು ಕೋರಿದರು.

ವೇದಿಕೆ ಕಾರ್ಯದರ್ಶಿ ಇಮ್ತಿಯಾಜ ಆರ್. ಮಾನ್ವಿ ಮಾತನಾಡಿ, ಖಾಸಗಿ ಕಟ್ಟಡಗಳ ಬಾಡಿಗೆಗೆ ಲಕ್ಷಾಂತರ ರೂಪಾಯಿ ಹಣ ಸುರಿಯುವ ಬದಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಾಸ್ಟೆಲ್ ಕಟ್ಟಡದಲ್ಲಿಯೇ ಹೊಸ ಕಾಲೇಜು ಆರಂಭಿಸಬೇಕು ಎಂದು ಒತ್ತಾಯಿಸಿದರು.

ಅಂಜುಮನ್ ಸಂಸ್ಥೆ ಸದಸ್ಯರಾದ ಬಾಷಾಸಾಬ ಮಲ್ಲಸಮುದ್ರ ಮಾತನಾಡಿ ದರು. ವೇದಿಕೆಯ ಮುಖಂಡರಾದ ಬಾಬಾಜಾನ ಬಳಗಾನೂರ, ಎಂ.ಎಂ.ಮಾಳೆಕೊಪ್ಪ, ಅನ್ವರ ಶಿರಹಟ್ಟಿ, ರಫೀಕ ಜಮಾಲಖಾನವರ, ಯುಸುಫಸಾಬ ಕೊಟ್ಟೂರ, ಮುನ್ನಾ ಶೇಖ, ಅಬ್ದುಲರಜಾಕ ಶಿರಹಟ್ಟಿ, ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-23-770104371

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.