ಗದಗ: ‘ಉದ್ಯಮ ಆರಂಭಿಸಲು ದನಕರುಗಳ ಸಗಣಿಯೇ ಸಾಕು. ಗೃಹ ಕೃಷಿ ಆಧಾರಿತ ಉದ್ಯಮವೂ ಮಹಿಳೆಯರಿಗೆ ಸ್ವಾವಲಂಬನೆ ನೀಡಬಲ್ಲದು. ಬೆಳೆಯನ್ನು ಮೌಲ್ಯವರ್ಧನೆ ಮಾಡಿ ಮಾರಿದಲ್ಲಿ ಲಾಭ ಹೆಚ್ಚು. ಕೈ ಕೆಸರಾದರೆ ಆದಾಯಕ್ಕೆ ಬರವಿಲ್ಲ’ ಎಂದು ಪ್ರಗತಿಪರ ಕೃಷಿ ಮಹಿಳೆ ಮಂಗಳಾ ನೀಲಗುಂದ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಎಎಸ್ಎಸ್ ವಾಣಿಜ್ಯ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ನಡೆದ ಯುವ ಸಾಹಿತ್ಯ ಸಮಾವೇಶದಲ್ಲಿ ‘ಕೃಷಿ ಲಾಭದಾಯಕ ವಿಧಾನಗಳು’ ವಿಷಯ ಕುರಿತು ಮಾತನಾಡಿದರು.

‘ಸಾಮಾಜಿಕ ಜಾಲತಾಣವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಕಲಿಯುತ್ತಲೇ ಗಳಿಕೆಯ ಕಡೆಗೆ ಗಮನಕೊಡಿ. ಸ್ವಾವಲಂಬಿ ಜೀವನ ನಡೆಸಿ’ ಎಂದು ತಿಳಿಸಿದರು.

ರೈತ ಪ್ರಸಾದ ಆಡಿನ ಮಾತನಾಡಿ, ‘ಮಣ್ಣಿನ ನಾಡಿಮಿಡಿತ ಅರಿಯಬೇಕು. ಮೇಟಿ ವಿದ್ಯೆಯು ಕೋಟಿ ಆದಾಯ ತರಬಲ್ಲದು. ಯುವಕರು ಕೃಷಿಯಲ್ಲಿ ಹೊಸತನದ ಬಗ್ಗೆ ಹಾತೊರೆಬೇಕು’ ಎಂದು ತಿಳಿಸಿದರು.

ಆದರ್ಶ ಕೃಷಿ ಮಹಿಳೆ ಶಿಲ್ಪಾ ಮ್ಯಾಗೇರಿ ಮಾತನಾಡಿ, ‘ಇಂದು ಭೂಮಿಗೆ ಬೆಲೆ ಬಂದಿದೆ. ಮರಳಿ ಮಣ್ಣಿಗೆ ಬರುವ ಕಾಲ ದೂರವಿಲ್ಲ. ಸಾವಿರ ಸಂಕಷ್ಟಗಳ ನಡುವೆ ಕೃಷಿ ಜೀವಂತವಾಗಿದೆ. ಹೊಸ ಪರಿಕಲ್ಪನೆಯೊಂದಿಗೆ ವೀಕೆಂಡ್ ಫಾರ್ಮಿಂಗ್ ಬಂದಿದೆ. ಹೆಚ್ಚಿನ ಯುವಕರು ಕೃಷಿಯತ್ತ ಮುಖ ಮಾಡುತ್ತಿರುವುದು ಖುಷಿಯ ವಿಚಾರ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾವಯವ ಕೃಷಿ ತಜ್ಞ ಬಸವರಾಜ ನಾವಿ ಮಾತನಾಡಿ, ‘ಮಣ್ಣನ್ನು ಹೆತ್ತ ತಾಯಿಯಂತೆ ಪೂಜಿಸಿದ ನೆಲದಲ್ಲಿ ಕೃಷಿಯಿಂದ ಹಿಂದೆ ಸರಿಯುತ್ತಿರುವ ಉತ್ತಮ ಬೆಳವಣಿಗೆಯಲ್ಲ. ನೆಲವನ್ನು ಪ್ರೀತಿಸಿ ಬದುಕನ್ನು ಹಸನಾಗಿಸಿಕೊಳ್ಳಿ. ಸಾವಯವ ಕೃಷಿ ಜಗತ್ತನ್ನಾಳಬಲ್ಲದು. ಆರೋಗ್ಯ ಭಾಗ್ಯ ಅನ್ನದಿಂದ ದೊರೆಯುತ್ತದೆ’ ಎಂದು ತಿಳಿಸಿದರು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ವೇದಿಕೆ ಮೇಲೆ ಪ್ರಾಚಾರ್ಯ ಆರ್.ಆರ್. ಕುಲಕರ್ಣಿ ಇದ್ದರು. ರವಿ ದೇವರಡ್ಡಿ ನಿರೂಪಿಸಿದರು. ವಿಜಯಲಕ್ಷ್ಮಿ ಓಲೇಕಾರ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-23-2029622520

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.