ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ: ನಿರಂತರ ಮಳೆಗೆ ನೆಲಕ್ಕುರಿಳಿದ ಮನೆಗಳು

Published 25 ಜುಲೈ 2023, 12:54 IST
Last Updated 25 ಜುಲೈ 2023, 12:54 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಕಳೆದ ಎಂಟು ದಿನಗಳಿಂದ ತಾಲ್ಲೂಕಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಈವರೆಗೆ 29 ಮನೆಗಳು ಭಾಗಶಃ ಬಿದ್ದಿದ್ದು, ಬಾಲೆಹೊಸೂರು ಗ್ರಾಮವೊಂದರಲ್ಲಿಯೇ 13 ಮನೆಗಳು ಬಿದ್ದಿವೆ.

ಶಿಗ್ಲಿಯಲ್ಲಿ ಶೋಭ ಮೇಗಲಮನಿ, ಪುಟಗಾಂವ್‍ಬಡ್ನಿಯಲ್ಲಿ ಅನಸವ್ವ ಯಲವಗಿ, ಕುಂದ್ರಳ್ಳಿಯ ಜಗದೀಶಯ್ಯ ಸೂರಣಗಿಮಠ ಮತ್ತು ಚೆನ್ನವೀರಗೌಡ ಪಾಟೀಲ ಅದರಂತೆ ರಾಮಗಿಯಲ್ಲಿ ಫಕ್ಕೀರಪ್ಪ ಸಣ್ಣನಿಂಗಪ್ಪ ಬನ್ನಿಕೊಪ್ಪ ಅವರ ಮನೆಗಳು ನೆಲಕ್ಕುರುಳಿವೆ. ಇನ್ನು ಬಹಳಷ್ಟು ಮನೆಗಳು ಸೋರುತ್ತಿದ್ದು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮಂಗಳವಾರವೂ ಸಹ ಬೆಳಗ್ಗೆಯಿಂದಲೇ ಮಳೆ ಸುರಿಯುತ್ತಿತ್ತು. ಕುಂಭದ್ರೋಣ ಮಳೆಗೆ ಬೆಳೆಯುತ್ತಿರುವ ಗೋವಿನಜೋಳ, ಕಂಠಿಶೇಂಗಾ ಹೊಲಗಳಲ್ಲಿ ನೀರು ನಿಂತಿವೆ. ತಾಲ್ಲೂಕಿನ ಎಲ್ಲ ರಸ್ತೆಗಳು ಹದಗೆಟ್ಟ ಸ್ಥಿತಿಗೆ ತಲುಪಿದ್ದು, ವಾಹನ ಚಾಲಕರು ಸಂಚರಿಸಲು ತೊಂದರೆ ಅನುಭವಿಸುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT