ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡರಗಿ | ಕಳ್ಳತನವಾಗಿದ್ದ 2.5ಲಕ್ಷ ಮೌಲ್ಯದ ಬೈಕ್ ವಶ

Published 7 ಆಗಸ್ಟ್ 2024, 14:15 IST
Last Updated 7 ಆಗಸ್ಟ್ 2024, 14:15 IST
ಅಕ್ಷರ ಗಾತ್ರ

ಮುಂಡರಗಿ: ಪಟ್ಟಣವು ಸೇರಿದಂತೆ ಗದಗ ನಗರದಲ್ಲಿ ಈ ಹಿಂದೆ ಕಳ್ಳತನವಾಗಿದ್ದ 6 ಮೋಟರ್ ಸೈಕಲ್‍ಗಳನ್ನು (ಬೈಕ್) ಸ್ಥಳೀಯ ಪೊಲೀಸರು ಮಂಗಳವಾರ ವಶಪಡಿಸಿಕೊಂಡು, ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗದಗ ತಾಲ್ಲೂಕಿನ ಕಿರಟಗೇರಿ ಗ್ರಾಮದ ಆನಂದಗೌಡ ಕಲ್ಲನಗೌಡ ಹುಚ್ಚನಗೌಡ್ರ ಬಂಧಿತ ಆರೋಪಿ.

2024ನೇ ಸಾಲಿನಲ್ಲಿ ಪಟ್ಟಣದಲ್ಲಿ ಬೈಕ್‍ಗಳ ಕಳ್ಳತನವಾದ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಪೊಲೀಸರು ಪತ್ತೆ ಕಾರ್ಯ ಕೈಗೊಂಡಿದ್ದರು. ಗದಗ ಪೊಲೀಸ್ ಅಧೀಕ್ಷಕ ಬಿ.ಎಸ್.ನೇಮಗೌಡ ಅವರು ಕಳ್ಳತನ ಪ್ರಕರಣ ಪತ್ತೆ ಕಾರ್ಯಕ್ಕೆ ವಿಶೇಷ ತಂಡ ರಚಿಸಿದ್ದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ.ಸಂಕದ, ಡಿವೈಎಸ್‍ಪಿ ಪ್ರಭುಗೌಡ ಕಿರೇದಳ್ಳಿ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಸಿಪಿಐ ಮಂಜುನಾಥ ಕುಸುಗಲ್, ಪಿಎಸ್‍ಐ ವಿ.ಜಿ.ಪವಾರ ಹಾಗೂ ನುರಿತ ಪೊಲೀಸ್ ಸಿಬ್ಬಂದಿ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ. ಪತ್ತೆ ಕಾರ್ಯ ನಡೆಸಿದ ಸಂದರ್ಭದಲ್ಲಿ ಪಟ್ಟಣದ 5 ಬೈಕ್‍ಗಳನ್ನು ಮತ್ತ ಗದಗ ನಗರದ ಒಂದು ಬೈಕ್ ಸೇರಿ ಒಟ್ಟು ₹ 2.5 ಲಕ್ಷ ಮೌಲ್ಯದ ಬೈಕ್‍ಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ಕಳ್ಳತನವಾಗಿದ್ದ ಬೈಕ್‍ಗಳ ಪತ್ತೆ ಹಚ್ಚಲು ಶ್ರಮಿಸಿದ ಸಿಪಿಐ ಮಂಜುನಾಥ ಕುಸುಗಲ್, ಪಿಎಸ್‍ಐ ವಿ.ಜಿ.ಪವಾರ, ಎಎಸ್‍ಐ ವಿ.ವೈ.ತಂಟ್ರಿ, ಡಿ.ಎಂ.ಹೊನಕೇರಿ, ಪೊಲೀಸ್ ಸಿಬ್ಬಂದಿ ಜೆ.ಐ.ಬಚ್ಚೇರಿ, ಅವಿನಾಶ ಬ್ಯಾಳಿ, ಮಹೇಶ ಗೊಳಗೊಳಕಿ, ಐ.ಎ.ಮದರಂಗಿ, ಎಸ್.ಎಚ್.ಡೊಣ್ಣಿ, ಲಕ್ಷ್ಮಣ ಲಮಾಣಿ ಇನ್ನಿತರರಿಗೆ ಗದಗ ಎಸ್‍ಪಿ ಹಾಗೂ ಹೆಚ್ಚುವರಿ ಎಸ್‍ಪಿ ಪ್ರಶಂಸೆ ವ್ಯಕ್ತಪಡಿಸಿ ಸೂಕ್ತ ಬಹುಮಾನ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT