ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗದಗ | ತಗ್ಗಿದ ಪ್ರವಾಹ: ನೆರೆ ಆತಂಕ ಕೊಂಚ ದೂರ

ನೀರು ನಿಂತು ಬೆಳೆ ಹಾನಿ: ಪರಿಹಾರಕ್ಕೆ ರೈತರ ಆಗ್ರಹ
Published : 4 ಆಗಸ್ಟ್ 2024, 15:46 IST
Last Updated : 4 ಆಗಸ್ಟ್ 2024, 15:46 IST
ಫಾಲೋ ಮಾಡಿ
Comments

ನರಗುಂದ: ಕಳೆದ ನಾಲ್ಕು ದಿನಗಳಿಂದ ತಾಲ್ಲೂಕಿನ ಕೊಣ್ಣೂರ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ ಉಂಟಾಗಿದ್ದ ನೆರೆ ಹಾವಳಿ ಆತಂಕ ಬಹುತೇಕ ಕಡಿಮೆಯಾಗಿದೆ.

ಪಶ್ಚಿಮಘಟ್ಟ ಸೇರಿದಂತೆ, ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಅಲ್ಲದೆ ನವಿಲುತೀರ್ಥ ಜಲಾಶಯದಿಂದ 15 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ ಮಾಡುತ್ತಿರುವುದರಿಂದ ಆತಂಕ ಕಡಿಮೆಯಾಗಿದೆ.

ಹೆಚ್ಚಿನ ಮಳೆಯಿಂದ ಸುತ್ತಮುತ್ತಲೂ ಮಲಪ್ರಭಾ ನದಿ ಗ್ರಾಮಗಳಿಗೆ ನುಗ್ಗಿ ಪ್ರವಾಹ ಭೀತಿ ಉಂಟು ಮಾಡಿತ್ತು. ಲಕಮಾಪುರದ ಮನೆಗಳಿಗೆ ನೀರು ನುಗ್ಗಿತ್ತು. ಆದರೆ ಭಾನುವಾರ ಒಳಹರಿವು ಕಡಿಮೆಯಾದ ಪರಿಣಾಮ ಹೊರ ಹರಿವು ಕೇವಲ ಮೂರು ಸಾವಿರ ಕ್ಯುಸೆಕ್ ಮಾತ್ರವಿದೆ.

ಇದರಿಂದ ನೆರೆ ಆತಂಕ ದೂರವಾಗಿದೆ. ಮಲಪ್ರಭಾ ಹೊಳೆ ತಟದಲ್ಲಿರುವ ಜನರು ಕೊಂಚ ನಿರಾಳರಾಗಿದ್ದಾರೆ. ಆದರೆ ಕಳೆದ ಮೂರು ದಿನಗಳಿಂದ ನಿತ್ಯ 15 ಸಾವಿರ ಕ್ಯುಸೆಕ್‌ ನೀರು ಬಂದ ಪರಿಣಾಮ ಮಲಪ್ರಭಾ ಹೊಳೆ ಎರಡು ದಂಡೆ ತುಂಬಿ ಹರಿಯುತ್ತಿದೆ.

ಜಮೀನುಗಳು ಸಂಪೂರ್ಣ ಜಲಾವೃತವಾಗಿದ್ದು, ಸಹಸ್ರಾರು ಹೆಕ್ಟೇರ್ ಜಮೀನು ಗಳಲ್ಲಿನ ವಿವಿಧ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಜಮೀನುಗಳಲ್ಲಿನ ನೀರು ಕಡಿಮೆಯಾಗಲು ಇನ್ನು ನಾಲ್ಕು ದಿನಗಳೇ ಬೇಕು. ಹಾನಿಯಾದ ಬೆಳೆ ತ್ವರಿತವಾಗಿ ಸಮೀಕ್ಷೆಯಾಗಿ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸುತ್ತಾರೆ.

ಕಂದಾಯ ನಿರೀಕ್ಷಕ ಐ.ವೈ.ಕಳಸಣ್ಣವರ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಲಕಮಾಪುರ, ವಾಸನ, ಬೂದಿಹಾಳ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹದ ಪರಿಸ್ಥಿತಿ ವೀಕ್ಷಿಸಿದರು.

ಪರಿಹಾರಕ್ಕೆ ಆಗ್ರಹ: ಭಾರತೀಯ ಕಿಸಾನ ಸಂಘದ ಜಿಲ್ಲಾ ಘಟಕದ ಮುಖಂಡ ಎಸ್.ಎಸ್‌.ಪಾಟೀಲ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಗಾಳನ್ನವರ ವಾಸನ, ಲಕಮಾಪುರ ಗ್ರಾಮಕ್ಕೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿದರು. ಸರ್ಕಾರ ಕೂಡಲೇ ಬೆಳೆ ಹಾನಿ ಸಮೀಕ್ಷೆ ಮಾಡಿ ಪರಿಹಾರ ವಿತರಣೆ ಮಾಡುವಂತೆ ಆಗ್ರಹಿಸಿದರು.

ನರಗುಂದ ತಾಲ್ಲೂಕಿನ ವಾಸನ ಗ್ರಾಮಕ್ಕೆ ಭಾರತೀಯ ಕಿಸಾನ ಜಿಲ್ಲಾ ಘಟಕದ ಮುಖಂಡ ಎಸ್.ಎಸ್‌.ಪಾಟೀಲ ಹಾಗೂ ತಾಲ್ಲೂಕು ಅಧ್ಯಕ್ಷ ಶಿವಾನಂದ ಗಾಳನ್ನವರ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿದರು.
ನರಗುಂದ ತಾಲ್ಲೂಕಿನ ವಾಸನ ಗ್ರಾಮಕ್ಕೆ ಭಾರತೀಯ ಕಿಸಾನ ಜಿಲ್ಲಾ ಘಟಕದ ಮುಖಂಡ ಎಸ್.ಎಸ್‌.ಪಾಟೀಲ ಹಾಗೂ ತಾಲ್ಲೂಕು ಅಧ್ಯಕ್ಷ ಶಿವಾನಂದ ಗಾಳನ್ನವರ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT