ಗಜೇಂದ್ರಗಡ: ತಾಲ್ಲೂಕಿನ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಸಾಗುವಳಿ ಚೀಟಿ ವಿತರಣೆಗೆ ಆಗ್ರಹಿಸಿ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಧರಣಿ ಬುಧವಾರ 3ನೇ ದಿನಕ್ಕೆ ಮುಂದುವರೆಯಿತು.

ಕಾರ್ಮಿಕ ಮುಖಂಡ ಬಾಲು ರಾಠೋಡ ಮಾತನಾಡಿ, ‘ರೈತರು ಎರಡು ದಿನಗಳಿಂದ ಧರಣಿ ನಡೆಸುತ್ತಿದ್ದರೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಖಂಡನೀಯ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವರೆಗೂ ಸುಮಾರು 15 ರೈತರು ಉಪವಾಸ ಮಾಡುತ್ತಿದ್ದು, ರೈತರಿಗೆ ಏನೇ ತೊಂದರೆಯಾದರೂ ನೇರವಾಗಿ ಅಧಿಕಾರಿಗಳು ಹೋಣೆಗಾರರಾಗುತ್ತಾರೆ’ ಎಂದರು.

ಧರಣಿ ಸ್ಥಳಕ್ಕೆ ಬುಧವಾರ ರೋಣ ತಹಶೀಲ್ದಾರ್ ನಾಗರಾಜ ಕೆ. ಅವರು ಭೇಟಿ ನೀಡಿ ರೈತರ ಮನವೋಲಿಸಲು ಪ್ರಯತ್ನಿಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವರೆಗೂ ಧರಣಿ ಮುಂದುವರೆಸುತ್ತವೆ ಎಂದು ರೈತರು ಪಟ್ಟು ಹಿಡಿದರು.

ರೈತ ಮುಖಂಡ ರೂಪಲೇಶ ಮಾಳೋತ್ತರ ಮಾತನಾಡಿದರು. ಈ ವೇಳೆ ರೂಪೇಶ್ ಮಾಳೋತ್ತರ, ಪೀರು ರಾಠೋಡ, ಚಂದ್ರು ರಾಠೋಡ, ಚನ್ನಪ್ಪ ಗೂಗಲೋತ್ತರ, ಗಣೇಶ ರಾಠೋಡ, ಮೆಹಬೂಬ ಹವಾಲ್ದಾರ್, ಗಂಗಮ್ಮ, ಶಾರವ್ವ ಲಮಾಣಿ, ಆನಂದ ರಾಠೋಡ, ಕನಕರಾಯ ಹಾದಿಮನಿ, ಅಭಿಲಾಷ್ ರಾಠೋಡ, ಗುರು ಶಾಂತಗೌಡರ, ಅನಿಲ ರಾಠೋಡ, ಶಿವಪ್ಪ ಮಾಳೋತ್ತರ ಲೋಕಪ್ಪ ರಾಠೋಡ, ಈರಪ್ಪ ರಾಠೋಡ, ವೀರಭದ್ರಪ್ಪ ಮಾಳೋತ್ತರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-23-552667261

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.