ಗಜೇಂದ್ರಗಡ: ‘ವ್ಯಕ್ತಿಗಿಂತ ಸಮಾಜ ದೊಡ್ಡದು. ನಾವು ಸಮಾಜಕ್ಕೆ ನೀಡುವ ಕೊಡುಗೆ ಹಾಗೂ ಬಡವರಿಗೆ ನೆರವು ನೀಡುವುದರಿಂದ ದೇವರ ಕೃಪೆಗೆ ಪ್ರಾತ್ರರಾಗುತ್ತೇವೆ. ಇದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ’ ಎಂದು ದೇವಾಂಗ ಸಮಾಜದ ಮುಖಂಡ ಡಾ.ಎಂ.ಎಸ್.ಕಡ್ಡಿ ಹೇಳಿದರು.

ಪಟ್ಟಣದ ಕೆಳಗಲ ಪೇಟೆ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಭಾನುವಾರ ದಿ.ಶಾಂತಮ್ಮ ಶಂಕ್ರಪ್ಪ ಕಡ್ಡಿ ಅವರ ಸ್ಮರಣಾರ್ಥವಾಗಿ ನೂತನವಾಗಿ ನಿರ್ಮಿಸಿರುವ ದೇವಾಂಗ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇವರು ನಮಗೆ ನೀಡಿದ ಸಂಪತ್ತಿನಲ್ಲಿ ಸ್ವಲ್ಪ ಭಾಗವನ್ನು ಧಾರ್ಮಿಕ ಕಾರ್ಯಗಳಿಗೆ ದಾನ, ಧರ್ಮ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ. ಹೀಗಾಗಿ ಎಲ್ಲರೂ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬೇಕು’ಎಂದರು.

ರಾಘವೇಂದ್ರ ಹೋಳಗಿ ಮಾತನಾಡಿ, ‘ಕಡ್ಡಿ ಕುಟುಂಬದವರು ಹಿಂದಿನಿಂದಲೂ ದೇವಾಂಗ ಸಮಾಜ ಹಾಗೂ ಬನಶಂಕರಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೂ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಇಂದು ತಮ್ಮ ಸ್ವಂತ ಖರ್ಚಿನಲ್ಲಿ ದೇವಾಂಗ ಭವನ ನಿರ್ಮಿಸಿದ್ದು, ಸಮಾಜದ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.

ದೇವಾಂಗ ಭವನದ ಉದ್ಘಾಟನೆ ಅಂಗವಾಗಿ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಭವನದಲ್ಲಿ ನವಗ್ರಹ, ವಾಸ್ತುಶಾಂತಿ, ಪಾರ್ವತಿ ಸ್ವಯಂವರ, ಗಣ ಹೋಮ ಹಾಗೂ ಹೋಮದ ಪೂರ್ಣಾಹುತಿ ಪೂಜಾ ಕೈಂಕರ್ಯಗಳು ನಡೆದವು.

ಗಜೇಂದ್ರಗಡದ ವಿವಿಧ ಸಮಾಜಗಳ ಅಧ್ಯಕ್ಷರಿಗೆ ಸನ್ಮಾನಿಸಲಾಯಿತು. ದೇವಾಂಗ ಭವನಕ್ಕೆ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಪಾಟೀಲ, ಮಾಜಿ ಸಚಿವ ಕಳಕಪ್ಪ ಬಂಡಿ ಭೇಟಿ ನೀಡಿ ಸನ್ಮಾನ ಸ್ವೀಕರಿಸಿದರು.

ಇದೇ ಸಂದರ್ಭದಲ್ಲಿ ದಶರಥಗೌಡ ಸಿನ್ನೂರ ಅವರು ತಮ್ಮ ಪತ್ನಿ ದಿ.ಶಾಂತಾಬಾಯಿ ಸಿನ್ನೂರ ಅವರ ಸ್ಮರಣಾರ್ಥವಾಗಿ ದೇವಸ್ಥಾನದಲ್ಲಿ ನಿತ್ಯ ದೀಪಾರಾಧನೆಗೆ ₹3.50 ಲಕ್ಷ ದೇಣಿಗೆ ನೀಡಿದರು.

ಸಮಾಜದ ಅಧ್ಯಕ್ಷ ಸಂಕಣ್ಣ ಎಸ್.ಕಡ್ಡಿ, ಮುಖಂಡರಾದ ಪರಣ್ಣ ಕಡ್ಡಿ, ಶ್ರೀಧರ ಬಿದರಳ್ಳಿ, ಎನ್.ಡಿ.ಸಿನ್ನೂರ, ಶ್ರೀಧರ ಗಂಜಿಗೌಡ್ರ, ಎಸ್.ಜಿ.ಹಾದಿಮನಿ, ಅಶೋಕ ಕೊಳ್ಳಿ, ಪುಂಡಲಿಕ ಕಡ್ಡಿ, ಮಂಜುನಾಥ ಚಳ್ಳಮರದ, ಮಲ್ಲಿಕಾರ್ಜುನ ಇಂಜನಿ, ನಾರಾಯಣ ಪಪ್ತಿ, ಕೃಷ್ಣಾ ಹೋಳಗಿ, ಪ್ರಕಾಶ ಕೋಟಿ ಸೇರಿದಂತೆ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-23-1422455133

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.