ಗಜೇಂದ್ರಗಡ: ಸಮೀಪದ ಬೆಣಸಮಟ್ಟಿ ಗ್ರಾಮದ ಪ್ರಗತಿಪರ ರೈತ ಮಹಾಂತೇಶ ಪೂಜಾರ ತೋಟಗಾರಿಕೆ ಬೆಳೆ, ರೇಷ್ಮೆ ಜೊತೆಗೆ ಸಾಂಪ್ರದಾಯಿಕ ಬೆಳೆಗಳಲ್ಲಿ ಯಶ ಕಂಡು ಆರ್ಥಿಕ ಲಾಭ ಗಳಿಸುವುದದರ ಮೂಲಕ ಸಮಗ್ರ ಕೃಷಿ ಪದ್ದತಿಯಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ.

ಮಹಾಂತೇಶ ಪೂಜಾರ ಅವರು ತಮ್ಮ ಒಟ್ಟು 13 ಎಕರೆ ಜಮೀನಿನಲ್ಲಿ 2 ಕೊಳವೆಬಾವಿಗಳಿಂದ ಸಿಗುವ 3 ಇಂಚು ನೀರಿನಲ್ಲಿ 4 ಎಕರೆ ರೇಷ್ಮೆ, 3 ಎಕರೆ ಪಪ್ಪಾಯ, ಉಳಿದ ಜಮೀನಿನಲ್ಲಿ ಸಾಂಪ್ರದಾಯಿಕ ಬೆಳೆ ಬೆಳೆಯುತ್ತಿದ್ದಾರೆ.

ಮಹಾಂತೇಶ ಅವರಿಗೆ ಅಣ್ಣನ ಮಕ್ಕಳು ಕೃಷಿ ಕಾಯಕದಲ್ಲಿ ಸಹಾಯ ಮಾಡುತ್ತಿದ್ದಾರೆ. 45 ದಿನಗಳ ರೇಷ್ಮೆ ಕೃಷಿಯಲ್ಲಿ 250-260 ಲಿಂಕ್ಸ್ ರೇಷ್ಮೆ ಮರಿಗಳ ಆರೈಕೆಯಿಂದ ಪ್ರತಿ ಬೆಳೆಗೆ ಸುಮಾರು 2.30 ಕ್ವಿಂಟಲ್ ರೇಷ್ಮೆ ಗೂಡು ಉತ್ಪಾದಿಸುತ್ತಿದ್ದಾರೆ. ರೇಷ್ಮೆ ಗೂಡನ್ನು ರಾಮನಗರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಬೆಳೆಗೆ ಖರ್ಚು ಕಳೆದು ₹1.50 ಲಕ್ಷ ಲಾಭ ಗಳಿಸುತ್ತಿದ್ದು, ವರ್ಷಕ್ಕೆ ನಾಲ್ಕು ರೇಷ್ಮೆ ಫಸಲು ಪಡೆಯುತ್ತಿದ್ದಾರೆ. ಪಪ್ಪಾಯ ಬೆಳೆಯಿಂದಲೂ ಫಸಲು ಬರುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿ ದರ ಕಡಿಮೆಯಿರುವುದರಿಂದ ಲಾಭ ಲಭಿಸುತ್ತಿಲ್ಲ. ಅಲ್ಲದೆ ತೋಟದಲ್ಲಿ 30ಕ್ಕೂ ಹೆಚ್ಚು ಕೋಳಿ, 4-5 ಟಗರು ಸಾಕಣೆ ಮಾಡುತ್ತಿದ್ದಾರೆ. ಸಮಗ್ರ ಕೃಷಿ ಪದ್ದತಿಯಿಂದ ವಾರ್ಷಿಕವಾಗಿ ₹10 ಲಕ್ಷ ಲಾಭ ಗಳಿಸುತ್ತಿದ್ದಾರೆ.

ಬೆಳಿಗ್ಗೆ ಮತ್ತು ಸಂಜೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳುವ ಮಹಾಂತೇಶ ಅವರು ಬಳಿಕ ಗಜೇಂದ್ರಗಡ ಎಪಿಎಂಸಿಯಲ್ಲಿ ನೇತ್ರಾವತಿ ಟ್ರೇಡರ್ಸ್ ದಲ್ಲಾಳಿ ಅಂಗಡಿ ನಡೆಸುತ್ತಿದ್ದಾರೆ. ಅವರಿಗೆ 2024-25ರ ಸಾಲಿನ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಲಭಿಸಿದೆ.

ಮಹಾಂತೇಶ ಅವರ ಅಣ್ಣ ಷಣ್ಮುಖಪ್ಪ ಕೇಶಪ್ಪ ಪೂಜಾರ ವೃತ್ತಿಯಲ್ಲಿ ಪ್ರೌಢಶಾಲೆ ಶಿಕ್ಷಕರಾಗಿದ್ದು, ರಜಾ ದಿನಗಳಲ್ಲಿ ಕೃಷಿ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ. ಅವರ ಇಬ್ಬರು ಮಕ್ಕಳು ಬಿಎಸ್ಸಿ ಅಗ್ರಿ ಓದುತ್ತಿದ್ದಾರೆ. ಮಹಾಂತೇಶ ಅವರ ಮಗಳು ಬಿಎಎಂಎಸ್ ಓದುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-23-2028910350

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.