ಗಜೇಂದ್ರಗಡ: ಸಮೀಪದ ನೆಲ್ಲೂರ ಗ್ರಾಮದ ಖಾನಪ್ಪಗೌಡ ಚನ್ನಪ್ಪಗೌಡ ಪಾಟೀಲ ತಮ್ಮ 2.5 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿಯಲ್ಲಿ ಯಶಸ್ಸಿನಿ ಜೊತೆಗೆ ನೆಮ್ಮದಿ ಬದುಕು ಕಂಡುಕೊಂಡಿದ್ದಾರೆ.

ಖಾನಪ್ಪಗೌಡ ಪಾಟೀಲ ಅವರು ಎಂ.ಎ, ಬಿ.ಎಡ್. ಪದವೀಧರಾಗಿದ್ದು, ಬಳ್ಳಾರಿ ಜಿಲ್ಲೆಯ ಶಿರಗುಪ್ಪಾ ತಾಲ್ಲೂಕಿನ ಹೊನ್ನರಹಳ್ಳಿ ಪ್ರೌಢಶಾಲೆಯಲ್ಲಿ 10 ವರ್ಷಗಳ ಕಾಲ ಸಮಾಜ ವಿಜ್ಞಾನ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಆ ಶಾಲೆ ಬಂದ್ ಆಗಿದ್ದರಿಂದ ಬೇರೆ ಕಡೆ ಕೆಲಸಕ್ಕೆ ಅವಕಾಶಗಳು ಬಂದಿದ್ದರೂ ತಿರಸ್ಕರಿಸಿ, ಸ್ವಗ್ರಾಮದಲ್ಲಿ ಕೃಷಿ ಮಾಡುವ ಹಂಬಲದಿಂದ ಗ್ರಾಮಕ್ಕೆ ಮರಳಿದರು.

ತಮ್ಮ 2.5 ಎಕರೆ ಜಮೀನಿನಲ್ಲಿ ಒಂದು ಕೊಳವೆ ಬಾವಿಯಿಂದ ಸಿಗುವ 2 ಇಂಚು ನೀರಿನಿಂದ, 1 ಎಕರೆಯಲ್ಲಿ ಕಳೆದ 5 ವರ್ಷಗಳಿಂದ ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ಉಳಿದ 1.5 ಎಕರೆ ಜಮೀನು ಹಾಗೂ ಲಾವಣಿಗೆ ಪಡೆದ 1.5 ಎಕರೆ ಜಮೀನು ಸೇರಿ ಒಟ್ಟು 3 ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದಾರೆ.

ಇದರ ಜೊತೆಗೆ ಹೈನುಗಾರಿಕೆ, ಟಗರು ಸಾಕಾಣಿಕೆ ಮಾಡುತ್ತಿದ್ದಾರೆ. 2 ಆಕಳುಗಳಿಂದ ಪ್ರತಿದಿನ 10 ಲೀ. ಹಾಲು ಡೈರಿಗೆ ಹಾಕುತ್ತಿದ್ದಾರೆ. ರೇಷ್ಮೆ ಕೃಷಿಯಲ್ಲಿ ವರ್ಷಕ್ಕೆ 5 ಫಸಲು ಪಡೆಯುತ್ತಿದ್ದು, ಪ್ರತಿ ಫಸಲಿಗೆ ಎಲ್ಲ ಖರ್ಚು ಕಳೆದು ₹40 ಸಾವಿರ ನಿವ್ವಳ ಲಾಭ ಗಳಿಸುತ್ತಿದ್ದಾರೆ, ವರ್ಷಕ್ಕೆ ₹1ಲಕ್ಷದಿಂದ ₹2 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಇವರ ಪತ್ನಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಕೆಲಸ ಮಾಡುವುದರ ಜೊತೆಗೆ ಕೃಷಿ ಕಾಯಕದಲ್ಲಿ ಸಹಾಯ ಮಾಡುತ್ತಿದ್ದಾರೆ.

‘ಬೆಳಗಿನಿಂದ ಸಂಜೆವರೆಗೆ ಕೃಷಿ ಕಾಯಕ ಮಾಡಿ, ಸಂಜೆ ಗಜೇಂದ್ರಗಡದಲ್ಲಿ ಗವಿಶ್ರೀ ಫೈನಾನ್ಸ್ನಲ್ಲಿ ಪಿಗ್ಮೀ ಏಜಂಟ್ ಆಗಿ ಕೆಲಸ ಮಾಡುತ್ತಿದ್ದೇನೆ. ಕೃಷಿ ಮನುಷ್ಯನನ್ನು ಚಟುವಟಿಕೆಯಿಂದ ಇಡುವುದರ ಜೊತೆಗೆ ಆರೋಗ್ಯ, ನೆಮ್ಮದಿ ನೀಡುತ್ತದೆ. ಹೀಗಾಗಿ ನಾನು ಕೃಷಿ ಕಾಯಕ ಆಯ್ದುಕೊಂಡಿದ್ದೇನೆ. ಆಸಕ್ತಿ, ಪರಿಶ್ರಮದಿಂದ ಕೃಷಿ ಮಾಡಿದರೆ ಲಾಭದ ಜೊತೆಗೆ ಖುಷಿ ಸಿಗುತ್ತದೆ’ ಎನ್ನುತ್ತಾರೆ ರೈತರಾದ ಖಾನಪ್ಪಗೌಡ ಪಾಟೀಲ.

ಸಾವಯವ ಕೃಷಿ ಮಾಡುತ್ತಿದ್ದು, ಕೃಷಿಗೆ ಪೂರಕವಾಗುವ ಹೈನುಗಾರಿಕೆ, ಟಗರು ಸಾಕಾಣಿಕೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಟಗರು ಸಾಕಾಣಿಕೆ ದೊಡ್ಡ ಪ್ರಮಾಣದಲ್ಲಿ ಮಾಡುವ ಯೋಜನೆ ಹೊಂದಿದ್ದೇನೆ
ಖಾನಪ್ಪಗೌಡ ಪಾಟೀಲ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.