ಗಜೇಂದ್ರಗಡ: ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ತಾಪಕ್ಕೆ ಜನ ತತ್ತರಿಸಿದ್ದು, ತಾಪ ತಣಿಸಿಕೊಳ್ಳಲು ಎಳನೀರು, ಕಲ್ಲಂಗಡಿ ಹಣ್ಣು, ಕಬ್ಬಿನಹಾಲು ಮತ್ತು ತಂಪು ಪಾನಿಯಗಳ ಮೊರೆ ಹೋಗುತ್ತಿದ್ದಾರೆ.

ಬಿಸಿಲಿನ ಪ್ರಖರತೆ ಹೆಚ್ಚಿರುವುದರಿಂದ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಮಧ್ಯಾಹ್ನ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ರಾತ್ರಿ ವೇಳೆ ಫ್ಯಾನ್, ಕೂಲರ್ ಇಲ್ಲದೇ ಮಲಗುವುದು ಕಷ್ಟವಾಗಿದೆ. ಅಲ್ಲದೇ ಕೆಲವರು ರಾತ್ರಿ ಮನೆಯ ಮಾಳಿಗೆ ಮೇಲೆ ಮಲಗುತ್ತಿದ್ದಾರೆ.

ಪಟ್ಟಣದ ರೋಣ ರಸ್ತೆ, ಕುಷ್ಟಗಿ ರಸ್ತೆ, ಜೋಡು ರಸ್ತೆ, ಕಾಲಕಾಲೇಶ್ವರ ವೃತ್ತಗಳಲ್ಲಿರುವ ಕಬ್ಬಿನ ಹಾಲು, ಎಳನೀರು, ಹಣ್ಣುಗಳ ಅಂಗಡಿಗಳ ಜೊತೆಗೆ ತಂಪು ಪಾನಿಯ ಮಾರುವ ಅಂಗಡಿಗಳಲ್ಲೂ ವ್ಯಾಪಾರ ಹೆಚ್ಚಾಗಿದೆ. ಪಟ್ಟಣಕ್ಕೆ ಬರುವ ಜನರು ತಮ್ಮ ವಾಹನಗಳನ್ನು ನಿಲುಗಡೆ ಮಾಡಲು ನೆರಳು ಇರುವ ಜಾಗ ಹುಡುಕುವುದು ಸಾಮಾನ್ಯವಾಗಿದ್ದು, ಸುತ್ತಲಿನ ಗ್ರಾಮಗಳ ಜನರು ಅಗತ್ಯ ವಸ್ತುಗಳ ಖರಿದಿಗೆ ಹಾಗೂ ಮಂಗಳವಾರದ ಸಂತೆಗೆ ಬೆಳಿಗ್ಗೆ ಅಥವಾ ಸಂಜೆ ಬರುತ್ತಿದ್ದಾರೆ. ಅಲ್ಲದೇ ಬಿಸಿಲಿನ ತಾಪಕ್ಕೆ ಜನರು ಜ್ವರ, ಕೆಮ್ಮು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

‘ಬೇಸಿಗೆ ಕಾಲದಲ್ಲಿ ಜನರು ಕಲುಷಿತ ನೀರು ಕುಡಿಯುವುದರಿಂದ ಸಾಮಾನ್ಯವಾಗಿ ವೈರಾಣು ಸೋಂಕು, ನೆಗಡಿ, ಕೆಮ್ಮು, ಜ್ವರ, ವಾಂತಿ, ಭೇದಿ ಕಾಯಿಲೆಗಳಿಗೆ ಬರುತ್ತವೆ. ಬಿಸಿಲಿನ ತಾಪಕ್ಕೆ ನಿರ್ಜಲೀಕರಣ ಸಮಸ್ಯೆ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಇವುಗಳಿಂದ ತಪ್ಪಿಸಿಕೊಳ್ಳಲು ಶುದ್ಧ ನೀರು ಕುಡಿಯುವುದು ಅವಶ್ಯಕ. ಸಾಧ್ಯವಾದಷ್ಟು ಎಲ್ಲ ಕೆಲಸಗಳನ್ನು ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಮಾಡುವುದು ಉತ್ತಮ. ಹೆಚ್ಚು ನೀರಿನ ಅಂಶ ಹೊಂದಿರುವ ನೈಸರ್ಗಿಕ ಶುದ್ಧ ಹಣ್ಣುಗಳನ್ನು ತಿನ್ನುವುದರ ಜೊತೆಗೆ ಎಳನೀರು ಹೆಚ್ಚಾಗಿ ಸೇವಿಸಬೇಕು’ ಎಂದು ಗಜೇಂದ್ರಗಡ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಅನಿಲಕುಮಾರ ತೋಟದ ಸಲಹೆ ನೀಡಿದರು.

‘ಈ ರಣ ರಣ ಬಿಸಿಲಿನ್ಯಾಗ ತಂಪಂದು ಎಷ್ಟು ತಿಂದ್ರು, ಕುಡಿದ್ರೂ ಸಮಾಧಾನ ಆಗವಲ್ದಾಗೈತಿ. ಗಡಾಕ ಸೆಂತಿಗೆ ಬಂದಿದ್ವಿ. ಹಿಂಗಾಗಿ ಹೊಟ್ಟಿ ತಣ್ಣಗಾಗುತ್ತಂತ ಹಣ್ಣು ತಿನ್ನಾಕತ್ತೀವಿ ಎಂದು ಹಳ್ಳಿಗಳಿಂದ ಗಜೇಂದ್ರಗಡಕ್ಕೆ ಬಂದಿದ್ದ ಯಮನಪ್ಪ, ರೇಣುಕಪ್ಪ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-23-1568935761

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.