ಗಜೇಂದ್ರಗಡ: ‘ರಾಜ್ಯ ಸರ್ಕಾರ ಆರಂಭಿಸಿದ ಸ್ಮಾರಕಗಳ ದತ್ತು ಯೋಜನೆ ಅಡಿಯಲ್ಲಿ ಡೆಕ್ಕನ್ ಹರಿಟೇಜ್ ಫೌಂಡೇಷನ್ ಕಲಾತ್ಮಕ ಕೆತ್ತನೆ ಕುಸುರಿ ಹೊಂದಿರುವ ಸೂಡಿಯ ನಾಗಕುಂಡ ಬಾವಿ ದತ್ತು ಪಡೆದು ಅಭಿವೃದ್ಧಿ ಮಾಡಿರುವುದು ಶ್ಲಾಘನೀಯ’ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಸಮೀಪದ ಸೂಡಿ ಗ್ರಾಮದಲ್ಲಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರ, ಪ್ರವಾಸೋದ್ಯಮ ಇಲಾಖೆ, ಡೆಕ್ಕನ್ ಹರಿಟೇಜ್ ಫೌಂಡೇಷನ್ ಸಹಯೋಗದಲ್ಲಿ ಸೋಮವಾರ ಸ್ಮಾರಕ ದತ್ತು ಯೋಜನೆಯಡಿ ನಾಗಕುಂಡ ಬಾವಿ ಸಂರಕ್ಷಣೆ ಹಾಗೂ ಅಭಿವೃದ್ಧಿ ಕಾಮಗಾರಿ ಲೋಕಾರ್ಪಣೆ ಹಾಗೂ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಗದಗ ಮತ್ತು ಲಕ್ಕುಂಡಿ ಪ್ರದೇಶದ ಕಲ್ಯಾಣ ಚಾಲುಕ್ಯರ ವಾಸ್ತು ಶಿಲ್ಪ ವೈಭವ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ಪೂರ್ವಜರ ಕಲೆ, ಸಂಸ್ಕೃತಿ ಪ್ರತಿಕವಾಗಿರುವ ಸ್ಮಾರಕಗಳು ಅನೈತಿಕ ಚಟುವಟಿಕೆಗಳ ತಾಣಗಳಾಗಿರುವುದು ಬೇಸರ ಮೂಡಿಸುತ್ತದೆ. ಅವುಗಳನ್ನು ಉಳಿಸಿ ಸಂರಕ್ಷಣೆ ಮಾಡಬೇಕೆನ್ನುವ ಮನಸ್ಥಿತಿ ಬರಬೇಕಿದೆ. ರಾಜ್ಯದಲ್ಲಿ ನಮ್ಮ ಪೂರ್ವಜರ ಕುರುಹುಗಳಾಗಿರುವ 25 ಸಾವಿರ ಸ್ಮಾರಕಗಳಿವೆ. ಅವುಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಸ್ಮಾರಕಗಳ ದತ್ತು ಯೋಜನೆ ಆರಂಭಿಸಲಾಗಿದ್ದು, ಈ ಅಮೂಲ್ಯವಾದ ಐತಿಹಾಸಿಕ ಸಂಪತ್ತನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ’ಎಂದರು.

ರೋಣ ಶಾಸಕ ಜಿ.ಎಸ್.ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಡೆಕ್ಕನ್ ಹೆರಿಟೇಜ್ ಫೌಂಡೇಷನ್ ಪ್ರತಿನಿಧಿಗಳು, ಸಿದ್ದಪ್ಪ ಬಂಡಿ, ವೀರಣ್ಣ ಶಟ್ಟರ್, ಮಿಥುನ್ ಪಾಟೀಲ, ಸಂಗಮೇಶ ಅಬ್ಬಿಗೇರಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-23-1283722722

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.